Interview: ” ಶ್ರೀ ಜಗನ್ಮಾತೆ ಅಕ್ಕ ಮಹಾದೇವಿ ; ಸಂಗೀತಮಯ ಚಿತ್ರ- ನಿರ್ದೇಶಕ ವಿಷ್ಣು ಕಾಂತ್
ಕನ್ನಡದ ಮೊಟ್ಟ ಮೊದಲ ವಚನಕಾರ್ತಿ, ಕವಯತ್ರಿ ಹೆಣ್ಣುಮಕ್ಕಳ ಶಿಕ್ಷಣ ಕೊಡಿಸಲು ಹೋರಾಟ ಮಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾದ ಅಕ್ಕ ಮಹಾದೇವಿ ಅವರ ಹುಟ್ಟಿನಿಂದ ಸಾವಿನ ತನಕದ ಕಥೆಯನ್ನು ನಿರ್ದೇಶಕ,ನಿರ್ಮಾಪಕ ವಿಷ್ಣುಕಾಂತ್ ಅವರು ” ಶ್ದೀ ಜಗನ್ಮಾತೆ ಅಕ್ಕಮಹಾದೇವಿ” ಚಿತ್ರದ ಮೂಲಕ ಪ್ರೇಕ್ಷಕರ ಮುಂದಿಡಿಡುತ್ತಿದ್ದಾರೆ

ಚಿತ್ರ ಜನವರಿ 2 ರಂದು ರಾಜ್ಯದ ಜೊತೆಗೆ ಹೊರರಾಜ್ಯದಲ್ಲಿಯೂ ಬಿಡುಗಡೆಯಾಗುತ್ತಿದ್ದು ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಹೊಸ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುತ್ತಿದ್ದು ಅಭಿಮಾನಿಗಳು ಚಿತ್ರ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.
ಮನಸುಗಳ ಮಾತು ಮಧುರ, ಡಾ.ಅಂಬೇಡ್ಕರ್, ಗಂಗಾಕಾವೇರಿ, ಕಲ್ಯಾಣಕುವರ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಿರಿಯ ತಂತ್ರಜ್ಞ *ವಿಷ್ಣುಕಾಂತ್.ಬಿ.ಜೆ ನಿರ್ಮಾಣ ಹಾಗು ಆಕ್ಷನ್ ಕಟ್ ಹೇಳುವ ಜತೆಗೆ ಮಹತ್ವದ ಪಾತ್ರಕ್ಕೆ* ಬಣ್ಣ ಹಚ್ಚಿದ್ದಾರೆ . ಈ ಕುರಿತು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಶ್ರೀ ಜಗನ್ಮಾತೆ ಅಕ್ಕ ಮಹಾದೇವಿ ಚಿತ್ರದ ವಿಶೇಷತೆ ಬಗ್ಗೆ ಮಾಹಿತಿ ನೀಡುವುದಾದರೆ
ವಚನಕಾರ್ತಿ, ಕವಯತ್ರಿ ಅಕ್ಕ ಮಹಾದೇವಿ ಅವರ ಹುಟ್ಟಿನಿಂದ ಸಾವಿನ ತನಕದ ಕಥೆಯನ್ನು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಇಡಲಾಗುತ್ತಿದೆ. ಚಿತ್ರಕ್ಕೆ ಅಕ್ಕ ಮಹಾದೇವಿ ಅವರ ವಚನಗಳೇ ಮೂಲ ಆಧಾರ. ಚಿತ್ರದಲ್ಲಿ 22 ವಚನಗಳನ್ನು ಬಳಸಿಕೊಳ್ಳಲಾಗಿದೆ. ಇದೊಂದು ಸಂಗೀತಮಯ ಚಿತ್ರ. ಎಲ್ಲರಿಗೂ ಇಷ್ಟವಾಗಲಿದೆ.
* ಚಿತ್ರವನ್ನು ಎಲ್ಲೆಲ್ಲಿ ಚಿತ್ರೀಕರಣ ಮಾಡಿದ್ದೀರಿ..ಯಾವಾಗ ಬಿಡುಗಡೆ
ಶ್ರೀ ಜಗನ್ಮಾತೆ ಅಕ್ಕ ಮಹಾದೇವಿ ಚಿತ್ರವನ್ನು ಬೀದರ್, ಕಲಬುರಗಿ, ಶ್ರೀಶೈಲ ಸೇರಿದಂತೆ ಮತ್ತಿತರ ಕಡೆ ಚಿತ್ರವನ್ನು 45 ರಿಂದ 50 ದಿನಗಳ ಕಾಲ ಬಹುತೇಕ ರಾತ್ರಿಯ ವೇಳೆ ಚಿತ್ರೀಕರಣ ಮಾಡಲಾಗಿದೆ. ಜನವರಿ 2 ರಂದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಈ ಮೂಲಕ ಹೊಸ ವರ್ಷದ ಆರಂಭದಲ್ಲಿ ಹೊಸತನದ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡಲಾಗುತ್ತಿದ್ದು ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರವನ್ನು ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೀರಾ.. ಹೊರ ರಾಜ್ಯದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆಯಾ..
ಹೌದು. ಕರ್ನಾಟಕದ ಜೊತೆಗೆ ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿ ಭಾಗದಲ್ಲಿ ಕನ್ನಡದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ . ಜೊತೆಗೆ ರಾಜ್ಯದಲ್ಲಿ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಶುಕ್ರವಾರದ ವೇಳೆಗೆ ಮತ್ತಷ್ಟು ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬಹುದು ಎಂದರು.
* ನಿರ್ಮಾಣ,ನಿರ್ದೇಶನ ಮಾಡುವ ಜೊತೆಗೆ ಚಿತ್ರದಲ್ಲಿ ನಟಿಸಿದ್ದೀರಿ..ನೀವು ಮಾಡಿದ ಪಾತ್ರ ಏನು
ಚಿತ್ರದಲ್ಲಿ ಕೌಶಿಕ್ ಮಹಾರಾಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ವಿಲನ್ ಶೇಡ್ ಇದೆ.ನನ್ನ ಪಾತ್ರದ ಚಿತ್ರೀಕರಣವನ್ನು ಸುಮಾರು ದಿನಗಳ ಕಾಲ ಮಾಡಲಾಗಿದೆ. ಚಿತ್ರಕ್ಕೆ ಪೂರಕವಾದ ಮತ್ತು ಪ್ರಮುಖವಾದ ಪಾತ್ರ.ಚಿತ್ರ ನೋಡಿದ ಎಲ್ಲರಿಗೂ ಇಷ್ಟವಾಗಲಿದೆ.

ಚಿತ್ರದಲ್ಲಿ ಯಾವೆಲ್ಲಾ ಅಂಶಗಳಿವೆ.. ಪ್ರೇಕ್ಷಕರ ಯಾವ ಕಾರಣದಿಂದ ಚಿತ್ರಮಂದಿರಕ್ಕೆ ಬರಬೇಕು
ಚಿತ್ರದಲ್ಲಿ ಕಾಮಿಡಿಯ ಜೊತೆಗೆ ಸಮಾಜ ಪರಿವರ್ತನೆ ಹಾಗು ಸಮಾಜ ಮುಖಿ ಅಂಶಗಳು ಚಿತ್ರದಲ್ಲಿವೆ.ಮಹಾರಾಜನ ಡುಯಟ್ ಕೂಡ ಚಿತ್ರದಲ್ಲಿದೆ.ಎಲ್ಲದಕ್ಕಿಂತ ಹೆಚ್ಚಾಗಿ ಸಂಗೀತ ಮಯ ಚಿತ್ರ. ಕನ್ನಡದ ಮೊದಲ ಕವಯತ್ರಿ, ಹೋರಾಟಗಾರ್ತಿ , ದಿಟ್ಟ ಮಹಿಳೆ ಅಕ್ಕಮಹಾದೇವಿ ಅವರ ಜೀವನದ ಕಥೆಯನ್ನು ಚಿತ್ರರೂಪದಲ್ಲಿ ತರಲಾಗಿದೆ.ಹೆಣ್ಣುಮಕ್ಕಳಿಗೆ ಶಿಕ್ಷಣವಿಲ್ಲದ ಸಮಯದಲ್ಲಿ ಮಹಾರಾಜ ಮತ್ತು ಆಗಿನ ಕಾಲದಲ್ಲಿ ಗುರುಗಳ ಮನಗೆದ್ದು ಶಿಕ್ಷಣ ಪಡೆದ ಗಟ್ಟಿ ಅಕ್ಕ ಮಹಾದೇವಿ ,ಜೊತೆಗೆ ಅನುಭವ ಮಂಟಪ, ಅಲ್ಲಮ ಪ್ರಭು ಹೀಗೆ ಹಲವು ವಿಶೇಷತೆಗಳು ಚಿತ್ರದಲ್ಲಿವೆ ಎಂದು ಮಾಹಿತಿ ಹಂಚಿಕೊಂಡರು.
* ಚಿತ್ರದಲ್ಲಿ ಯಾವೆಲ್ಲಾ ಕಲಾವಿದರಿದ್ದಾರೆ. ಅದರ ಬಗ್ಗೆ ಮಾಹಿತಿ ನೀಡುವುದಾದರೆ
ಸುಲಕ್ಷಾ ಕೈರಾ, ಭವ್ಯ, ಶ್ವೇತಾ, ಬಿರಾದಾರ್, ಮೈಸೂರು ಹೆಲನ್, ಪಲ್ಲಕ್ಕಿ ರಾಧಾಕೃಷ್ಣ, ತಬಲಾನಾಣಿ, ಸುಚೇಂದ್ರಪ್ರಸಾದ್, ಎಂ.ಪಾಟೀಲ್ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಜೊತೆಗೆ ತಾವೂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿ ಕಥೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಶ್ರೀ ಬಸವಣ್ಣ ಮತ್ತು ಅಕ್ಕಮಹಾದೇವಿ ಬರೆದಿರುವ 21 ವಚನಗಳನ್ನು ಬಳಸಿಕೊಳ್ಳಲಾಗಿದೆ.


