Grandson sets world record for triplets: A proud moment for Rockline Venkatesh's family

ಮೊಮ್ಮೊಗನ ತ್ರಿವಳಿ ವಿಶ್ವದಾಖಲೆ: ರಾಕ್‍ಲೈನ್ ವೆಂಕಟೇಶ್ ಕುಟುಂಬಕ್ಕೆ ಹೆಮ್ಮೆಯ ಕ್ಷಣ - CineNewsKannada.com

ಮೊಮ್ಮೊಗನ ತ್ರಿವಳಿ ವಿಶ್ವದಾಖಲೆ: ರಾಕ್‍ಲೈನ್ ವೆಂಕಟೇಶ್ ಕುಟುಂಬಕ್ಕೆ ಹೆಮ್ಮೆಯ ಕ್ಷಣ

ಮಕ್ಕಳು ಸಾಧನೆ ಮಾಡಿದರೆ ಅಪ್ಪನಿಗೆ ಎಲ್ಲಿಲ್ಲದ ಅಭಿಮಾನ, ಅದರಲ್ಲಿಯೂ ಮೊಮ್ಮಕಳು ಸಾಧನೆ ಮಾಡಿದರೆ ಅಜ್ಜಿ- ತಾತನಿಗೆ ಖುಷಿ ಸಂತಸ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ, ಅಂತತ ಅಪರೂಪದ ಸಾಧನೆಗೆ ಪಾತ್ರರಾಗಿದ್ದಾರೆ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೊಮ್ಮೊಗ ಶಿವತೇಜ ವೈ.

ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ರಾಕ್‍ಲೈನ್ ವೆಂಕಟೇಶ್ ಕುಟುಂಬಕ್ಕೆ ಮತ್ತೊಂದು ಹೆಮ್ಮೆಯ ಗರಿ ಲಭಿಸಿದೆ. 14 ವರ್ಷದ ಮೊಮ್ಮಗ ಶಿವತೇಜ ವೈ ‘ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್’ ಬಿಡಿಸುವಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವ ಮೂಲಕ ತ್ರಿವಳಿ ವಿಶ್ವ ದಾಖಲೆ ನಿರ್ಮಿಸಿ ಮಾದರಿಯಾಗಿದ್ಧಾರೆ

ಈ ಅಪರೂಪದ ಸಾಧನೆಯನ್ನು ಸಂಭ್ರಮಿಸಲು ರಾಕ್ ಲೈನ್ ವೆಂಕಟೇಶ್ ಕುಟುಂಬದ ತಮ್ಮ ಮನೆ ಮಗನ ಸಾಧನೆ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿದರು, ಈ ವೇಳೆ ಯತೀಶ್ ವೆಂಕಟೇಶ್ ಸೇರಿ ಕುಟುಂಬದ ಎಲ್ಲ ಸದಸ್ಯರು ಹಾಜರಿದ್ದರು

ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮಾತನಾಡಿ ಸಿನಿಮಾಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಳ್ಳುತ್ತೇವೆ. ಸಿನಿಮಾ ಕಾರ್ಯಕ್ರಮಗಳಲ್ಲೇ ಕಾಣಿಸಿಕೊಳ್ಳುವುದು ಹೆಚ್ಚು. ಈ ಬಾರಿ ಸಿನಿಮಾ ಹೊರತುಪಡಿಸಿ, ಮೊಮ್ಮಗ ಶಿವತೇಜನ ಸಾಧನೆ ಬಗ್ಗೆ ಹೇಳಲು ನಿಮ್ಮ ಮುಂದೆ ಬಂದಿರುವುದು ನಮಗೆ ಅಪಾರ ಹೆಮ್ಮೆಯ ಸಂಗತಿ. ಇಂದಿನ ಮಕ್ಕಳು ಹೆಚ್ಚಾಗಿ ಟಿವಿ, ಮೊಬೈಲ್‍ಗಳಲ್ಲಿ ಕಾಲ ಕಳೆಯುವುದನ್ನು ನೋಡುತ್ತೇವೆ, ಮಗೆ ಅಷ್ಟಾಗಿ ಇಷ್ಟವಾಗದ ವಿಷಯ. ಆದರೆ ಅದರ ನಡುವೆಯೂ ಮುಂದಿನ ಪೀಳಿಗೆ ಇಂತಹ ವಿಭಿನ್ನ ಸಾಧನೆ ಮಾಡಿರುವುದು ಖುಷಿ ತಂದಿದೆ. ಈ ಸಾಧನೆ ಕುಟುಂಬಕ್ಕೆ ಕಿರೀಟವಿದ್ದಂತೆ” ಎಂದು ಹರ್ಷ ವ್ಯಕ್ತಪಡಿಸಿದರು.

ಮಗನ ಪ್ರತಿಭೆಗೆ ತಂದೆ-ತಾಯಿಯ ಸಾಥ್

ಮಗನ ಸಾಧನೆಯ ಬಗ್ಗೆ ಮಾತನಾಡಿದ ತಂದೆ ಯತೀಶ್ ವೆಂಕಟೇಶ್, “ಮಕ್ಕಳಲ್ಲಿರುವ ಪ್ರತಿಭೆ ಏನು ಎಂಬುದನ್ನು ಪೆÇೀಷಕರು ಮೊದಲೇ ಗಮನಿಸಬೇಕು. ಆಧಾರದ ಮೇಲೆ ಅವರಿಗೆ ಬೇಕಾದ ಬೆಂಬಲ ನೀಡಬೇಕು. ಮಗನ ವಿಶೇಷ ರೂಬಿಕ್ಸ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಅವನ ತಾಯಿ. ತಂದೆಯಾಗಿ ಅವನಿಗೆ ಬೇಕಾದ ಸೌಲಭ್ಯ ಮತ್ತು ಪೆÇ್ರೀತ್ಸಾಹ ನೀಡುವ ಕೆಲಸ ಮಾಡಿದ್ದೇನೆ ಅಷ್ಟೆ” ಎಂದರು.

ಶಿವತೇಜನ ತಾಯಿ ಮಾತನಾಡಿ, ಕುಟುಂಬದಲ್ಲಿ ರೂಬಿಕ್ಸ್ ಕ್ಯೂಬ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಇದೇ ಮೊದಲು. ಶಿವತೇಜ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರೂಬಿಕ್ಸ್ ಕ್ಯೂಬ್ ಅಭ್ಯಾಸ ಮಾಡುತ್ತಿದ್ದಾನೆ. ಅದರ ಎಲ್ಲಾ ಕಠಿಣ ಹಂತಗಳನ್ನು ಯಶಸ್ವಿಯಾಗಿ ಮುಗಿಸಿ, ಈಗ ಈ ದಾಖಲೆ ಬರೆದಿದ್ದಾನೆ” ಎಂದು ಸಂತಸ ವ್ಯಕ್ತಪಡಿಸಿದರು

ಸಾಧನೆಯ ಹಿನ್ನೆಲೆ

ಬೆಂಗಳೂರಿನ ಶಿವತೇಜ ಯತೀಶ್ ಅತಿ ಹೆಚ್ಚು ಬಾರಿ ಮಿಶ್ರಣಗೊಂಡ ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್‍ಗಳನ್ನು ಬಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 14 ವರ್ಷ 9 ತಿಂಗಳ ವಯಸ್ಸಿನಲ್ಲಿ, 1 ಗಂಟೆ, 27 ನಿಮಿಷ, 12 ಸೆಕೆಂಡ್ ಮತ್ತು 30 ಮಿಲಿಸೆಕೆಂಡ್‍ಗಳಲ್ಲಿ ಒಟ್ಟು 21 ಬಾರಿ ಮೆಗಾಮಿಂಕ್ಸ್ ಕ್ಯೂಬ್‍ಗಳನ್ನು ಬಿಡಿಸಿ ಈ ಸಾಧನೆ ಮಾಡಿದ್ದಾರೆ.

ಶಾಸಕ ಮುನಿರತ್ನ ಅವರ ಮೊಮ್ಮಗನೂ ಆಗಿರುವ ಶಿವತೇಜ, ಈ ವಿಶಿಷ್ಟ ಕೌಶಲ್ಯದ ಮೂಲಕ ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದು ಎರಡೂ ಕುಟುಂಬಗಳಿಗೆ ಹೆಮ್ಮೆಯ ಕ್ಷಣವಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin