ಸಸ್ಪೆನ್ಸ್ ಥ್ರಿಲ್ಲರ್ “ತ್ರಿಕಾರಂ” ಚಿತ್ರದ ಆಡಿಯೋ ಬಿಡುಗಡೆ
” ಸೀದಾ ನಿಂತ್ರು ಯಾಕೋ ಲೋಕ ಉಲ್ಟಾ ಕಾಣ್ತದೆ ” ತ್ರಿಕಾರಂ ಚಿತ್ರದ ಗೀತೆ ಬಿಡುಗಡೆಯಾಗಿದೆ. ಚಿತ್ರದ ಅಡಿ ಬರಹದಲ್ಲಿ ‘ಇದು ಸ್ಮಶಾನವಲ್ಲ’ ಎನ್ನುವ ಸಾಲು ಇದೆ.

ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿರುವ “ತ್ರಿಕಾರಂ” ಚಿತ್ರದಲ್ಲಿ ಹರ್ಷವರ್ಧನ್ – ನಿಶ್ಚಿತಾ ಶೆಟ್ಟಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡನ್ನು ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದು ಪಾಲಿಕೆಯ ಮಾಜಿ ಸದಸ್ಯ ರವೀಂದ್ರ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ನಿರ್ದೇಶಕ ದಿಲೀಪ್ ಕುಮಾರ್ ಮಾತನಾಡಿ ಉತ್ತಮ ಸಿನಿಮಾ ಮಾಡಿದ್ದೇವೆ.ಎಲ್ಲರಿಗೂ ಇಷ್ಡವಾಗಲಿದೆ. ಸಿನಿಮಾ ಮಾಡಬೇಕು ಅಂತ ಮಾಡಿಲ್ಲ. ಗೆಲ್ಲಲೇಬೇಕು ಎನ್ನುವ ಉದ್ದೇಶದಿಂದ ಸಿನಿಮಾ ಮಾಡಿದ್ದೇವೆ. ತ್ರಿಕಾರಂಅಂದರೆ ದೇವ ಮತ್ತು ದೇವರ ನಡುವಿನ ಕಥಾಹಂದರವಿದೆ. ಹೊಸದುರ್ಗದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ, ಊರನ್ನು ಕಾಪಾಡಿಕೊಳ್ಳಲು ನಾಯಕ ಹೋರಾಟ ಮಾಡುವ ಕಥೆ ಹೊಂದಿದೆ ಮಂಜು ಪಾವಗಡ, ಬಾಲರಾಜವಾಡಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ ಎಂದರು

ನಿರ್ಮಾಪಕ ಗಣೇಶ್ ಮೂರ್ತಿ ಮಾತನಾಡಿ ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡ್ತಾ ಇಲ್ಲ. ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡಿದ್ದೇವೆ, ನಾಯಕ ಹರ್ಷವರ್ದನ್ ಸೇರಿ ಎಲ್ಲರೂ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಹಕಾರ ಬೆಂಬಲವಿರಲಿ ಎಂದು ಕೇಳಿಕೊಂಡರು.
ನಾಯಕ ಹೃರ್ಷವರ್ಧನ್ ಮಾತನಾಡಿ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಸಹ ನಿರ್ದೇಶನ ಮಾಡಲು ಹೋಗಿ ನಾಯಕನಾದೆ.ಮೊದಲರ್ದ ಪರೋಡಿ ಪಾತ್ರ ಎರಡನೇ ಭಾಗದಲ್ಲಿ ಊರ ಕಾಯುವ ಪಾತ್ರ ಎಂದು ಹೇಳಿದರು.

ನಾಯಕಿ ನಿಶ್ಚಿತಾ ಶೆಟ್ಟಿ ಮಾತನಾಡಿ ಎರಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರಾಕ್ಷಿಸಿಯೇ ದೇವತೆಯೋ ಚಿತ್ರದಲ್ಲಿ ನೋಡಬೇಕು. ಮೊದಲರ್ದ ಜಂಬದ ಹುಡುಗಿ, ದ್ವಿತೀಯಾರ್ಧದಲ್ಲಿ ಮುಗ್ದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ನಾಯಕಿಯರಿಗೆ ಚಿತ್ರರಂಗದಲ್ಲಿ ಹೆಚ್ಚು ದಿನ ಅವಕಾಶವಿರುವುದಿಲ್ಲ, ನಾಯಕ ನಟರನ್ನು ಬೆಳೆಸಿ ಹೊಸಬರ ಚಿತ್ರಗಳನ್ನು ಪೆÇ್ರೀತ್ಸಾಹಿಸಿ. ನಾಯಕನ ಜೊತೆ ಮತ್ತೊಂದು ಸಿನಿಮಾ ಮಾಡೋಣ ಎಂದರು ಹೇಳಿದರು.
ಕಲಾವಿದ ನಾಗೇಂದ್ರ ಅರಸ್ ಮಾತನಾಡಿ ಶೀರ್ಷಿಕೆ ಪವರ್ ಫುಲ್ ಆಗಿದೆ. ಹೊಸ ಪ್ರತಿಭೆಗಳಿಗೆ ಮತ್ತಷ್ಡು ಅವಕಾಶ ಸಿಗಬೇಕು. ಚಿತ್ರದಲ್ಲಿ ಎರಡು ಶೇಡ್ ಗಳಿವೆ ಎಂದರು.
ಗೀತ ರಚನೆಕಾರರಾದ ಚೇತನ್, ಕೇಶವ್ , ನೃತ್ಯ ಸಂಯೋಜಕ ಕಂಬಿ ರಾಜು ಮತ್ತಿತರರು ಮಾಹಿತಿ ಹಂಚಿಕೊಂಡರು.

