“ಮದನಿಕ” ಚಿತ್ರದಲ್ಲಿ ಕತ್ತಿ ಹಿಡಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ
ಗ್ಲಾಮರಸ್ ಮತ್ತು ಆಕ್ಷನ್ ಪಾತ್ರಗಳಲ್ಲಿ ಮಿಂಚಿದ್ದ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ಕತ್ತಿ ಹಿಡಿದು ಸೆಣೆಸಾಡಲು ಮುಂದಾಗಿದ್ದಾರೆ, ಅದುವೇ “ಮದನಿಕ” ಚಿತ್ರದಲ್ಲಿ. `ಮದನಿಕ’ ಎನ್ನುವುದು ದೇವಾಲಯಗಳಲ್ಲಿ ಕಾಣುವ ಶಿಲ್ಪಕಲೆಯ ಒಂದು ಪ್ರಾಕಾರ. ಚಿತ್ರದ ಕಥೆಗೆ ಸೂಕ್ತವೆಂಬ ಕಾರಣಕ್ಕೆ ಈ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ ಎಂದು ಚಿತ್ರತಂಡ ಸಮಜಾಯಿಷಿ ನೀಡಿದೆ.

ಸದ್ದುಗಲ್ಲವಿಲ್ಲ `ಮದನಿಕ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದೆ, ಈ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಮತ್ತು ಆಡಿಯೋ ಬಿಡುಗಡೆ ಮಾಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಮತ್ತು ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಮದನಿಕ ಚಿತ್ರದ ಮೂಲಕ ನಿರ್ದೇಶಕ ಬಿ.ಎಸ್.ಸಂಜಯ್ ಮತ್ತೆ ಚಿತ್ರರಂಗಕ್ಮೆ ಬಂದಿದ್ಧಾರೆ. ಹೀಗಾಗಿ ಚಿತ್ರ ಮೇಲಿನ ನಿರೀಕ್ಷೆ ಇನ್ನಷ್ಟು ನಿರೀಕ್ಷೆ ಹೆಚ್ಚಿದೆ.
ನಿರ್ದೇಶಕ ಬಿ ಎಸ್ ಸಂಜಯ್ ಮಾತನಾಡಿ ಗೊತ್ತಿಲ್ಲದಂತೆ ಕಥೆ ಮಾಡುವಾಗ ಒಂದಷ್ಟು ಘಟನೆಗಳು ನಡೀತು. ತುಂಬಾ ಅದ್ಭುತವಾಗಿ ಕಥೆ ಮೂಡಿ ಬಂದಿದೆ. ನಟಿ ರಾಗಿಣಿ ಈ ಕಥೆ ಒಪ್ಪಿ ಮಾಡಿದ್ದಾರೆ. ಸಿನಿಮಾದಲ್ಲಿ ಹತ್ತು ಹಾಡುಗಳಿವೆ. ಕ್ಲಾಸಿಕಲ್ ಸಾಂಗ್ಸ್ ಇದೆ. ಮದನಿಕ ಅಂದ್ರೆ 400 ವರ್ಷದ ಹಳೇ ಕಥೆ. ರಾಗಿಣಿ ಅವರು ಮದನಿಕ ಆಗಿ ನಟಿಸುತ್ತಿದ್ದಾರೆ ಎಂದರು

ನಟಿ ರಾಗಿಣಿ ಮಾತನಾಡಿ ಮದನಿಕ ಬಗ್ಗೆ ಸಾಕಷ್ಟು ಕುತೂಹಲವಿದೆ. ಇದು ಬರೀ ಆರಂಭ ಅಷ್ಟೇ. ಗ್ಲಿಂಪ್ಸ್ ಆಫ್ ಮದನಿಕ ನೋಡಿದ್ದೀವಿ ಅಷ್ಟೆ. ಆದರೆ ಅದೆ ಹಿಂದೆ ಅದ್ಭುತ ನಟನೆ, ಕಥೆ, ಒಂದಷ್ಟು ಕಥೆ ಇದಾವೆ. ಎರಡೂವರೆ ವರ್ಷದ ಜರ್ನಿ. ಎಲ್ಲರಿಗೂ ಗೊತ್ತಿರುವ ಹಾಗೇ, ಟೆಕ್ನಾಲಜಿ, ಮೇಕಿಂಗ್, ಮ್ಯೂಸಿಕ್ ಎಲ್ಲವೂ ಬದಲಾಗಿದೆ. ಅಂದುಕೊಂಡಿರಲಿಲ್ಲ. ಅದ್ಭುತವಾದ ಆಕ್ಷನ್ ಸೀಕ್ವೆನ್ಸ್ ಇದೆ, ಮ್ಯೂಸಿಕ್ ಇದೆ ಎಂದು ಹೇಳಿದರು
ಸಂಗೀತ ನಿರ್ದೇಶಕ ಸಲಾಂ ಕೇರಳ ಮಾತನಾಡಿ, ಇದಕ್ಕಿಂತ ಮೊದಲು ಮೂರು ಸಿನಿಮಾ ಮಾಡಿದ್ದೆ. ನಿರ್ದೆಶಕ ಸಂಜಯ್ ಒಂದು ಒಳ್ಳೆ ಅವಕಾಶ ನೀಡಿದ್ದರು. ಅದು ಜೀವನದ ಅತ್ಯುತ್ತಮ ಅವಕಾಶ ಎಂದರು

ನಿರ್ದೇಶಕ ವಿಕ್ಟರಿ ವಾಸು ಮಾತನಾಡಿ ಮದನಿಕ ಹೆಸರೇ ಒಂದು ಆಕರ್ಷಕ, ಸುಂದರ ಹುಡುಗಿ. ಅದಕ್ಕೆ ರಾಗಿಣಿ ಜೀವ ತುಂಬಿದ್ದಾರೆ. ಸಿನಿಮಾಗೆ ಗೆಲುವು ಸಿಗಲಿ ಎಂದು ಹಾರೈಸಿದರು
ಸುಜಾತ ಲಕ್ಷ್ಮೀ ಹಾಗೂ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ. ಧರ್ಮ ಕೀರ್ತಿರಾಜ್, ಹರೀಶ್ ರಾಜ್, ಅಶ್ವಿನ್, ರಾಜ್ವಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸಂಗೀತ ಕಲಾಂ ಕೇರಳ, ಛಾಯಾಗ್ರಹಣ ಆರ್ ಗಿರಿ, ಸಾಹಸ ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಅವರು ನೀಡಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ತೆರೆಗೆ ತರಲು ತಂಡ ರೆಡಿಯಾಗಿದೆ.


