JC," a film that reveals a glimpse into prison, releases on February 6th

ಜೈಲಿನ ದರ್ಶನ ಅನಾವರಣ ಮಾಡುವ ಚಿತ್ರ “ಜೆಸಿ” ಫೆಬ್ರವರಿ 6ಕ್ಕೆ ಬಿಡುಗಡೆ - CineNewsKannada.com

ಜೈಲಿನ ದರ್ಶನ ಅನಾವರಣ ಮಾಡುವ ಚಿತ್ರ “ಜೆಸಿ” ಫೆಬ್ರವರಿ 6ಕ್ಕೆ ಬಿಡುಗಡೆ

“ಪ್ರತಿಯೊಬ್ಬ ತಂದೆನೂ ತನ್ನ ಮಗ ಕಿರೀಟ ಹೊತ್ಕೊಳ್ಳದಿದ್ದರೂ ಪರವಾಗಿಲ್ಲ. ಕಳಂಕ ಹೊತ್ಕೋಬಾರದು ಅಂತ್ಕೊತಾನೆ..
ಈ ಜಾಗ ಟೀಚರ್ ಇಲ್ದೆ ಇರೋ ಸ್ಕೂಲ್ ಥರ,, ಬರಬೇಕು, ಕಲಿಬೇಕು, ಬೆಳಿಬೇಕು ಹೋಗ್ತಾ ಇರಬೇಕು.. ಅದಕ್ಕೆ ಎಲ್ಲರೂ ಇದನ್ನು ಯೂನಿವರ್ಸಿಟಿ ಅಂತಾರೆ..”

ಡಾಲಿ ಪಿಕ್ಟರ್ ಅಡಿ ಡಾಲಿ ಧನಂಜಯ ನಿರ್ಮಾಣದ ಹೊಸ ಚಿತ್ರ “ಜೆಸಿ” ದಿ ಯೂನಿವರ್ಸಿಟಿ ಚಿತ್ರದ ಟ್ರೈಲರ್ನಲ್ಲಿ ಮೂಡಿ ಬಂದಿರುವ ಪವರ್ ಫುಲ್ ಸಂಭಾಷಣೆಯ ಝಲಕ್ ಇವು.

ಆಕ್ಷನ್ ಚಿತ್ರಗಳಿಗಷ್ಟೇ ಅಲ್ಲ. ಪ್ರೀತಿ, ಪ್ರೇಮ, ಹೊಡಿ ಬಡಿ ಚಿತ್ರ ಸೇರಿ ಯಾವುದೇ ಮಾದರಿಯ ಚಿತ್ರಗಳಾದರೂ ಸರಿ. ಡೈಲಾಗ್ ಕಡೆ ಒಮ್ಮೆ ತಿರುಗಿ ನೋಡಬೇಕು. ಯಾರ್ ಗುರು ಡೈಲಾಗ್ ರೈಟರ್.. ಹಿಂಗ್ ಬರದವ್ರೆ ಅನ್ನಬೇಕು ಅಷ್ಟರ ಮಟ್ಟಿಗೆ ಮಾತಿನ ಮೂಲಕ ಮೋಡಿ ಮಾಡುವ ಸಂಭಾಷಣೆಕಾರ ಮಾಸ್ತಿ ಅವರ ಫವರ್ ಫುಲ್ ಸಂಭಾಷಣೆ ಇದೆ.

ಈ ಹಿಂದೆ ನಡುವೆ ಅಂತರವಿರಲಿ ಚಿತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಸೂರ್ಯ ಪ್ರಖ್ಯಾತ್ ನಟನೆಯ ಚಿತ್ರ ಇದು. ಈ ಸಿನಿಮಾ ಮೂಲಕ ಭಾವನಾ ರೆಡ್ಡಿ ಎನ್ನುವ ಹೊಸ ಪ್ರತಿಭೆ ಚಿತ್ರಕ್ಕೆ ಪರಿಚಯವಾಗುತ್ತಿದ್ದಾರೆ. ಇವರ ಜೊತೆ ಹಲವು ಹಿರಿ-ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

ಜೆಸಿ- ಜುಡಿಷಿಯಲ್ ಕಸ್ಟಡಿ ಎನ್ನುವ ವಿಸೃತ ರೂಪ ಹೊಂದಿರುವ ಚಿತ್ರಕ್ಕೆ ಚೇತನ್ ಜಯರಾಮ್ ಆಕ್ಷನ್ ಕಟ್ ಹೇಳಿದ್ದು ಮ್ಯಾಡಿಯ ಮ್ಯಾಡ್‍ನೆಸ್ ಜೊತೆಗೆ ಜೈಲಿನ ಡಾರ್ಕ್‍ನೆಸ್ ಪಯಣವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ಚಿತ್ರದ ಟ್ರೈಲರ್ ಅನ್ನು ಹಿರಿಯ ನಟ ಶಿವರಾಜ್ ಕುಮಾರ್ ಹಾಗು ನಿರ್ದೇಶಕ ಜೋಗಿ ಪ್ರೇಮ್ ಬಿಡುಗಡೆ ಮಾಡಿ ಶುಭಹಾರೈಸಿದರು.

ಈ ವೇಳೆ ಮಾತನಾಡಿದ ನಿರ್ಮಾಪಕ ಡಾಲಿ ಧನಂಜಯ,ಸಿನಿಮಾದಲ್ಲಿ ಬ್ಯುಸಿ ಇದ್ದರೂ ಹರಲು ಬಂದ ಶಿವಣ್ಣ ಹಾಗು ನಿರ್ದೇಶಕ ಪ್ರೇಮ್ ಅವರಿಗೆ ಸದಾ ಚಿರಋಣಿ. ಜೆಸಿ ದಿ, ಯೂನಿವರ್ಸಿಟಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಆ ಭರವಸೆಯಿಂದ ಎಲ್ಲರೆದು ಮಾತನಾಡುತ್ತಿದ್ದೇನೆ.ಜೈಲುಬಹಳ ಚರ್ಚೆಯ ವಿಷಯವಾಗಿದೆ ಅಲ್ಲಿನ ವ್ಯವಸ್ಥೆ ಬಗ್ಗೆ ಚರ್ಚೆ ಆಗುತ್ತಿವೆ ಎಂದರು

ಚಿತ್ರದಲ್ಲಿನ ಮಾತುಗಳು ತುಂಬಾ ಇಷ್ಟವಾಗಿದೆ, ಅದರಲ್ಲಿಯೂ ಒಬ್ಬ ತಂದೆ ಮಗ ಕಿರೀಟ ಹೊತ್ತುಕೊಳ್ಳದಿದ್ದರೂ ಪರವಾಗಿಲ್ಲ ಕಳಂಕ ಹೊತ್ತಿಕೊಳ್ಳಬಾರದು. ಇಲ್ಲಿಗೆ ಬಂದಾಗ ಇಲ್ಲಿರೋ ಜನರ ಜೊತೆ ಬೆರೆಯುವ ಬದಲು ಪದಗಳ ಜೊತೆ ಬೆರೆತಿದ್ರೆ, ನನ್ನ ಜೀವನ ಏನೋ ಆಗಿರೋದು ಎನ್ನುವ ಮಾತುಗಳು ಮನಸ್ಸಿಗೆ ತುಂಬಾ ಆಪ್ತ ಎನಿಸುತ್ತಿವೆ, ಅಂಡರ್ ವಲ್ಡ್ ಅಷ್ಟೇ ಅಲ್ಲ, ಬೇರೆ ಬೇರೆ ವಿಷಯಗಳು ಚಿತ್ರದಲ್ಲಿವೆ, ಜಗತ್ತು ಗೊತ್ತಿದ್ದರೆ ಅದನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲು ಸಾಧ್ಯ. ಅದನ್ನು ಅಚ್ಚುಕಟ್ಟಾಗಿ ಚೇತನ್ ಮಾಡಿದ್ದಾರೆ. ಅಷ್ಟೇ ಚೆನ್ನಾಗಿ ಪ್ರಖ್ಯಾತ್ ನಟಿಸಿದ್ದಾರೆ.ಒಳ್ಳೆಯ ಭವಿಷ್ಯವಿದೆ ಎಂದು ಹಾರೈಸಿದರು.

ಕಥೆ ಏನು

ನಿರ್ದೇಶಕ ಚೇತನ್ ಜೈರಾಮ್ ಚೊಚ್ಚಲ ನಿರ್ದೇಶನದಲ್ಲಿ ಬಂದಿರುವ ಜೆಸಿ, ಜೈಲಿನಲ್ಲಿ ನಡೆಯುವ ಕಥೆ. ಜೈಲು ಒಳಗಿನ ಅವ್ಯವಹಾರ, ಕೈದಿಗಳ ದರ್ಬಾರ್ ಸಿನಿಮಾದಲ್ಲಿ ತೋರಿಸಲಾಗಿದೆ. ಫೈಟ್, ಕೊಲೆ, ರಕ್ತ ಇದರ ನಡುವೆ ಅಪ್ಪ ಮಗನ ಭಾವನಾತ್ಮಕ ಕಥೆಯನ್ನು ಹೇಳಲಾಗಿದೆ. ಟ್ರೇಲರ್ ನಲ್ಲಿ ಮಗ ಕಿರೀಟ ಹೊತ್ಕೊದಿದ್ರೂ ಪರವಾಗಿಲ್ಲ, ಕಳಂಕ ಹೊತ್ಕೋಬಾರ್ದು ಎನ್ನುವ ಡೈಲಾಗ್ ಗಮನ ಸೆಳೆಯುತ್ತಿದೆ.

ನಾಯಕ ಪ್ರಖ್ಯಾತ್ ಮಾತನಾಡಿ, ದುಡ್ಡು ಇರೋರೆಲ್ಲ ಹೀರೋ ಆಗಲು ಸಾಧ್ಯಿಲ್ಲ. ಜನ ಒಪೆÇ್ಕಬೇಕು, ಸರಸ್ವತಿ ಆಶೀರ್ವಾದ ಇರಬೇಕು. ಸೂಪರ್ ಸ್ಟಾರ್ ಮಕ್ಕಳುಗು ಫೇಲ್ ಆಗಿರೋದು ಇದೆ. ಬಡವರ ಮಕ್ಕಳು ಸೂಪರ್ ಸ್ಟಾರ್ ಆಗಿರುವ ಉದಾಹರಣೆಯೂ ಇದೆ. ದುಡ್ಡು ಇದ್ರೆ ಎಲಕ್ಷನ್ ಗೆಲ್ಲಬಹುದು ಆದರೆ ಸಿನಿಮಾ ಗೆಲ್ಲಿಸೋದು ಕಷ್ಟ’ ಎಂದರು.

ನಾಯಕಿ ಭಾವನಾ ರೆಡ್ಡಿ ಮಾತನಾಡಿ, ಹೊಸಬರಿಗೆ ಅವಕಾಶ ನೀಡುತ್ತಿರುವ ಡಾಲಿ ಧನಂಜಯ ಅವರಿಗೆ ಧನ್ಯವಾದ,ಎಲ್ಲರೂ ಸಿನಿಮಾ ನೋಡಿ ಎಂದು ಕೇಳಕೊಂಡರು.

ಸಾಹಸ ನಿರ್ದೇಶಕ ತ್ರಿಲ್ಲರ್ ಮಂಜು, ವಿಜಯ್ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೆಸಿ ಸಿನಿಮಾಗೆ ಖ್ಯಾತ ಡೈಲಾಗ್ ರೈಟರ್ ಮಾಸ್ತಿ ಅವರು ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಛಾಯಾಗ್ರಾಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನವಿದೆ. ಸಿನಿಮಾ ಫೆಬ್ರವರಿ 6ಕ್ಕೆ ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin