“ಥ್ಯಾಂಕ್ಸ್ ಅಪ್ಪ” ಕನ್ನಡ ಕಾದಂಬರಿ ಬಿಡುಗಡೆ ಮಾಡಿದ ನ್ಯಾ,ಸಂತೋಷ್ ಹೆಗಡೆ
ನಿರ್ಮಾಪಕ, ನಿರ್ದೇಶಕ ವೀರೇಂದ್ರ ಬಾಬು ನಂಜೇಗೌಡ ಬರೆದಿರುವ “ಥ್ಯಾಂಕ್ಸ್ ಅಪ್ಪ” ಪುಸ್ತಕವನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಲೋಕಾರ್ಪಣೆ ಮಾಡಿದ್ದಾರೆ.ಜಿ.ಎಸ್.ಟಿ. ಜಂಟಿ ಆಯುಕ್ತ ಡಾ.ಸಂಗಮೇಶ್ ಉಪಾಸೆ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್. ಇ. ಸುಧೀಂದ್ರ ಸೇರಿದಂತೆ ಅನೇಕ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ “ಥ್ಯಾಂಕ್ಸ್ ಅಪ್ಪ” ಕಾದಂಬರಿ ನಾಡಿನ ಪ್ರತಿ ಮನೆಯಲ್ಲು ಇರಬೇಕಾದ ಪುಸ್ತಕ. ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ “ಥ್ಯಾಂಕ್ಸ್ ಅಪ್ಪ” ಕಾದಂಬರಿಯನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ರೂಡಿಸಿಕೊಳ್ಳಬೇಕು ಎಂದು ಹೇಳಿದರು
ಡಾ.ಸಂಗಮೇಶ್ ಉಪಾಸೆ ಮತನಾಡಿ “ಥ್ಯಾಂಕ್ಸ್ ಅಪ್ಪ” ಕಾದಂಬರಿಯಲ್ಲಿ ಲೇಖಕರು 92 ಅಧ್ಯಾಯ ಬರೆದಿದ್ದಾರೆ. ಇದರಲ್ಲಿ ಕಾದಂಬರಿ ಪ್ರಕಾರದಲ್ಲಿನ ಜನಪ್ರಿಯ ಶೈಲಿ ತಂತ್ರ ನಿರೂಪಣೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಕನ್ನಂಬಾಡಿ ಅಣೆಕಟ್ಟು ಕಟ್ಟುವಾಗ ಅಲ್ಲಿದ್ದ 19 ಸಾವಿರ ಜನರು ಹಳ್ಳಿಯನ್ನು ತೊರೆದು, ತ್ಯಾಗ ಮಾಡುವ ಹಿನ್ನಲೆಯಲ್ಲಿ ಕಾದಂಬರಿ ತೆರೆದುಕೊಳ್ಳುತ್ತದೆ ಮಾಹಿತಿ ಹಂಚಿಕೊಂಡರು
ನಿರ್ದೇಶಕಾರದ ರಾಮ್ ಜನಾರ್ಧನ್ ಹಾಗೂ ತನ್ನ ಕನಸಿಗೆ ಅಕ್ಷರ ರೂಪ ಕೊಟ್ಟ ಸಾಹಿತಿ,ಸಂಗೀತ ನಿರ್ದೇಶಕ ಕೆ. ಎಮ್ ಇಂದ್ರ ಅವರನ್ನು ವೇದಿಕೆಯಲ್ಲಿ ಸನ್ಮಾಸಿಲಾಯಿತು.
.

