ಸೆನ್ಸಾರ್ ಅಂಗಳಕ್ಕೆ “ಗುರುತ್ವಾಕರ್ಷಣೆ” ಚಿತ್ರ: ಸದ್ಯದಲ್ಲೇ ತೆರೆಗೆ
ಮಹೇಂದರ್ ಸಿ ಗುಂಡೇಗಾಲ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಮಾಡಿರುವ ಚಿತ್ರ “ಗುರುತ್ವಾಕರ್ಷಣೆ”. ಇದಕ್ಕೆ ಸಹ ನಿರ್ಮಾಪಕರಾಗಿ ದಿಲೀಪ್ ಸಿದ್ದಪ್ಪಾಜಿ ಕೊಳ್ಳೇಗಾಲ ಸಾಥ್ ನೀಡಿದ್ದಾರೆ. ಈವರೆಗೂ ಕೆಲವು ಕಿರುಚಿತ್ರ ನಿರ್ದೇಶಿಸಿರುವ ಮಹೇಂದರ್ ಸಿ ಗುಂಡೇಗಾಲ ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.

“ಗುರುತ್ವಾಕರ್ಷಣೆ” ಶೀರ್ಷಿಕೆ ಕೇಳಿದ ತಕ್ಷಣ ಎಲ್ಲರಿಗೂ ವೈಜ್ಞಾನಿಕ ಚಿತ್ರ ಅನಿಸುವುದು ಸಹಜ. ಆದರೆ ಇದು ವೈಜ್ಞಾನಿಕ ಚಿತ್ರವಲ್ಲ.”ಗುರುತ್ವಾಕರ್ಷಣೆ”ಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಇದು ಕೊಳ್ಳೇಗಾಲ ಮತ್ತು ಚಾಮರಾಜನಗರದಲ್ಲಿ ನಡೆಯುವ ಕಥೆ. ಚಿತ್ರೀಕರಣ ಸಹ ಅಲ್ಲೇ ಆಗಿದೆ.
ನಿರ್ದೇಶಕ ಮಹೇಂದರ್ ಸಿ ಗುಂಡೇಗಾಲ ಮಾತನಾಡಿ, ಈಗಾಗಲೇ ನೀತು ನಿನಾದ್ ಸಂಗೀತ ನೀಡಿರುವ ಎರಡು ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಿದ್ದು, ಮೆಚ್ಚುಗೆಯ ಜೊತೆಗೆ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆ ಸಹ ಆಗುತ್ತಿದೆ. ಸದ್ಯದಲ್ಲೇ ಚಿತ್ರ ತೆರೆಗೆ ತರುವ ಪ್ರಯತ್ನ ಕೂಡ ನಡೆಯುತ್ತಿದೆ. ತಾಯಿಗೆ ನಿರ್ದೇಶಕನಾಗಬೇಕೆಂಬ ಆಸೆ. ಅವರು ಕಣ್ಣು ಮುಚ್ಚುವ ಮೊದಲು ಹೇಳಿದ ಮಾತು ಹೀಡೇರಿಸಲು.ಅವರ ಆಸೆ- ಆಶಯದಂತೆ ಸತತ ಒಂದುವರೆ ವರ್ಷ ಹಗಲಿನಲ್ಲಿ ಕೆಲಸ ಮಾಡಿ ರಾತ್ರಿ ಈ ಚಿತ್ರದ ಕಥೆ ಸಿದ್ದ ಮಾಡಿಕೊಳ್ಳುತ್ತಿದ್ದೆ. ಕೊಳ್ಳೇಗಾಲ ಮತ್ತು ಮೈಸೂರಿನ ಪ್ರತಿಭೆಗಳನ್ನು ಒಗ್ಗೂಡಿಸಿಕೊಂಡು ಮಾಡಿರುವ ಸಿನಿಮಾ ಎಂದರು

ಜಯಂತ್ ದೊರೆ ಚಿತ್ರದ ನಾಯಕನಾಗಿದ್ದು, ಸುಕೃತಿ ನಾಯಕಿಯಾಗಿ ನಟಿಸಿದ್ದಾರೆ. ಪ್ರಭಾಕರ್, ದಿವ್ಯ ಕುಮಾರ್ ಸತ್ತೇಗಾಲ, ಮಂಡ್ಯ ಸಿದ್ದು, ವಿಜಯ್ ಕಿರಣ್, ಮಾಸ್ಟರ್ ಶೌರ್ಯ ಮತ್ತು ಡಾ.ಭಾನುಪ್ರಕಾಶ್ ಎ ಎಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಪವಿತ್ರನ್ – ವಿಘ್ನೇಶ್ ವಿಕ್ಕಿ ಛಾಯಾಗ್ರಹಣ ಹಾಗೂ ರಕ್ಷಿತ್ ರಾಜ್ ಸಂಕಲನ ” ಗುರುತ್ವಾಕರ್ಷಣೆ ” ಚಿತ್ರಕ್ಕಿದೆ.

