Actor Prabhas's 'The Raja Saab' is a huge hit for Sankranti festival

ನಟ ಪ್ರಭಾಸ್ ಅಭಿನಯದ ಸಂಕ್ರಾಂತಿ ಹಬ್ಬಕ್ಕೆ ‘ದಿ ರಾಜಾ ಸಾಬ್’ ಅಬ್ಬರ - CineNewsKannada.com

ನಟ ಪ್ರಭಾಸ್ ಅಭಿನಯದ ಸಂಕ್ರಾಂತಿ ಹಬ್ಬಕ್ಕೆ ‘ದಿ ರಾಜಾ ಸಾಬ್’ ಅಬ್ಬರ

ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ‌ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ‌ ನಡೆಯಿತು

ನಟ ರೆಬೆಲ್ ಸ್ಟಾರ್ ಪ್ರಭಾಸ್ ಮಾತನಾಡಿ, “ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆ ನೀಡುವ ಉದ್ದೇಶದಿಂದ ಸಿನಿಮಾ ಮಾಡಿದ್ದೇವೆ. ನಿರ್ದೇಶಕ ಮಾರುತಿ ಬರವಣಿಗೆಗೆ ಕ್ಲೈಮ್ಯಾಕ್ಸ್ ನೋಡಿ ಅಭಿಮಾನಿಯಾದೆ. ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಎಲ್ಲಾ ಸಿನಿಮಾಗಳು ಯಶಸ್ವಿಯಾಗಲಿ, ಅದರ ಜೊತೆಗೆ ‘ದಿ ರಾಜಾ ಸಾಬ್’ ಕೂಡ ಬ್ಲಾಕ್‌ಬಸ್ಟರ್ ಆಗಲಿ” ಎಂದು ಆಶಿಸಿದರು.

ನಿರ್ದೇಶಕ ಮಾರುತಿ ಮಾತನಾಡಿ 11 ಸಿನಿಮಾಗಳನ್ನು ಮಾಡಿದ್ದೇನೆ, ಆದರೆ ಪ್ರಭಾಸ್ ನನಗೆ ‘ರೆಬೆಲ್ ಯೂನಿವರ್ಸಿಟಿ’ಯಲ್ಲಿ ದೊಡ್ಡ ಮಟ್ಟದ ಅವಕಾಶ ನೀಡಿದ್ದಾರೆ. ಈ ಸಿನಿಮಾದ ಎಮೋಷನಲ್ ದೃಶ್ಯಗಳನ್ನು ನೋಡುವಾಗ ನನ್ನ ಕಣ್ಣಲ್ಲೇ ನೀರು ಬಂದಿದೆ. ಸಿನಿಮಾ ನಿಮ್ಮನ್ನು ನಿರಾಸೆಗೊಳಿಸಿದರೆ ನನ್ನ ಮನೆ ವಿಳಾಸ ಕೊಡುತ್ತೇನೆ, ಅಲ್ಲಿಗೆ ಬಂದು ಕೇಳಿ” ಎಂದು ಸವಾಲಿನೊಂದಿಗೆ ಭರವಸೆ ನೀಡಿದರು.

ನಿರ್ಮಾಪಕ ಟಿ.ಜಿ. ವಿಶ್ವ ಪ್ರಸಾದ್ ಮಾತನಾಡಿ, ಹಾರರ್-ಫ್ಯಾಂಟಸಿ ಜಾನರ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಇದೊಂದು ಮಾದರಿ ಚಿತ್ರವಾಗಲಿದೆ” ಎಂದರು.

ನಟ ಸಪ್ತಗಿರಿ ಮಾತನಾಡಿ, “ಸಲಾರ್ ಸಿನಿಮಾ 2000 ಕೋಟಿ ಗಳಿಸುತ್ತದೆ ಎಂದು ಮೊದಲೇ ಹೇಳಿದ್ದೆ. ಈಗ ‘ದಿ ರಾಜಾ ಸಾಬ್’ ಟ್ರೈಲರ್ ನೋಡಿದ್ದೇನೆ, ಇದು ಕೂಡ ಖಂಡಿತವಾಗಿ 2000 ಕೋಟಿ ಕ್ಲಬ್ ಸೇರಲಿದೆ ಎಂದು ಭವಿಷ್ಯ ನುಡಿದರು

ನಾಯಕಿ ಮಾಳವಿಕಾ ಮೋಹನನ್ ಮಾತನಾಡಿ, “ಟಾಲಿವುಡ್‌ಗೆ ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ಜೊತೆ ಎಂಟ್ರಿ ಕೊಡುತ್ತಿರುವುದು ಸೌಭಾಗ್ಯ.ಹಾಡು-ನೃತ್ಯವಷ್ಟೇ ಅಲ್ಲದೆ, ನನಗೆ ಆಕ್ಷನ್ ಮತ್ತು ಕಾಮಿಡಿ ಮಾಡುವ ಅವಕಾಶವನ್ನೂ ಮಾರುತಿ ಅವರು ನೀಡಿದ್ದಾರೆ” ಎಂದರು.

ಪ್ರಭಾಸ್ ಜೊತೆಗೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಹಿರಿಯ ನಟಿ ಜರೀನಾ ವಹಾಬ್ ಪ್ರಭಾಸ್ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಜಯ್ ದತ್ ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಥಮನ್ ಸಂಗೀತ ಮತ್ತು ಕಾರ್ತಿಕ್ ಪಳನಿ ಛಾಯಾಗ್ರಹಣ ಚಿತ್ರಕ್ಕಿದೆ.ಜನವರಿ 9 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin