The first look of the film 'Dharmasthala Niyojikavarg' has been released

‘ಧರ್ಮಸ್ಥಳ ನಿಯೋಜಿಕವರ್ಗ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ - CineNewsKannada.com

‘ಧರ್ಮಸ್ಥಳ ನಿಯೋಜಿಕವರ್ಗ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಹೊಸ ವರ್ಷದ ಸಂದರ್ಭದಲ್ಲಿ ರಾಜಕೀಯ ಹಿನ್ನೆಲೆಯುಳ್ಳ ‘ಧರ್ಮಸ್ಥಳ ನಿಯೋಜಕವರ್ಗ್ ಚಿತ್ರದ ಫಸ್ಟ್ ಲುಕ್ ಪೆÇೀಸ್ಟರ್ ಬಿಡುಗಡೆ ಮಾಡಲಾಗಿದೆ.ಮೇರುಂ ಭಾಸ್ಕರ್ ಚಿತ್ರ ನಿರ್ಮಿಸಿದ್ದು, ಜೈ ಜ್ಞಾನ ಪ್ರಭಾ ತೋಟ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಹಿರಿಯ ನಟರಾದ ಸುಮನ್, ಸಾಯಿ ಕುಮಾರ್ ಅವರೊಂದಿಗೆ ನಟರಾಜ್, ವರುಣ್ ಸಂದೇಶ್ ಮತ್ತು ವಿತಿಕಾ ಶೇರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಚಿತ್ರತಂಡ ಪೆÇೀಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಿಗೆ ಶುಭಾಶಯ ಕೋರಿದೆ.

ನಿರ್ದೇಶಕ ಜೈ ಜ್ಞಾನ ಪ್ರಭಾ ತೋಟ ಮಾತನಾಡಿ ವಿಭಿನ್ನ ಶೈಲಿಯ ರಾಜಕೀಯ ಮತ್ತು ಎಮೋಷನಲ್ ಎಂಟರ್ಟೈನರ್ ಆಗಿದೆ. ಹಿರಿಯ ನಟರಾದ ಸಾಯಿ ಕುಮಾರ್ ಮತ್ತು ಸುಮನ್ ಅವರ ಜೊತೆಗೆ ಯುವ ನಾಯಕರು ಕೂಡ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರಕಥೆಯು ಆರಂಭದಿಂದ ಅಂತ್ಯದವರೆಗೆ ಕುತೂಹಲಕಾರಿಯಾದ ತಿರುವುಗಳನ್ನು ಹೊಂದಿದೆ. ಖ್ಯಾತ ಸಾಹಿತಿ ಚಂದ್ರಬೋಸ್ ಅವರು ಬರೆದ ಸಾಹಿತ್ಯಕ್ಕೆ ಗಾಯಕಿ ಸುನೀತಾ ಅವರು ಧ್ವನಿಯಾಗಿರುವುದು ಚಿತ್ರದ ವಿಶೇಷತೆಗಳಲ್ಲೊಂದು. ಎಲ್ಲಾ ತಾಂತ್ರಿಕ ಗುಣಮಟ್ಟದೊಂದಿಗೆ ಫೆಬ್ರವರಿ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ” ಎಂದರು.

ತಾರಾಗಣದ ವಿಚಾರಕ್ಕೆ ಬಂದರೆ, ಸಾಯಿ ಕುಮಾರ್, ಸುಮನ್, ನಟರಾಜ್, ವರುಣ್ ಸಂದೇಶ್, ವಿತಿಕಾ ಶೇರು ಅವರೊಂದಿಗೆ ರಾಜಾ ರವೀಂದ್ರ, ರಾಜೀವ್ ಕನಕಾಲ, ಕಾಲಕೇಯ ಪ್ರಭಾಕರ್, ಪೃಥ್ವಿ, ಶಿವ ಮುಂತಾದ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ಚಂದ್ರಬೋಸ್ ಸಾಹಿತ್ಯ, ಸುನೀತಾ ಗಾಯನ, ವೆಂಕಟ ಹನುಮ ಛಾಯಾಗ್ರಹಣ, ನಂದು ಮಾಸ್ಟರ್ ಸಾಹಸ, ಸೃಷ್ಟಿ ವರ್ಮಾ ನೃತ್ಯ ನಿರ್ದೇಶನ, ಅಸ್ಲಂ ಸಂಭಾಷಣೆ, ಸಾಯಿ ಬಾಬು ತಲಾರಿ ಸಂಕಲನ, ಭಾರ್ಗವಾಚಾರಿ ನೌಂಡ್ಲಾಸ್ ಕಲೆ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin