"Shri Jagannath Dasaru Part 2" to release on January 30th

“ಶ್ರೀಜಗನ್ನಾಥದಾಸರು ಭಾಗ 2” ಚಿತ್ರ ಜನವರಿ 30 ರಂದು ತೆರೆಗೆ - CineNewsKannada.com

“ಶ್ರೀಜಗನ್ನಾಥದಾಸರು ಭಾಗ 2” ಚಿತ್ರ ಜನವರಿ 30 ರಂದು ತೆರೆಗೆ

ನಾಡಿನ ಪ್ರಸಿದ್ದ ಹರಿದಾಸರ ಜೀವನ ಚರಿತ್ರೆಯನ್ನು ಸಿನಿಮಾ ಮೂಲಕ ಜನರಿಗೆ ಪರಿಚಯಿಸಲಾಗುತ್ತಿದೆ. ದಾಸಶ್ರೇಷ್ಠರಾದ “ಶ್ರೀಜಗನ್ನಾಥದಾಸರು”, ” ಶ್ರೀವಿಜಯದಾಸರು”, “ಶ್ರೀಮಹಿಪತಿದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಮುಂತಾದ ದಾಸಶ್ರೇಷ್ಠರ ಚಿತ್ರಗ ನಿರ್ದೇಶಿಸಿರುವ ಮಧುಸೂದನ್ ಹವಾಲ್ದಾರ್ ನಿರ್ದೇಶನ, ನಿರ್ಮಾಣದ “ಶ್ರೀಜಗನ್ನಾಥದಾಸರು ಭಾಗ 2” ಚಿತ್ರ ಜನವರಿ 30 ರಂದು ತೆರೆಗೆ ಬರಲಿದೆ.

ನಿರ್ಮಾಪಕ ಹಾಗೂ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾತನಾಡಿ ಐದು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ “ಶ್ರೀಜಗನ್ನಾಥದಾಸರು” ಚಿತ್ರ ಕರ್ನಾಟಕ ಮಾತ್ರ ಅಲ್ಲ. ಇಡೀ ವಿಶ್ವದಾದ್ಯಂತ ಜನಪ್ರಿಯತೆ ಪಡೆಯಿತು. ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಈಗ ಆ ಚಿತ್ರದ ಮುಂದುವರಿದ ಭಾಗ “ಶ್ರೀಜಗನ್ನಾಥದಾಸರು ಭಾಗ 2” ಚಿತ್ರ ಸಹ ಇದೇ ಜನವರಿ 30ರಂದು ತೆರೆಗೆ ಬರಲಿದೆ., ಮುಂದಿನ ವಾರಗಳಲ್ಲಿ ವಿದೇಶದಲ್ಲೂ ತೆರೆ ಕಾಣಲಿದೆ. ಐದು ಭಾಗಗಳಲ್ಲಿ ಜಗನ್ನಾಥದಾಸರ ಚಿತ್ರವನ್ನು ಮಾಡುವ ಯೋಚನೆ ಇದೆ ಎಂದು ತಿಳಿಸಿದರು.

ನಟ ಶರತ್ ಜೋಶಿ ಮಾತನಾಡಿ ಜಗನ್ನಾಥದಾಸರು ಮೊದಲಭಾಗ ನೋಡಿದ ಜನರು ತೋರಿದ ಒಲವಿಗೆ ನಾನು ಚಿರ ಋಣಿ. ಈ ಚಿತ್ರಕ್ಕೂ ಅದೇ ರೀತಿ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು

ಸಂಗೀತ ನಿರ್ದೇಶಕ ಹಾಗೂ ಗಾಯಕ ರಾಯಚೂರು ಶೇಷಗಿರಿದಾಸ್ ಮಾತನಾಡಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಹೊಸತು. ಮಧುಸೂದನ್ ಹವಾಲ್ದಾರ್ ಅವರು ಜೊತೆಗಿದಿದ್ದರಿಂದ ಇದು ಸುಲಭವಾಯಿತು . ಅನಂತರಾಜ ಮಿಸ್ತ್ರಿ, ಮಧುಸೂದನ್ ಹವಾಲ್ದಾರ್ ಮುಂತಾದವರು ಈಚಿತ್ರದ ಹಾಡುಗಳನ್ನು ಹಾಡಿದ್ದೇವೆ ಎಂದು ಹೇಳಿದರು.

ಜೆ.ಎಂ.ಪ್ರಹ್ಲಾದ್ ಮಾಹಿತಿ ನೀಡಿ ಎರಡನೇ ಭಾಗ ಆರಂಭವಾದ ಕುರಿತು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಮಾಹಿತಿ ನೀಡಿದರು.

ಚಿತ್ರದಲ್ಲಿ ನಟಿಸಿರುವ ವಿಷ್ಣುತೀರ್ಥ ಜೋಶಿ, ನಿಶ್ಚಿತ ಶೆಟ್ಟಿ, ಪುಷ್ಕರ್ ದೇಶಪಾಂಡೆ, ಸಚಿನ್ ಪುರೋಹಿತ್, ವಸಂತ್, ಗುರುರಾಜ್, ನಾರಾಯಣ್ ಕುಲಕರ್ಣಿ, ವಿಜಯ ಭಾಸ್ಕರ್, ಶ್ರೀಲತ ಮುಂತಾದವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin