ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಮೇನಿಯಾ ಮುಂದುವರಿಕೆ
ಕಿಚ್ಚ ಸುದೀಪ್ ನಟನೆಯ ಮಾರ್ಕ್ ಮ್ಯಾಜಿಕ್ ಥಿಯೇಟರ್‍ನಲ್ಲಿ ಮುಂದುವರೆದಿದೆ. ಸಿನಿಮಾಗೆ ಸಿಕ್ತಿರುವ ಸಕ್ಸಸ್ ಬೆನ್ನಲ್ಲೇ ಸುದೀಪ್ ಚಿತ್ರಮಂದಿರಕ್ಕೆ ಭೇಟಿ ಆರಂಭಿಸಿದ್ದಾರೆ.
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಚಿತ್ರ ವೀಕ್ಷಣೆ ಮಾಡಿದ್ದು ಅಭಿಮಾನಿಗಳ ಸಂತಸ ಕಣ್ತುಂಬಿಕೊಂಡರು

ಮೈಸೂರಿಗೆ ಭೇಟಿ ಕೊಟ್ಟು ಚಾಮುಂಡಿ ಬೆಟ್ಟದಲ್ಲಿ ತಾಯಿಯ ದರ್ಶನ ಪಡೆದರು. ನಂತರ ಸಂಗಮ ಚಲನಚಿತ್ರ ಮಂದಿರಕ್ಕೆ ಅಭಿಮಾನಿಗಳ ಜೊತೆ ಕಿಚ್ಚ ಮಾರ್ಕ್ ವೀಕ್ಷಣೆ ಮಾಡಬೇಕಿತ್ತು.ಆದರೆ ಕಿಚ್ಚನ ಆಗಮನದ ವಿಶೇಷ ತಿಳಿದು ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಥಿಯೇಟರ್ ಮುಂದೆ ಜಮಾಯಿಸಿದ್ದರು. ಹೀಗಾಗಿ ಸುದೀಪ್ ಚಿತ್ರ ನೋಡದೇ ವಾಪಸ್ಸು ತೆರಳಿದರು.
ಡಿಸೆಂಬರ್ 25ರಂದು ರಿಲೀಸ್ ಆದ ಮಾರ್ಕ್ ಸಿನಿಮಾ ನಾಲ್ಕು ದಿನಗಳಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪ್ರೇಕ್ಷಕರ ಪ್ರೀತಿ ಜೊತೆಗೆ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಮ್ಯಾಕ್ಸ್ ಬಳಿಕ ಕಿಚ್ಚ ಹಾಗೂ ವಿಜಯ್ ಕಾರ್ತಿಕೇಯ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ.

