Cult,” starring Zaid Khan, will hit the screens on January 23.

ಝೈದ್ ಖಾನ್ ನಾಯಕರಾಗಿ ನಟಿಸಿರುವ “ಕಲ್ಟ್” ಜನವರಿ 23 ರಂದು ತೆರೆಗೆ - CineNewsKannada.com

ಝೈದ್ ಖಾನ್ ನಾಯಕರಾಗಿ ನಟಿಸಿರುವ “ಕಲ್ಟ್” ಜನವರಿ 23 ರಂದು ತೆರೆಗೆ

“ಬನಾರಸ್” ಚಿತ್ರದ ಮೂಲಕ ಎಲ್ಲರ ಗಮನ ಸೆಳಿದಿದ್ದ ನಟ ಝೈದ್ ಖಾನ್ ನಾಯಕರಾಗಿ ನಟಿಸಿರುವ , “ಉಪಾಧ್ಯಕ್ಷ” ಸೇರಿದಂತೆ ಯಶಸ್ವಿ ಚಿತ್ರಗಳ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ಹಾಗೂ ರಚಿತರಾಮ್ ಮತ್ತು ಮಲೈಕಾ ನಾಯಕಿಯರಾಗಿ ಅಭಿನಯಿಸಿರುವ ಬಹು ನಿರೀಕ್ಷಿತ “ಕಲ್ಟ್” ಚಿತ್ರ ಜನವರಿ 23ಕ್ಕೆ ತೆರೆಗೆ ಬರಲಿದೆ.

ನಾಯಕ ಝೈದ್ ಖಾನ್ ಮಾತನಾಡಿ ನಿರ್ದೇಶಕ ಅನಿಲ್ ಕುಮಾರ್ ಹೇಳಿದ ಕಥೆ ಇಷ್ಟವಾಯಿತು. ಯುವಜನತೆಗೆ ಹೇಳಿ ಮಾಡಿಸಿದ ಕಥೆ ರಚಿತರಾಮ್ ಜೊತೆಗೆ ನಟಿಸಿದ್ದು ಬಹಳ ಖುಷಿಯಾಗಿದೆ. ಮಲೈಕಾ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲರ ಅಭಿನಯ ಚೆನ್ನಾಗಿದೆ. ಕರ್ನಾಟಕದಾದ್ಯಂತ ಸುಮಾರು ಹತ್ತೊಂಭತ್ತು ಸಾವಿರಕ್ಕೂ ಅಧಿಕ ಕಿಲೋಮೀಟರ್ ಸುತ್ತಿ, ಎಲ್ಲಾ ಊರುಗಳಿಗೂ ಹೋಗಿ “ಕಲ್ಟ್” ಸಿನಿಮಾ ಬಗ್ಗೆ ಪ್ರಚಾರ ಮಾಡಿ ಬಂದಿದ್ದೇನೆ. ಕನ್ನಡದ ಜನರು ತೋರಿದ ಪ್ರೀತಿಗೆ ಮನ ತುಂಬಿ ಬಂದಿದೆ ಎಂದರು

ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ ಯುವಜನತೆ ಹಾಗೂ ಪೆÇೀಷಕರು ನೋಡಲೇ ಬೇಕಾದ ಸಿನಿಮಾ ಕೂಡ. ಚಿತ್ರದಲ್ಲಿ ಮಾನವೀಯ ಮೌಲ್ಯಗಳಿದೆ. ಭಾವನೆಗಳಿದೆ. ಹೀಗೆ ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳಿದೆ ಪೆÇ್ರೀತ್ಸಾಹಿಸಿ ಎಂದರು.

ನಟಿ ರಚಿತರಾಮ್ ಮಾತನಾಡಿ ರಂಗಾಯಣ ರಘು ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಝೈದ್ ಖಾನ್ ಎರಡನೇ ಸಿನಿಮಾ ಅನಿಸುವುದೇ ಇಲ್ಲ. ಹತ್ತು ಸಿನಿಮಾ ಮಾಡಿರುವ ಕಲಾವಿದರ ಹಾಗೆ ಅಭಿನಯಿಸಿದ್ದಾರೆ ಎಂದು ಹೇಳಿದರು

ನಟಿ ಮಲೈಕಾ ಮಾತನಾಡಿ ಝೈದ್ ಖಾನ್ ಜೊತೆಗೆ ಮೂರು ತಿಂಗಳಿನಿಂದ ಚಿತ್ರದ ಪ್ರಚಾರಕ್ಕಾಗಿ ಕರ್ನಾಟಕದಾದ್ಯಂತ ಸಂಚಾರ ಮಾಡಿದ್ದೇನೆ. ಅವರಿಗಿರುವ ಕನ್ನಡ ಪ್ರೇಮ ಕಂಡು ನನ್ನ ಕನ್ನಡಾಭಿಮಾನ ದುಪ್ಪಟ್ಟು ಆಯಿತು. ಇನ್ನೂ, ರಚಿತರಾಮ್, ರಂಗಾಯಣ ರಘು ಅವರಂತಹ ಕಲಾವಿದರ ಜೊತೆಗೆ ಕೆಲಸ ಮಾಡಿದ್ದು ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.

ನಟ ರಂಗಾಯಣ ರಘು ಮಾತನಾಡಿ ನಿರ್ದೇಶಕರ ಜೊತಗೆ ಹಿಂದೆ ಒಂದು ಸಿನಿಮಾ ಮಾಡಿದ್ದೆ. ಇದು ಎರಡನೇಯದು. ಇದರಲ್ಲಿ ಲೇಡಿ ಸೂಪರ್ ಸ್ಟಾರ್ ರಚಿತರಾಮ್ ಅವರ ತಂದೆ ಪಾತ್ರ ಮಾಡಿದ್ದೇನೆ ಎಂದು ಹೇಳಿದರು.

ಆನಂದ್ ಆಡಿಯೋ ಶ್ಯಾಮ್, ಆನಂದ್, ಸಾಹಸ ನಿರ್ದೇಶಕ ರವಿವರ್ಮ ಹಾಗೂ ಚಿತ್ರದಲ್ಲಿ ನಟಿಸಿರುವ ಅಲೋಕ್, ಕಿಶನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin