ಸಸ್ಪೆನ್ಸ್ , ಥ್ರಿಲ್ಲರ್ ಸಿನಿಮಾ “ಪೀಟರ್” ಏಪ್ರಿಲ್ 10 ರಂದು ಬಿಡುಗಡೆ
ಕಳೆದ ಒಂದು ವಾರದಿಂದ ಚಿತ್ರರಂಗ ತುಂಬಾ ಲವಲವಿಕೆಯಿಂದ ಇದೆ. ‘ಲವ್ ಮಾಕ್ಟೇಲ್ 3’ ಸಿನಿಮಾ ಚಿತ್ರಮಂದಿರದಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿವೆ. ಇದೇ ಹೊತ್ತಿನಲ್ಲಿ ಕುತೂಹಲ ಮೂಡಿಸಿರುವ ಮತ್ತೊಂದು ಸಿನಿಮಾ “ಪೀಟರ್”. ಏಪ್ರಿಲ್ 10 ರಂದು ಬಿಡುಗಡೆಗೆ ಸಜ್ಜಾಗಿದೆ

ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ. ಕಂಟೆಂಟ್ ಇರುವ ಸಿನಿಮಾಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ನಮಗೆಲ್ಲ ತಿಳಿದಿದೆ. ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ಈ ಹಿಂದೆ ‘ದೂರದರ್ಶನ’ ಎಂಬ ಉತ್ತಮ ಸಿನಿಮಾ ಮಾಡಿದ್ದರು. ರವಿ ಹಿರೇಮಠ್ ಮತ್ತು ರಾಕೇಶ್ ಹೆಗಡೆ ನಿರ್ಮಾಣ ಮಾಡಿದ್ಧಾರೆ
ರಿತ್ವಿಕ್ ಮುರಳಿಧರ್ ಸಂಗೀತ ಈ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.ಅಜಯ್ ಗೊಗಾವಲೆ ಹಾಡಿರುವ ಈ ಫ್ರೆಂಡ್ ಶಿಪ್ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ.
ರಾಜೇಶ್ ಧ್ರುವ ಮತ್ತು ರವೀಕ್ಷಾ ಶೆಟ್ಟಿ ನಡುವಿನ ಬ್ಯೂಟಿಫುಲ್ ಡ್ಯುಯೆಟ್ ಸಾಂಗ್. ಪ್ರತಿಮಾ ನಾಯಕ್ ಅವರು ಕಾಣಿಸಿಕೊಂಡಿರುವ ಈ ಹಾಡು ತುಂಬಾ ಎಮೋಷನಲ್ ಆಗಿದೆ ಮತ್ತು ಚಿತ್ರದ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆ ಇದೆ.
ನಾಯಕನಾಗಿ ರಾಜೇಶ್ ದೃವ ಕಾಣಿಸಿಕೊಂಡಿದ್ದು ಆಟಿಟ್ಯೂಡ್ ಮತ್ತು ಪ್ರೆಸೆನ್ಸ್ ತುಂಬಾ ಇಂಟರೆಸ್ಟಿಂಗ್ ಆಗಿದೆ.ರವೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ರಾಯಲ ಮತ್ತು ಇತರ ಹೊಸ ಪ್ರತಿಭೆಗಳು ಚಿತ್ರದಲ್ಲಿದ್ದಾರೆ.
‘ಪೀಟರ್’ ಸಿನಿಮಾದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಲವ್, ಎಮೋಷನ್ ಮತ್ತು ಫ್ರೆಂಡ್ ಶಿಪ್ ಹೀಗೆ ಎಂಟರ್ಟೈನ್ಮೆಂಟ್ ಗೆ ಬೇಕಾದ ಎಲ್ಲಾ ಎಲಿಮೆಂಟ್ಸ್ ಇವೆ. ಕರಾವಳಿ ಭಾಗದ ಮಣ್ಣಿನ ಸೊಗಡಿನ ಕಥೆ ಇದಾಗಿದ್ದು, ಏಪ್ರಿಲ್ 10 ರಂದು ತೆರೆಗೆ ಬರಲಿದೆ.

