Kantara: Chapter 1 TV Premiere to air on TV on 24th

ಕಾಂತಾರ: ಚಾಪ್ಟರ್ 1 ಕಿರುತೆರೆ ಪ್ರೀಮಿಯರ್ 24 ರಂದು ಕಿರುತೆರೆಯಲ್ಲಿ ಪ್ರಸಾರ - CineNewsKannada.com

ಕಾಂತಾರ: ಚಾಪ್ಟರ್ 1 ಕಿರುತೆರೆ ಪ್ರೀಮಿಯರ್ 24 ರಂದು ಕಿರುತೆರೆಯಲ್ಲಿ ಪ್ರಸಾರ

ಬಹುನಿರೀಕ್ಷಿತ 2025ರ ಬ್ಲಾಕ್‍ಬಸ್ಟರ್ ಸಿನಿಮಾ ‘ಕಾಂತಾರ: ಚಾಪ್ಟರ್ 1’ ರ ವಿಶ್ವ ಕಿರುತೆರೆ ಪ್ರೀಮಿಯರ್ ಜನವರಿ 24 ರಂದು ಸಂಜೆ 7 ಗಂಟೆಗೆ ಕೇವಲ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ವಿಶ್ವದಾದ್ಯಂತ 250 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ, ಕನ್ನಡದ ಅತಿಹೆಚ್ಚು ಗಳಿಕೆಯ ಸಿನಿಮಾ ಎಂಬ ಇತಿಹಾಸ ಬರೆದ ಈ ಚಿತ್ರ ಈಗ ಕಿರುತೆರೆಗೆ ಪದಾರ್ಪಣೆ ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಮತ್ತು ವ್ಯಾಪಕ ಪ್ರಶಂಸೆ ಗಳಿಸಿದ ನಂತರ, ಈ ಅದ್ಭುತ ಸಾಂಸ್ಕೃತಿಕ ಸಿನಿಮಾ ಅನುಭವವನ್ನು ಇದೀಗ ವಿಶ್ವ ಕಿರುತೆರೆ ಪ್ರೀಮಿಯರ್ ಮೂಲಕ ಕರ್ನಾಟಕದ ಮನೆಮನೆಗೆ ತಲುಪಿಸಲಾಗುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin