“ಕನಕರಾಜ” ಚಿತ್ರದ ಹಾಡು ಬಿಡುಗಡೆ : ಕುತೂಹಲ ಹೆಚ್ಚಳ
ಯುವ ನಟ ಅನೂಪ್ ರೇವಣ್ಣ ನಾಯಕನಾಗಿ ನಟಿಸಿರುವ `ಕನಕರಾಜ’ ಚಿತ್ರದ ಮೊದಲ ಹಾಡು ಹಾಗೂ ಮೋಷನ್ ಪೆÇೀಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಎಸ್ ಆರ್ ಸನತ್ ಕುಮಾರ್ ನಿರ್ಮಿಸಿ ಡಾ.ವಿ.ನಾಗೇಂದ್ರಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆ ಮಾಡಿರುವ ಚಿತ್ರವನ್ನು ಆರ್ ರವೀಂದ್ರ ನಿರ್ದೇಶಿಸಿದ್ದಾರೆ

ಡಾ|.ವಿ.ನಾಗೇಂದ್ರಪ್ರಸಾದ್ ಬರೆದು ಸಂಗೀತ ಸಂಯೋಜಿಸಿರುವ ಚಿತ್ರದ ಮೊದಲ ಹಾಡನ್ನು ಮಾಜಿ ಸಚಿವರಾದ ಎಚ್ ಎಂ ರೇವಣ್ಣ ಅನಾವರಣ ಮಾಡಿದರು. ಮೋಷನ್ ಪೋಸ್ಟರ್ ಹಿರಿಯ ನಟ ದೊಡ್ಡಣ್ಣ ಬಿಡುಗಡೆ ಮಾಡಿದರು. ರಾಜಕೀಯ ಮುಖಂಡರಾದ ವೆಂಕಟೇಶ್, ನಿರ್ಮಾಪಕರ ಸಂಘದ ಉಪಾಧ್ಯಕ್ಷ ನಂದಿಹಾಳ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಮತ್ತಿತರು ಈ ಕ್ಷಣಕ್ಕೆ ಸಾಕ್ಷಿಯಾದರು
ನಿರ್ಮಾಪಕ ಎಸ್ ಅರ್ ಸನತ್ ಕುಮಾರ್ ಮಾತನಾಡಿ ಇದೊಂದು ವಿಭಿನ್ನ ಕಥೆ. ಯುವಜನತೆ ಮನದಲ್ಲಿಟ್ಟಿಕೊಂಡು ವಿ.ನಾಗೇಂದ್ರಪ್ರಸಾದ್ ಕಥೆ ಬರೆದಿರುವ ಸಿನಿಮಾ ಕೂಡ. ಅನೂಪ್ ರೇವಣ್ಣ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ನಿಮಿಷ ನಟಿಸಿದ್ದಾರೆ. ಹಿರಿಯ ಕಲಾವಿದರಾದ ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ, ಯಮುನ ಶ್ರೀನಿಧಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮೊದಲ ಹಾಡಿನ ಬಿಡುಗಡೆಯಾಗಿದೆ. ಇನ್ನೂ ಮೂರು ಹಾಡುಗಳು ಚಿತ್ರದಲ್ಲಿದೆ. ಮುಂದಿನ ತಿಂಗಳು ಚಿತ್ರ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು
ನಾಯಕ ಅನೂಪ್ ರೇವಣ್ಣ ಮಾತನಾಡಿಯುವಪೀಳಿಗೆಗೆ ಹತ್ತಿರವಾದ ಕಥೆಯಿದು. ಚಿತ್ರದಲ್ಲಿ ನಾಯಕ ಮುಖ್ಯಮಂತ್ರಿಗಳ ಅಭಿಮಾನಿಯಾಗಿರುತ್ತಾನೆ ಎಂದು ಕಥೆಯ ಕುರಿತು ಡಾವಿ.ನಾಗೇಂದ್ರಪ್ರಸಾದ್ ಹೇಳಿದರು. ಚಿತ್ರದಲ್ಲಿ ವಕೀಲನ ಪಾತ್ರ. ಮುಖ್ಯಮಂತ್ರಿ ರಾಮಯ್ಯ ಅವರ ಅಭಿಮಾನಿಯಾಗಿರುತ್ತೇನೆ ಎಂದು ಮಾಹಿತಿ ನೀಡಿದರು

ನಿರ್ದೇಶಕ ಆರ್ ರವೀಂದ್ರ ಮಾತನಾಡಿ “ಕನಕರಾಜ”, ನನ್ನ ಹಾಗೂ ನಿರ್ಮಾಪಕರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.
ನಾಯಕಿ ನಿಮಿಷ, ನಟ ಸುಂದರರಾಜ್, ನಟಿಯರಾದ ಪದ್ಮಾವಾಸಂತಿ, ಯಮುನ ಶ್ರೀನಿಧಿ, ನಟ – ಸಹ ನಿರ್ಮಾಪಕ ಮಂಜುನಾಥ್ ಅರಸ್, ಛಾಯಾಗ್ರಾಹಕ ಪ್ರಮೋದ್ ಭಾರತೀಯ ಹಾಗೂ ಗಾಯಕ ಚೇತನ್ ನಾಯಕ್ ಮುಂತಾದವರು “ಕನಕರಾಜ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು


