"Benki" song Shivanna from the movie "Gramayana" released: An attention-grabbing remix song

“ಗ್ರಾಮಾಯಣ” ಚಿತ್ರದ ” ಬೆಂಕಿ ಹಾಡು ಶಿವಣ್ಣ ಬಿಡುಗಡೆ: ಗಮನ ಸೆಳೆದ ರಿಮಿಕ್ಸ್ ಹಾಡು - CineNewsKannada.com

“ಗ್ರಾಮಾಯಣ” ಚಿತ್ರದ ” ಬೆಂಕಿ ಹಾಡು ಶಿವಣ್ಣ ಬಿಡುಗಡೆ: ಗಮನ ಸೆಳೆದ ರಿಮಿಕ್ಸ್ ಹಾಡು

ಮೂರು ದಶಕಗಳ ಹಿಂದೆ ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ನಟನೆಯಲ್ಲಿ ಮೂಡಿಬಂದಿದ್ದ ಮನಮೆಚ್ಚಿದ ಹುಡುಗಿ ಚಿತರದ “ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೇನು” ಹಾಡು ರೀಮಿಕ್ಸ್ ಆಗಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದೆ.

ಗ್ರಾಮಾಯಣ ಚಿತ್ರದಲ್ಲಿ ಬೆಂಕಿ ಹಾಡನ್ನು ನಿರ್ದೇಶಕ ದೇವನೂರು ಚಂದ್ರು, ನಟ ವಿನಯ್ ರಾಜ್ ಕುಮಾರ್ ಮತ್ತು ಮೇಘಾ ಶೆಟ್ಟಿ ಜೋಡಿ ಕಾಣಿಸಿಕೊಂಡಿರುವ ಹಾಡಿನಲ್ಲಿ ಬಳಿಸಿಕೊಂಡಿದ್ದಾರೆ. ಈ ಹಾಡನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು

ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರುವ ಹಾಡನ್ನು ಕಪಿಲ ಕಪಿಲನ್ ಹಾಗೂ ಐರಾ ಉಡುಪಿ ಹಾಡಿದ್ದಾರೆ. ಈ ಹಿಂದೆ ಉಪೇಂದ್ರ ಕುಮಾರ್ ಸಂಗೀತ ಸಂಯೋಜಿಸಿದ್ದ ಈ ಹಾಡನ್ನು ಚಿ.ಉದಯಶಂಕರ್ ಬರೆದಿದ್ದರು. ಎಸ್.ಪಿ. ಬಾಲಸುಬ್ರಮಣ್ಯಂ ಹಾಗೂ ಎಸ್ ಜಾನಕಿ ಹಾಡಿದ್ದರು. ಈಗ ಇದೇ ಹಾಡನ್ನು “ಗ್ರಾಮಾಯಣ” ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ನಿರ್ದೇಶಕ ದೇವನೂರು ಚಂದ್ರು. ಮಾತನಾಡಿ ಕಾರಣಾಂತರದಿಂದ ನಿಂತು ಹೋಗಿದ್ದ “ಗ್ರಾಮಾಯಣ” ವನ್ನು ನಿರ್ಮಾಣ ಮಾಡಿ ಫೆಬ್ರವರಿಯಲ್ಲಿ ಅದ್ದೂರಿ ಬಿಡುಗಡೆ ಮಾಡಲು ಮುಂದಾಗಿರುವ ನಿರ್ಮಾಣ ಸಂಸ್ಥೆಯಾದ ಲಹರಿ ಫಿಲಂಸ್ ಗೆ ಅನಂತ ಧನ್ಯವಾದ. ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಈವರೆಗೂ ನೋಡಿರದ ವಿನಯ್ ರಾಜಕುಮಾರ್ ಅವರನ್ನು ಚಿತ್ರದಲ್ಲಿ ನೋಡಬಹುದು. ಮೇಘಶೆಟ್ಟಿ, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ, ಸೀತಾ ಕೋಟೆ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ ಎಂದು ಹೇಳಿದರು

ಸಂತೋಷ್ ರೈ ಪಾತಾಜೆ ಅವರಂತೂ ಅವಧಿಗಿಂತ ಮುಂಚೆಯೇ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಪೂರ್ಣಚಂದ್ರ ತೇಜಸ್ವಿ “ಬೆಂಕಿ” ಹಾಡು ಸೇರಿದಂತೆ ಸುಮಧುರ ಹಾಡುಗಳನ್ನು ನೀಡಿದ್ದಾರೆ. ಒಟ್ಟಾರೆ ಇಡೀ ತಂಡದ ಶ್ರಮದಿಂದ “ಗ್ರಾಮಾಯಣ” ಒಂದೊಳ್ಳೆ ಚಿತ್ರವಾಗಿ ನಿಮ್ಮ ಮುಂದೆ ಬರಲಿದೆ ಎಂದರು

ನಿರ್ಮಾಪಕ ಲಹರಿ ವೇಲು ಮಾತನಾಡಿ “ಗ್ರಾಮಾಯಣ” ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಚಿತ್ರ. ದೇವನೂರು ಚಂದ್ರು ಒಂದೊಳ್ಳೆ ಗ್ರಾಮೀಣ ಸೊಗಡಿನ ಚಿತ್ರ ಮಾಡಿಕೊಂಡಿದ್ದಾರೆ. ವಿನಯ್ ರಾಜಕುಮಾರ್, ಮೇಘ ಶೆಟ್ಟಿ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. “ಮನ ಮೆಚ್ಚಿದ ಹುಡುಗಿ” ಚಿತ್ರದ ಮೂಲ ಹಾಡು ನಮ್ಮ ಲಹರಿ ಸಂಸ್ಥೆಯಿಂದ ಬಿಡುಗಡೆಯಾಗಿತ್ತು. ಈಗ ರೀಮಿಕ್ಸ್ ಹಾಡು ಕೂಡ ನಮ್ಮ ಸಂಸ್ಥೆಯಿಂದಲೇ ಬಿಡುಗಡೆಯಾಗುತ್ತಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದ ಎಂದರು.

ನಾಯಕ ವಿನಯ್ ರಾಜಕುಮಾರ್ ಮಾತನಾಡಿ ಲಹರಿ ಸಂಸ್ಥೆಯ 50ನೇ ವರ್ಷದ ಸಂದರ್ಭದಲ್ಲಿ “ಗ್ರಾಮಾಯಣ” ಚಿತ್ರ ಬರುತ್ತಿರುವುದು ತುಂಬಾ ಸಂತೋಷವಾಗಿದೆ. ಎಲ್ಲರೂ ನನ್ನ ನಟನೆ ಚೆನ್ನಾಗಿದೆ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕರು. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಸಿನಿಮಾದ ಸೌಂದರ್ಯ ಮತ್ತಷ್ಟು ಹೆಚ್ಚಿಸಿದೆ.

ಪೂರ್ಣಚಂದ್ರ ತೇಜಸ್ವಿಯವರ ಹಾಡುಗಳೇ ‘ಗ್ರಾಮಾಯಣ” ಏನೆಂದು ಹೇಳಲಿದೆ. ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಸಿಕ್ತ್ ಸೆನ್ಸ್ ಸೀನ ನನ್ನ ಪಾತ್ರದ ಹೆಸರು. ಇನ್ನೂ, ಇಂದು ಬಿಡುಗಡೆಯಾದ “ಬೆಂಕಿ” ಹಾಡನ್ನು ಬಿಡುಗಡೆ ಮಾಡಿಕೊಟ್ಟ ನಾನು ಹೆಚ್ಚಾಗಿ ಪ್ರೀತಿಸುವ ಹಾಗೂ ಗೌರವಿಸುವ ದೊಡ್ಡಪ್ಪ, ದೊಡ್ಡಮ್ಮ ಅವರಿಗೆ ಧನ್ಯವಾದ ಎಂದು ಹೇಳಿದರು.

ನಾಯಕಿ ಮೇಘ ಶೆಟ್ಟಿ ಮಾತನಾಡಿ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಕುಸುಮ ನನ್ನ ಪಾತ್ರದ ಹೆಸರು. ಯಾವುದಕ್ಕೂ ಹೆದರದ ಗಂಡು ಹುಡುಗನ ಹಾಗೆ ವರ್ತಿಸುವ ಹಠಮಾರಿ ಹೆಣ್ಣಿನ ಪಾತ್ರ ನನ್ನದು ಎಂದು ತಿಳಿಸಿದರು.

ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ಚಿತ್ರದಲ್ಲಿ ನಟಿಸಿರುವ ಅರುಣ್ ಸಾಗರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದ ಚಿತ್ರತಂಡದ ಸದಸ್ಯರು “ಗ್ರಾಮಾಯಣ”ದ ಬಗ್ಗೆ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin