Muhurat for the Ghilli actor's new film ''Palar''

ಗಿಲ್ಲಿ ನಟನ ಹೊಸ ಚಿತ್ರ” ಪಳಾರ್”ಗೆ ಮಹೂರ್ತ - CineNewsKannada.com

ಗಿಲ್ಲಿ ನಟನ ಹೊಸ ಚಿತ್ರ” ಪಳಾರ್”ಗೆ ಮಹೂರ್ತ

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆಲುವು ಸಾಧಿಸಿದ ನಂತರ ಗಿಲ್ಲಿ ನಟನ ಅದೃಷ್ಠ ಬದಲಾಗಿದೆ, ಈಗ ನಾಯಕನಾಗಿ ನಟಿಸುವ ಅವಕಾಶ ಒದಗಿ ಬಂದಿದೆ.,

ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಕ್ಲ್ಯಾಪ್ ಮಾಡೋ ಮೂಲಕ ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ ಮಾಡೋ ಮೂಲಕ ಪಳಾರ್ ಚಿತ್ರಕ್ಕೆ ಶುಭಹಾರೈಸಿದ್ದಾರೆ

ಪಳಾರ್ ಚಿತ್ರಕ್ಕೆ ಕೆವಿಎನ್ ಅರ್ಪಿಸುತ್ತಿದ್ದು ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಚೊಚ್ಚಲ ನಿರ್ಮಾಣ ಮಾಡುತ್ತಿರುವ ಚಿತ್ರ ಇದಾಗಿದೆ.

ಗಿಲ್ಲಿ ನಟ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ. ಹಾಸ್ಯ ಚಿತ್ರಗಳಿಗೆ ಬ್ರ್ಯಾಂಡ್ ಆಗಿರೋ ನಿರ್ದೇಶಕ ಚಂದ್ರ ಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕೆವಿನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ಕೆ. ವೆಂಕಟ ನಾರಾಯಣ ಮತ್ತು ಬ್ಯುಸಿನೆಸ್ ಹೆಡ್ ಸುಪ್ರಿತ್ ಹರೀಶ್ ಮತ್ತು ನವೀನ್‍ಗೆ ಸಾಥ್ ನೀಡಿದ್ದಾರೆ

ಮುಹೂರ್ತದ ನಂತರ ಗಿಲ್ಲಿನಟನ ಹುಟ್ಟುಹಬ್ಬ ಆಚರಿಸಿದ ಚಿತ್ರತಂಡ, ನವ ನಾಯಕ ನಟನನ್ನ ಚಿತ್ರರಂಗಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್ಲಿ ನಾಯಕಿ ಸಂಭಾವನೆ ಸೇರಿದಂತೆ ಹಲವು ವಿಚಾರಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿ, ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹಂತಹಂತವಾಗಿ ಮಾಹಿತಿ ನೀಡೋದಾಗಿ ತಿಳಿಸಿದರು

ನಿರ್ದೇಶಕ ಚಂದ್ರಮೋಹನ್ ಮಾತನಾಡಿ ಇದೊಂದು ಸಂಪೂರ್ಣ ಹಾಸ್ಯಮಯ ಹಳ್ಳಿ ಸೊಗಡಿನ ಸಿನಿಮಾ ಆಗಿರಲಿzನಾಳೆಯಿಂದಲೇ ಚಿತ್ರೀಕರಣ ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin