Title song of the film Alpa released: Curiosity increases

ಅಲ್ಪಾ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ: ಕುತೂಹಲ ಹೆಚ್ಚಳ - CineNewsKannada.com

ಅಲ್ಪಾ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ: ಕುತೂಹಲ ಹೆಚ್ಚಳ

ಆನಂದ್ ಕುಮಾರ್ ನಿರ್ಮಾಣದ, ವಿಜಯ್ ನಿರ್ದೇಶನದಲ್ಲಿ ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ “ಆಲ್ಫಾ #MEN LOVE VENGEANCE ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ನಾಗಾರ್ಜುನ ಶರ್ಮ ಬರೆದಿರುವ ಹಾಗೂ ವ್ಯಾಸರಾಜ ಸೋಸಲೆ ಹಾಡಿರುವ ಶೀರ್ಷಿಕೆ ಗೀತೆ ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ಈಗಾಗಲೇ ಹಾಡುಗಳು ಹಾಗೂ ಟೀಸರ್ ಮೂಲಕ ಜನರ ಮನ ತಲುಪಿರುವ ಚಿತ್ರ ಫೆಬ್ರವರಿ 20ರಂದು ಬಿಡುಗಡೆಯಾಗುತ್ತಿದೆ.

ಸಂಗೀತ ನಿರ್ದೇಶಕ ಅನೂಪ್ ಸೀಳಿನ್‍ಮಾತನಾಡಿ ನಾಗಾರ್ಜುನ ಶರ್ಮ ಬರೆದಿರುವ ಈ ಹಾಡನ್ನು ವ್ಯಾಸರಾಜ ಸೋಸಲೆ ಅದ್ಭುತವಾಗಿ ಹಾಡಿದ್ದಾರೆ. ‘ಆಲ್ಫಾ’ ಚಿತ್ರದ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ ಎಂದರು ¸

ನಾಯಕ ಹೇಮಂತ್ ಕುಮಾರ್ ಮಾತನಾಡಿ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದಿರುವವನು. ಆದರೆ ಮೊದಲಿನಿಂದಲೂ ನಟನಾಗಬೇಕು ಎಂಬ ಕನಸನ್ನು ಹೊತ್ತವನು. ಆದರೆ ನಾಯಕನಾಗುವ ಮೊದಲು ನಟನೆಗೆ ಬೇಕಾದ ಎಲ್ಲಾ ಅಭ್ಯಾಸವನ್ನು ಕಲಿತು ಬಂದಿದ್ದೇನೆ. ಆನರು ಚಿತ್ರವನ್ನು ಮುಚ್ಚಿಕೊಳ್ಳುವ ಭರವಸೆ ಇದೆ. ಫೆಬ್ರವರಿ 20 ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಚೊಚ್ಚಲ ಚಿತ್ರಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದು ತಿಳಿಸಿದರು.

“ಬಿಗ್ ಬಾಸ್” ಖ್ಯಾತಿಯ ಕಾರ್ತಿಕ್ ಮಹೇಶ್ ಮಾತನಾಡಿ ನೆಗಟಿವ್ ಶೇಡ್ ನಲ್ಲಿ ಅಭಿನಯಿಸಿದ್ದೇನೆ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ಚಿತ್ರತಂಡದ ಸದಸ್ಯರ ಸಹಕಾರಕ್ಕೆ ನಿರ್ದೇಶಕ ವಿಜಯ್ ಧನ್ಯವಾದ ತಿಳಿಸಿದರು.
ನಾಯಕಿಯರಾದ ಆಯನಾ, ಗೋಪಿಕಾ ಸುರೇಶ್, ನಟ ಬಾಲು ನಾಗೇಂದ್ರ ಹಾಗೂ ಗೀತರಚನೆಕಾರ ನಾಗಾರ್ಜುನ ಶರ್ಮ ಮುಂತಾದವರು ಹಾಡು ಹಾಗೂ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin