The team is ready for the final stages of filming of Love Case.

ಲವ್ ಕೇಸ್ ಕೊನೆಯ ಹಂತದ ಚಿತ್ರೀಕರಣ ತಂಡ ಸಿದ್ದ - CineNewsKannada.com

ಲವ್ ಕೇಸ್ ಕೊನೆಯ ಹಂತದ ಚಿತ್ರೀಕರಣ ತಂಡ ಸಿದ್ದ

“ಲವ್ ಕೇಸ್” ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಜೈಶ್ ನಿರ್ದೇಶನದ ಚಿತ್ರವನ್ನ ಎಂ.ಬಿ ಕ್ರಿಯೇಷನ್ಸ್ ಮೋಹನ್ ಬಾಬು ನಿರ್ಮಾಣ ಮಾಡ್ತಿದ್ದಾರೆ.

ಶ್ರೀನಗರ ಕಿಟ್ಟಿ, ಪ್ರಮೋದ್ ಶೆಟ್ಟಿ, ಸುಧಾರಾಣಿ ನಾಗಭೋಷಣ್ ,ಮಹಾನಟಿ ಖ್ಯಾತಿಯ ವಂಶಿ, ಸ.ಹಿ.ಪ್ರಾ. ಶಾಲೆ ಕಾಸರಗೂಡು ಹಾಗೂ ಕಾಂತಾರ ರಂಜನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಆದಿ ಹರಿಕೃಷ್ಣ ಸಂಗೀತ , ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ , ಅನುಕೃಷ್ಣ ಸಂಕಲನವಿರೋ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಸದ್ಯಕ್ಕೆ ಎರಡನೇ ಹಂತದ ಚಿತ್ರೀಕರಣ ಮುಗಿಸಿದೆ.

ಸದ್ಯದಲ್ಲೇ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಮಂಗಳೂರಿನತ್ತ ಹೊರಡಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ಯುಗಾದಿ ತೆರೆಗೆ ತರಲು ಚಿತ್ರತಂಡ ಸಜ್ಜಾಗ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin