ಸಿನಿಮ ಬಳಿಕ ವೆಬ್ ಸರಣಿ ನಿರ್ಮಾಣ ಆರಂಭಿಸಿದ ನಿರ್ದೇಶಕ ತರುಣ್ ಸುಧೀರ್
ನಿರ್ದೇಶಕ, ನಿರ್ಮಾಪಕ ತರುಣ್ ಸುಧೀರ್, ಏಳುಮಲೆ ಚಿತ್ರದ ಬಳಿಕ ಇದೀಗ ವೆಬ್ ಸರಣಿಯ ನಿರ್ಮಾಣ ಆರಂಭಿಸಿದ್ದಾರೆ ಅದುವೇ ರಾಕ್ಷಸ. ಇದೇ ತಿಂಗಳ 20ರಿಂದ ಜೀ5ನಲ್ಲಿ ಪ್ರಸಾರಗೊಳ್ಳಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.

ಸುಹಾನ್ ಪ್ರಸಾದ್ ಮತ್ತು ಅಪೂರ್ವ ಬರವಣಿಗೆಯಲ್ಲಿ ಮೂಡಿ ಬರುತ್ತಿರುವ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ, ಮಯೂರಿ, ಅವಿನಾಶ್, ಮಾಳವಿಕಾ, ಅಪ್ಪಣ್ಣ,ಅಭಿಜಿತ್ ಮುಂತಾದವರು ನಟಿಸಿರುತ್ತಾರೆ. ಸುಹಾನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ವೆಬ್ ಸರಣಿಯು ನಿರ್ಮಾಣಗೊಂಡಿದೆ. ಇದು ತರುಣ್ ಸುಧೀರ್ ಮೊದಲ ವೆಬ್ ಸರಣಿಯಾಗಿದೆ.
ವೆಬ್ ಸರಣಿಯು ಕ್ರೈಂ ಥ್ರಿಲ್ಲರ್ ಕಥೆಯಾಗಿದ್ದು ಘಟನೆಯ ಸುತ್ತ ನಡೆಯುವ ವಿವಿಧ ರೋಚಕ ಘಟನೆಗಳನ್ನು ಆಧರಿಸಿರುತ್ತದೆ. ಮಲಪ್ರಭಾ ನದಿಯ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಈವೆಬ್ ಸರಣಿಯು ಹೇಳುತ್ತದೆ.
ಟ್ರೈಲರ್ ಸಬ್ ಇನ್ಸ್ಪೆಕ್ಟರ್ ಹನುಮಪ್ಪ ಎಂಬ ಪಾತ್ರವನ್ನು ಪರಿಚಯಿಸುತ್ತದೆ. ಸವದತ್ತಿಯ ಎಲ್ಲಮ್ಮನ ಗುಡಿಯ ಬಳಿ ಮೊಸಳೆ ದಾಳಿಗೆ ಒಳಗಾಗುವ ಸರಣಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಹನೂಮಪ್ಪ ಬರುತ್ತಾನೆ. ಈ ಗೋಜಲಾದ ಪ್ರಕರಣಗಳ ಚಕ್ರವ್ಯೂಹವನ್ನು ಭೇದಿಸಲು ಬರುವ ಹನುಮಪ್ಪನಿಗೆ ಆಗುವ ತಳಮಳ, ಎದುರಾಗುವ ಸಮಸ್ಯೆಗಳು, ಇದು ಕೇವಲ ಒಂದು ಅಪರಾಧವೇ ಅಥವಾ ಬೇರೆ ಯಾವುದಾದರೂ ಮರ್ಮ ಅಡಗಿದೆಯೇ, ಇವೆಲ್ಲವನ್ನೂ ಕಾದು ನೋಡಬೇಕಿದೆ.
ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ “ವಿಭಿನ್ನ ಕಥೆಗಳನ್ನು ನಿರ್ಮಾಣ ಮಾಡಬೇಕೆಂಬುದು ಆಸೆ. ಅದೇ ನಿಟ್ಟಿನಲ್ಲಿ ‘ರಾಕ್ಷಸ’ ಗಮನಕ್ಕೆ ಬಂತು. ಕಥೆಯು ಉತ್ತರ ಕರ್ನಾಟಕದ ಛಾಯೆ ಹೊಂದಿರುತ್ತದೆ. ಎಲ್ಲರ ಗಮನ ಸೆಳೆಯುವುದರಲ್ಲಿ ಯಾವುದೇ ಸಂಶತವಾಲ್ಲ. ಮಲಪ್ರಭಾ ನದಿಯ ರಹಸ್ಯವನ್ನು ರೋಚಕವಾಗಿ ಕಥೆ ಬಿಡಿಸಲಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಟ ವಿಜಯ್ ರಾಘವೇಂದ್ರ ಮಾತನಾಡಿ “ರಾಕ್ಷಸ ವಿಶೇಷವಾದ ಕಥೆಯಾಗಿದೆ. ಅಷ್ಟು ಸುಲಭವಾಗಿ ಸಸ್ಪೆನ್ಸ್ ಅಂಶಗಳನ್ನು ಬಿಟ್ಟುಕೊಡುವುದಿಲ್ಲ. ಕಥೆಯ ಬಗ್ಗೆ ಇಷ್ಟವಾಗಿದ ಅಂಶಗಳೆಂದರೆ ಮೌನ, ಆಡದ ಮಾತುಗಳು, ಗೋಜಲಾದ ರಹಸ್ಯಗಳು. ಇವೆಲ್ಲವೂ ಹೇಗೆ ಹನುಮಪ್ಪನ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂಬುದು ಗಮನಾರ್ಹವಾಗಿದೆ. ಈಗಾಗಲೇ ಈ ರೋಚಕ ಕಥೆಯ ತುಣುಕು ಟ್ರೇಲರ್ ನಲ್ಲಿ ಬಿಡುಗಡೆ ಆಗಿದೆ” ಎಂದು ಹೇಳಿದರು.
ವಿಭಿನ್ನವಾದ ಕಥಾ ಹಂದರ, ಉತ್ತಮ ಛಾಯಾಗ್ರಹಣ, ಆಳವಾದ ಅಭಿನಯ ಇವೆಲ್ಲವುದರ ಮೂಲಕ “ರಾಕ್ಷಸ” ಎಲ್ಲರ ಗಮನ ಸೆಳೆಯಲು ಸಜ್ಜಾಗಿದೆ.

