Young Artists' Union's film "Love Seasons" to hit screens on July 3

ಯುವ ಕಲಾವಿದರ ಸಂಗಮದ “ಲವ್ ಸೀಸನ್ಸ್” ಚಿತ್ರ ಜುಲೈ 3 ರಂದು ತೆರೆಗೆ - CineNewsKannada.com

ಯುವ ಕಲಾವಿದರ ಸಂಗಮದ “ಲವ್ ಸೀಸನ್ಸ್” ಚಿತ್ರ ಜುಲೈ 3 ರಂದು ತೆರೆಗೆ

ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತರಿಗೆ ಕೊರತೆ ಇಲ್ಲ, ಆದರೆ ಅವರಿಗೆ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ಸಿಗಬೇಕಾಗಿದೆ, ಇದೀಗ ಮತ್ತೊಂದು ಪ್ರತಿಭಾನ್ವಿತರ ತಂಡ ಹೊಸ ಕನಸು ಕಟ್ಟಿಕೊಂಡು ಚಿತ್ರರಂಗದಲ್ಲಿ ಸಾಧನೆ ಮಾಡಲು ಮುಂದಾಗಿದೆ. ಅದುವೇ “ ಲವ್ ಸೀಸನ್ಸ್ “ ತಂಡ.

ನಿರ್ಮಾಪಕ ಮಂಜುನಾಥ್ ಅವರು ಮಗ ಮುಕುಂದ ರಾಮಸ್ವಾಮಿ ಅವರಿಗಿರುವ ಸಿನಿಮಾ ಪ್ರೀತಿ ಮತ್ತು ಪ್ಯಾಶನ್ ಗುರುತಿಸಿ “ಲವ್ ಸೀಸನ್ಸ್ “ ಮೂಲಕ ನಾಯಕನ್ನಾಗಿ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ, ಆ ಚಿತ್ರ ಜುಲೈ 3ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಯುವ ಪ್ರತಿಭಾನ್ವಿತ ನಾಯಕ ನಟ ಮುಕುಂದ ರಾಮಸ್ವಾಮಿ ಅವರ ಜನ್ಮದಿನವಾದ ಜೂನ್ 24ರಂದು ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ “ಲವ್ ಸೀಸನ್” ಚಿತ್ರದ ಟ್ರೈಲರ್ ಬಿಡುಗಡೆ ಆಯೋಜಿಸಲಾಗಿತ್ತು, ಈ ವೇಳೆ ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದರಾದ ಮಂಡ್ಯ ರಮೇಶ್, ನಟಿ ಸಂಗೀತ ಅನೀಲ್, ನಿರ್ದೇಶಕ ಜಯತೀರ್ಥ ಆಗಮಿಸಿ ಹೊಸ ತಂಡಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದರು

ಈ ವೇಳೆ ಮಾತಿಗಿಳಿದ ನಿರ್ದೇಶಕ ಕೃತ್ವಿಕ್ , ನಿರ್ದೇಶಕರಾಗಿ ಗೆದ್ದಾಗಿದೆ. ಹಿರಿಯ ಕಲಾವಿದರಾದ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತ ಅನಿಲ್ , ಜಯತೀರ್ಥ ಅವರನ್ನು ನಿರ್ದೇಶನ ಮಾಡಿದ್ದೆ ನನ್ನ ಪುಣ್ಯ, ಚಿತ್ರ ಮೂಡಿ ಬಂದಿರುವ ಪರಿಗೆ ನಿರ್ಮಾಪಕ ಮಂಜುನಾಥ್ ಕೂಡ ಖುಷಿ ಪಟ್ಟಿದ್ದಾರೆ. ಇನ್ನು ಕಲಾರಸಿಕರನ್ನು ಗೆಲ್ಲುವ ಉತ್ಸಾಹ ಇದೆ. ಜುಲೈ 3 ರಂದು ತೆರೆಗೆ ಬರಲಿದೆ. 40 ರಿಂದ 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಹೊಸ ತಂಡಕ್ಕೆ ಎಲ್ಲರ ಸಹಕಾರ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು

ಚಿತ್ರದ ಮೆಲೋಡಿ ಹಾಡು ಬಿಡುಗಡೆಯಾದ ನಂತರ ಹಲವು ಮಂದಿ ಈ ಹಾಡನ್ನು ಗೋಲ್ಡನ್ ಗಣೇಶ್ ಮಾಡಿದ್ದರೆ ಚೆನ್ನಾಗಿತ್ತು ಎಂದು ಹೇಳಿದವರೇ ಅಧಿಕ, ಹೊಸಬರು ಸಿನಿಮಾ ಮಾಡಬಾರದಾ, ನಟ ಗಣೇಶ್ ರೀತಿ ಮಾಡಿದ್ದಾರೆ ಎಂದು ನಮಗೂ ಖುಷಿ, ಈ ರೀತಿ ಹೊಸಬರನ್ನು ಕಡೆಗಣಿಸುವುದು ಸರಿಯಲ್ಲ ಎಂದರು

ನಾಯಕ ಮುಕುಂದ ರಾಮಸ್ವಾಮಿ ಮಾತನಾಡಿ, ಹೊಸ ತಂಡ ಹೊಸ ಕನಸು ಕಟ್ಟಿಕೊಂಡು ಸಿನಿಮಾ ಮಾಡಿದ್ದೇವೆ, ಚಿತ್ರವೂ ಚೆನ್ನಾಗಿ ಮೂಡಿಬಂದಿದೆ, ಪ್ರೀತಿಯನ್ನು ಮೂರು ಕಾಲಘಟ್ಟದಲ್ಲಿ ಹೇಳಲಾಗುತ್ತಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು

ಹಿರಿಯ ನಟ ಮಂಡ್ಯ ರಮೇಶ್ ಮಾತನಾಡಿ, ಚಿತ್ರದಲ್ಲಿ ಒಳ್ಳೆಯ ಪಾತ್ರ ಮಾಡಿದ್ದೇನೆ, ಚಿತ್ರತಂಡವೂ ಸರಿಯಾಗಿ ನಡೆಸಿಕೊಂಡಿದೆ, ಹೊಸಬರಾದರೂ ಆ ದಿನ ಏನು ಚಿತ್ರೀಕರಣ ಮಾಡುತ್ತೇವೆ ಎನ್ನುವ ಖಚಿತತೆ ಇತ್ತು, ಅದರಲ್ಲಿ ಅವರು ಗೆದ್ದಿದ್ದಾರೆ, ಇನ್ನೂ ಚಿತ್ರ ನೋಡಿ ಪ್ರೇಕ್ಷಕರೂ ಹರಸಿದರೆ ತಂಡದ ಪ್ರಯತ್ನ ಸಾರ್ಥಕವಾಗಲಿದೆ ಎಂದರು

ಹಿರಿಯ ನಟಿ ಸಂಗೀತ ಅನೀಲ್ ಮಾತನಾಡಿ ನಾವು ನಾಯಕಿಯರಾಗಿ ನಟಿಸುವ ವೇಳೆ ಯಾವುದೇ ಪ್ರಾಮ್ಟ್ ಇರಲಿಲ್ಲ, ಆದರೂ ಚೆನ್ನಾಗಿ ನಟಿಸಬೇಕಾಗಿತ್ತು, ಈಗಿನ ನಟಿಯರು ತುಂಬಾನೇ ಪ್ರತಿಭಾನ್ವಿತರಿದ್ದಾರೆ, ನಟನೆಯನ್ನೂ ಅಷ್ಟೇ ಅಚ್ಚುಕಟ್ಟಾಗಿ ಮಾಡುತ್ತಾರೆ, ಯುವ ನಟ ಮುಕುಂದನ ಚಿತ್ರರಂಗದ ಪಯಣಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು

ನಿರ್ಮಾಪಕ ಮಂಜುನಾಥ್ ಮಾತನಾಡಿ, ಮಗನ ಸಿನಿಮಾ ಮೇಲಿನ ಪ್ರೀತಿಯಿಂದ ಸಿನಿಮಾ ಮಾಡಿದ್ದೇವೆ.ಒಳ್ಳೆಯ ಚಿತ್ರ ಮೂಡಿ ಬಂದಿದೆ, ಜನ ನೋಡಿ ಮೆಚ್ಚಿಕೊಳ್ಳಬೇಕು ಎಂದರು

ನಾಯಕಿಯರಾದ ದಿಯಾ, ಶ್ವೇತ ಕೋಗಲೂರ್, ಚಂದನಗೌಡ, ಕಲಾವಿದರಾದ ಚೇತನ್ ದುರ್ಗ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin