Children's film "Addiction" is ready to hit the screens: Raghavendra Rajkumar in a special role

ಮಕ್ಕಳ ಚಿತ್ರ “ಅಡಿಕ್ಷನ್” ತೆರೆಗೆ ಬರಲು ಸಿದ್ದ : ವಿಶೇಷಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ - CineNewsKannada.com

ಮಕ್ಕಳ ಚಿತ್ರ “ಅಡಿಕ್ಷನ್” ತೆರೆಗೆ ಬರಲು ಸಿದ್ದ : ವಿಶೇಷಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್

ಬೃಂದಾ ಎನ್ ಜಯರಾಮ್ ನಿರ್ಮಾಣ ಮಾಡಿರುವ “ಅಡಿಕ್ಷನ್” ಎಂಬ ಚಿತ್ರ ಸೆನ್ಸಾರ್ ಮಂಡಳಿಯಿಂದ ಮಕ್ಕಳ ಚಲನಚಿತ್ರ ಪ್ರಮಾಣಪತ್ರ ಪಡೆದುಕೊಂಡಿದೆ. ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಮಕ್ಕಳಲ್ಲಿನ ಮೊಬೈಲ್ ಚಟದ ಕುರಿತ ಕಥೆಯಾಗಿದ್ದು, ನೈಜ ಘಟನೆಗಳನ್ನು ಆಧರಿಸಿ ಕಥೆ ರಚಿಸಲಾಗಿದೆ.

ಅಜಯ್ ಕುಮಾರ್ ಎ ಜೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇನಿರ್ದೇಶಕರಿಗೆ ಎರಡನೇ ಚಿತ್ರ. ಮುಖ್ಯ ಪಾತ್ರದಲ್ಲಿ ಸುಂದರ ಕೃಷ್ಣ ಅರಸ್ ಮೊಮ್ಮಗ, ನಾಗೇಂದ್ರ ಅರಸ್ ಮಗ ವಿಧು ಸುಂದರಕೃಷ್ಣ ಅರಸ್ ನಟಿಸಿದ್ದಾರೆ. ಈ ಮೂಲಕ ಸುಂದರಕೃಷ್ಣ ಅರಸ್ ಮೂರನೇ ತಲೆಮಾರಿನ ಕುಡಿ ಸಹ ಚಿತ್ರರಂಗ ಪ್ರವೇಶಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ

ಅತಿಥಿ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ “ಲವ್ ಯು ಮುದ್ದು” ಖ್ಯಾತಿಯ ಸಿದ್ದು ಮೂಲಿಮನಿ ನಟಿಸಿದ್ದಾರೆ.. ಉಳಿದಂತೆ ನಾ ನಿನ್ನ ಬಿಡಲಾರೆ ಧಾರಾವಾಹಿ ಖ್ಯಾತಿಯ ರಿಷಿಕ, ಕಾಟೇರ ಚಿತ್ರ ಹಾಗೂ ಅಣ್ಣಯ್ಯ ಧಾರಾವಾಹಿಯ ಬೇಬಿ ಅಂಕಿತ ಗೌಡ. ಮಾಸ್ಟರ್ ಆರುಷ್ ಗುಣಕಿಮಠ, ಶಾಮಸುಂದರ್, ಸುಂದರ್ ವೀಣಾ, ಹರೀಶ್ ರೈ, ಸಿತಾರಾ, ತನುಶ್ರೀ, ಅನುಪಮಾ ಪಂಚಾಕ್ಷರಿ, ಶೈಲೇಶ್, ಮುಂತಾದವರು ತಾರಾಬಳಗದಲ್ಲಿದ್ದಾರೆ.

ವಿಶೇಷ ಪಾತ್ರದಲ್ಲಿ ನಿಮಾನ್ಸ್ ಮುಖ್ಯಸ್ಥರಾಗಿದ್ದ ಪದ್ಮಶ್ರೀ ಸಿ ಆರ್ ಚಂದ್ರಶೇಖರ್ ಅಭಿನಯಿಸಿದ್ದಾರೆ. ಒಂದು ಒಳ್ಳೆಯ ಸಂದೇಶ ನೀಡುವ ಪಾತ್ರ ಅವರದು.

ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಿರುವ ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ರಾಯರ ಹರೀಶ್ ಮತ್ತು ನೆಲಮನೆ ರಾಘವೇಂದ್ರ ಗೀತರಚನೆ ಮಾಡಿದ್ದಾರೆ. ವ್ಯಾಸರಾಜ ಸೋಸಲೆ, ಮೊಹಮ್ಮದ್ ಸಾಬ್, ಸ್ನೇಹ ಹಾಗೂ ಅನಿತಾ ಸಾರಾ ಮಹೇಶ್, ಆದರ್ಶ್, ಮುಂತಾದವರು ಹಾಡುಗಳನ್ನು ಹಾಡಿದ್ದಾರೆ. ಜೂನ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಚಿತ್ರತಂಡ..

ನಿರ್ಮಾಪಕಿ ಬೃಂದಾ ಎನ್ ಜಯರಾಮ್ À ಜನ್ಮದಿನದ ಪ್ರಯುಕ್ತ ಚಿತ್ರತಂಡ ಟೈಟಲ್ ಟೀಸರ್ ಬಿಡುಗಡೆ ಮಾಡಿದೆ. ಟೈಟಲ್ ಟೀಸರ್ ನಿರೀಕ್ಷೆಗೂ ಮೀರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin