“ಪೆದ್ದಿ” ಚಿತ್ರದ ಟ್ರೈಲರ್ ಬಿಡುಗಡೆ: ಅಥ್ಲೇಟರ್ ಆಗಿ ಕಾಣಿಸಿಕೊಂಡ ನಟ ರಾಮ್ ಚರಣ್
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆ ಬಹು ನಿರೀಕ್ಷಿತ ಆಕ್ಷನ್ ಸ್ಪೋರ್ಟ್ಸ್ ಡ್ರಾಮಾ “ಪೆದ್ದಿ” ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಾಯಕ ರಾಮ್ ಚರಣ್, ನಾಯಕಿ ಜಾಹ್ನವಿ ಕಪೂರ್, ನಿರ್ದೇಶಕ ಬುಚ್ಚಿ ಬಾಬು ಸನಾ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಪೆದ್ದಿ ಟ್ರೇಲರ್ ನಲ್ಲಿ ನಿರ್ದೇಶಕ ಬುಚ್ಚಿ ಬಾಬು ಸನಾ ಬೆವರು, ಹೋರಾಟ ಮತ್ತು ಕ್ರೀಡೆಯ ಮೇಲಿನ ಅವಿನಾಭಾವ ಪ್ರೀತಿ ಕಟ್ಟಿಕೊಟ್ಟಿದ್ದಾರೆ. ನಾಯಕ ಪೆದ್ದಿ ಬಹುಮುಖ ಪ್ರತಿಭೆಯ ಕ್ರೀಡಾಪಟು. ದೈಹಿಕ ಬಲದಿಂದ ಜೀವನೋಪಾಯ ಗಳಿಸುತ್ತಾನೆ. ಅದು ಕ್ರಿಕೆಟ್ ಆಗಿರಲಿ, ಕುಸ್ತಿಯಾಗಿರಲಿ ಅಥವಾ ಓಟವಾಗಿರಲಿ. ಆತನ ಈ ನಡೆ ಹಳ್ಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೆ ಇಷ್ಟವಾಗುತ್ತದೆ. ಇದು ಆ ಊರಿನ ಜಮೀನ್ದಾರನ ಕಣ್ಣು ಕೆಂಪು ಮಾಡುವಂತೆ ಮಾಡುತ್ತದೆ.
ರಾಮ್ ಚರಣ್ ಅಥ್ಲೆಟಿಕ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಸಿಕ್ಸ್ ಪ್ಯಾಕ್ನಲ್ಲಿ ಖದರ್ ತೋರಿಸಿದ್ದಾರೆ. ಕ್ರಿಕೆಟ್ ಬ್ಯಾಟ್ ಬೀಸುವ ರೀತಿ, ಕುಸ್ತಿ ಅಖಾಡದಲ್ಲಿ ತೊಡೆ ತಟ್ಟುವ ರೀತಿ ಅಭಿಮಾನಿಗಳಿಗೆ ಇಷ್ಟವಾಗಲಿದೆ. ಜಾನ್ವಿ ಕಪೂರ್ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನಲ್ಲಿ ಶಿವರಾಜ್ಕುಮಾರ್, ಜಗಪತಿ ಬಾಬು, ದಿವ್ಯೆಂದು ಮತ್ತು ಬೋಮನ್ ಇರಾನಿ ಪಾತ್ರಗಳ ಪರಿಚಯ ಮಾಡಿಕೊಡಲಾಗಿದೆ.
ಪೆದ್ದಿ ಸಿನಿಮಾಗೆ ಅದ್ಬುತವಾಗಿ ಅವಿನಾಶ್ ಕೊಲ್ಲಾ ಪ್ರೊಡಕ್ಷನ್ಸ್ ಡಿಸೈನ್ ಮಾಡಿದ್ದು, ಆರ್ ರತ್ನವೇಲು ಕ್ಯಾಮೆರಾ ಹಿಡಿದಿದ್ದು,ಎ.ಆರ್. ರೆಹಮಾನ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ವೃದ್ಧಿ ಸಿನಿಮಾಸ್ ಬ್ಯಾನರ್ ನಡಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡಿದ್ದು, ಮೈತ್ರಿ ಮೂವೀ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಚಿತ್ರವನ್ನು ಪ್ರಸ್ತುತಪಡಿಸಲಿವೆ. ಜೂನ್ 4ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

