ನಟ ರಾಜ್ ಶೆಟ್ಟಿ ನಟನೆಯ ರಕ್ಕಸಪುರದೋಳ್’ ಪೆಬ್ರವರಿ 6 ರಂದು ಬಿಡುಗಡೆ
“ಸು ಫ್ರಮ್ ಸೋ” ಮತ್ತು ” 45″ ಚಿತ್ರದ ಯಶಸ್ಸಿನಲ್ಲಿರುವ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್‌ಲಾರ್ಡ್ ಇನ್ನೆನೂ ಮುಂದಿನ ಜನವರಿಗೆ ಬಿಡುಗಡೆಯಾಗುತ್ತಿದೆ. ಈ ನಡುವೆ ಬಹುನಿರೀಕ್ಷಿತ “ರಕ್ಕಸಪುರದೊಳ್ ” ಚಿತ್ರದ ಟೀಲರ್ ಬಿಡುಗಡೆಯಾಗಿದೆ

ಜೋಗಿ ಪ್ರೇಮ್ ಅಪ್ಪಟ ಶಿಷ್ಯ ಬಹಕಾಲಗ ಆಪ್ತ ಸಾಕಷ್ಟು ಕಾಲ ಕೆಲಸ ಮಾಡಿರುವ ರವಿ ಸಾರಂಗ ಆಕ್ಷನ್ ಕಟ್ ಹೇಳ್ತಿದ್ದಾರೆ.. ಕೊಳ್ಳೇಗಾಲದ ಕಥೆ ಆಧರಿಸಿದ ಕ್ರೈಮ್ ಥ್ರಿಲ್ಲರ್ ಸ್ಟೋರಿ ಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳಿರಲಿವೆ.ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು, ಆ ಕತ್ತಲೆಯೇ ರಕ್ಕಸ ಮುಖ್ಯ ಪಾತ್ರ ತನ್ನ ಆಂತರಿಕ ಹೋರಾಟಗಳನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.

ಪ್ರಕೃತಿ ಮಡಿಲಲ್ಲಿರುವ ಊರಿನ ಮೂಲಕ ಟೀಸರ್ ಸ್ಟಾರ್ಟ್ ಆಗುತ್ತೆ. ಆನಂತರ ಸಾವು ನೋವು ಮಾಟ ಮಂತ್ರದ ಕತೆ ಹೇಳಿರುವ ರೀತಿ ಭಾಸವಾಗುತ್ತೆ. ಅಲ್ಲಿಗೆ ರಾಜ್ ಇವಿಲ್ ಐ ಮೂಲಕ ಪಾತ್ರದ ಪರಿಚಯ ಮಾಡ್ತಾರೆ.. ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಕುತೂಹಲ ಕೆರಳಿಸಿದೆ.
ರಕ್ಕಸಪುರದೊಳ್ ಬಿಡುಗಡೆಗೆ ರೆಡಿಯಾಗಿದ್ದು ಬಹುನಿರೀಕ್ಷಿತ ಚಿತ್ರ 2026 ಫೆಬ್ರವರಿ 6ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ..

