"Goggayya" movie to release across the state on April 10th

“ಗೊಗ್ಗಯ್ಯ” ಚಿತ್ರ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆ - CineNewsKannada.com

“ಗೊಗ್ಗಯ್ಯ” ಚಿತ್ರ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆ

ಸಾಮಾನ್ಯವಾಗಿ ಚಿಕ್ಕಮಕ್ಕಳು ಊಟ ಮಾಡದಿದ್ದರೆ, ತಾಯಿ ಹೇಳುವ ಪದವೇ ಊಟ ಮಾಡು ಕಂದ. ಇಲ್ಲದಿದ್ದರೆ “ಗೊಗ್ಗಯ್ಯ” ಬರುತ್ತಾನೆ ಅಂತ. ಈಗ “ಗೊಗ್ಗಯ್ಯ” ಎಂಬ ಶೀರ್ಷಿಕೆಯಲ್ಲೇ ಸಿನಿಮಾ ನಿರ್ಮಾಣವಾಗಿದ್ದು ತೆರೆಗೆ ಏಪ್ರಿಲ್ 10 ರಂದು ತೆರೆಗೆ ಬರುತ್ತಿದೆ.

ನಿರ್ದೇಶಕ ಹಾಗೂ ನಾಯಕ ವಸಂತ್ ಮಾತನಾಡಿ “ಗೊಗ್ಗಯ್ಯ” ಚಿತ್ರವನ್ನು ರಾಧಾ ಜೆ ನಿರ್ಮಾಣ ಮಾಡಿದ್ದಾರೆ ಸಂಗೀತ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದೇನೆ. ತನ್ಮಯ್ ಎಸ್ ಆನಂದ್ ಕುಮಾರ್ ಚಿತ್ರಕಥೆ, ಗೀತರಚನೆ ಹಾಗೂ ಸಂಭಾಷಣೆ ಬರೆದು ನೃತ್ಯ ನಿರ್ದೇಶನ ಮಾಡಿದ್ದರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಚಿತ್ರದ “ನೀ ಹೆದರದಿರು ಕಂದ” ಎಂಬ ಹನುಮಂತನ ಕುರಿತಾದ ಹಾಡು ಬಿಡುಗಡೆ ಮಾಡಿದ್ದೇವೆ. ಕೈಲಾಶ್ ಖೇರ್ ಹಾಡಿರುವ ಹಾಡನ್ನು ತನ್ಮಯ್ ಎಸ್ ಆನಂದ್ ಕುಮಾರ್ ಬರೆದಿದ್ದಾರೆ. ಕಾಮಿಡಿ, ಹಾರಾರ್ ಹಾಗೂ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರ ಏಪ್ರಿಲ್ 10 ರಂದು ಬಿಡುಗಡೆಯಾಗುತ್ತಿದೆ ಎಂದರು

ನಿರ್ಮಾಪಕಿ ರಾಧಾ ಮಾತನಾಡಿ ಸಾಮಾನ್ಯವಾಗಿ ತಾಯಂದಿರು ಮಕ್ಕಳು ಊಟ ಮಾಡಿದಿದ್ದಾಗ ಬಳಸುವ ಮೊದಲ ಪದವೇ “ಗೊಗ್ಗಯ್ಯ” ಅಂತ. ನಾನೇ ನಿರ್ದೇಶಕರಿಗೆ ಈ ಶೀರ್ಷಿಕೆ ಕೊಟ್ಟೆ. ಶೀರ್ಷಿಕೆಗೆ ಕಥೆ ಪೂರಕವಾಗಿದೆ ಎಂದು ತಿಳಿಸಿದರು.

ನಾಯಕಿ ಸ್ನೇಹ, ನಟರಾದ ಕೌರವ ವೆಂಕಟೇಶ್, ವೈಭವ ನಾಗರಾಜ್, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಹಾಗೂ ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ, ನಿರ್ಮಾಣದ ಮೇಲ್ವಿಚಾರಣೆಯನ್ನು ಹೊತ್ತಿರುವ ತನ್ಮಯ್ ಎಸ್ ಆನಂದ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಗೊಗ್ಗಯ್ಯ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin