“ಲವ್ 2 ಲಸ್ಸಿ “ ಚಿತ್ರದ ಹಾಡು, ಮೋಷನ್ ಪೋಸ್ಟರ್ ಬಿಡುಗಡೆ : ಕುತೂಹಲ ಹೆಚ್ಚಳ
ಭಾರತಿ ಶ್ರೀನಿವಾಸ್ ರಾಜ್ ನಿರ್ಮಾಣ ಮಾಡಿರುವ, ಹರಿಪ್ರಾಣ ನಿರ್ದೇಶನ ಮಾಡಿರುವ “ಲವ್ 2 ಲಸ್ಸಿ” ಚಿತ್ರದ ಹಾಡು ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.

ನಿರ್ದೇಶಕ ಹರಿಪ್ರಾಣ ಅವರಿಗೆ ಸುಮಾರು 18 ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಪುತ್ತೂರು, ಸುಳ್ಯ ಕಡೆಗೆ ಚಿತ್ರೀಕರಣ ಮಾಡಲಾಗಿದೆ. ಜೀವಿತ ಮತ್ತು ಆರ್ಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗನ್, ತಾರಾ, ವೈಷ್ಣವಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ನಿರ್ದೇಶಕ ಒರಟ ಶ್ರೀ ಹಾಡು ಬಿಡುಗಡೆ ಮಾಡಿ ಹೊಸ ತಂಡ. ನಾವೂ ಕೂಡ ಅದನ್ನೆಲ್ಲಾ ಎದುರಿಸಿನೇ ಬಂದಿದ್ದೀವಿ. ನಿರ್ದೇಶಕನಿಗೆ ಮೊದಲ ಸಿನಿಮಾ ಎಸ್ಎಸ್ಎಲ್ಸಿ ಥರ. ಎಲ್ಲಾ ತಂತ್ರಜ್ಞರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು
ಸಪ್ತಗಿರಿ ಗೌಡ ಮಾತನಾಡಿ ಲವ್ ಟು ಲಸ್ಸಿ ಎರಡು ಸಿಹಿಯಾದ ಪದಗಳನ್ನ ಸೇರಿಸಿ ಒಂದೊಳ್ಳೆ ಟೈಟಲ್ ಕೊಟ್ಟಿದ್ದಾರೆ. ಹಲವು ಭಾಷೆಯ ಸಿನಿಮಾಗಳನ್ನ ನೋಡ್ತಾ ಇರ್ತೀನಿ. ಈ ಸಿನಿಮಾದ ಟೈಟಲ್ ತುಂಬಾ ಚೆನ್ನಾಗಿದೆ. ಇಂಡಸ್ಟ್ರಿಗೆ ಹೊಸ ಹೊಸ ಪ್ರತಿಭೆಗಳು ಬರಬೇಕು ಎಂದು ಹಾರೈಸಿದ್ದಾರೆ.

ನಿರ್ದೇಶಕ ಹರಿಪ್ರಾಣ ಮಾತನಾಡಿ ಈ ಸಿನಿಮಾ ಟ್ರೂ ಲವ್ ಸ್ಟೋರಿ. ಪುತ್ತೂರು ಹುಡುಗಿ ಬೆಂಗಳೂರು ಹುಡುಗನ್ನ ಇಟ್ಟುಕೊಂಡು ಸಿನಿಮಾ ಮಾಡಿದ್ದೀನಿ. ಇದು ಕೆಫೆ ಸ್ಟೋರಿ ಅಲ್ಲ. ಈ ರಿಯಲ್ ಲವ್ ಸ್ಟೋರಿ ಹುಡುಗಿಯಿಂದ ಅನುಮತಿ ಪಡೆದು ಮಾಡಿದ್ದೇವೆ. 2006-7ನಲ್ಲಿ ನಡೆದಂತ ಘಟನೆ. ಟ್ರಾಜಿಡಿ ಲವ್ ಸ್ಟೋರಿನೆ. ನನಗೆ ಹಾಡುಗಳು, ಕಥೆ ಬರೆಯೋದು ತುಂಬಾನೇ ಇಷ್ಟ ಎಂದಿದ್ದಾರೆ.
ಸಂಗೀತ ನಿರ್ದೇಶಕ ವಿನು ಮನಸ್ಸು ಮಾತನಾಡಿ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಇಡೀ ಸಿನಿಮಾ ಚೆನ್ನಾಗಿ ಆಗಿದೆ. ನೀವೆಲ್ಲಾ ಕೇಳಿ ಎಂಜಾಯ್ ಮಾಡಿ ಎಂದಿದ್ದಾರೆ.
ಸಿನಿಮಾದ ನಾಯಕಿ ಜೀವಿತಾ ಮಾತನಾಡಿ ಶೂಟಿಂಗ್ ಮಾಡುವಾಗ ಸಿನಿಮಾದ ಸ್ಟೋರಿ ತುಂಬಾ ಚೆನ್ನಾಗಿತ್ತು. ಈಗ ಹಾಡುಗಳನ್ನ ನೋಡುವಾಗ ಇನ್ನು ಅದ್ಬುತವಾಗಿ ಮೂಡಿ ಬಂದಿದೆ. ಲೂಡೋದಲ್ಲೂ ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದೀವಿ. ಹೆಚ್ಚು ಅಳುವುದಂತ ಇಲ್ಲ. ಒಂದು ಲವ್ ಸ್ಟೋರಿ ನಲ್ಲಿ ಏನೆಲ್ಲಾ ಇದೆಯೋ ಅದೆಲ್ಲಾ ಇದೆ. ಅಷ್ಟೇ ಅಲ್ಲ ಫ್ಯಾಮಿಲಿಗೆ ಕನೆಕ್ಟ್ ಆಗುವಂತ ವಿಚಾರಗಳು ಇದೆ ಎಂದಿದ್ದಾರೆ.

ನಟ ಆರ್ಯನ್ ಮಾತನಾಡಿ, ಕೂಡ ಸಿನಿಮಾ ರಿಪೆÇೀರ್ಟರ್ ಆಗಿ ಕೆಲಸ ಮಾಡಿದ್ದೀನಿ. ಲವ್ 2 ಲಸ್ಸಿ ಸಿನಿಮಾ ರಿಯಲ್ ಆಗಿ ನಡೆದಿರೋದು ಅಂತ ಕೇಳಿ ಖುಷಿಯಾಯ್ತು. ಕೂಡ ಅದರ ಒಂದು ಭಾಗ ಅನ್ನೋದಕ್ಕೆ ಖುಷಿ. ಸ್ಟೋರಿ ಏನೋ ತುಂಬಾ ಚೆನ್ನಾಗಿದೆ. ಆದರೆ ಹೊಸಬರು ಎಂದ ಮೇಲೆ ನುರ್ಮಾಪಕರು ಸಿಗೋದೆ ಕಷ್ಟ. ಆದರೆ ಭಾರತಿ ಮೇಡಂ ಅವರು ನಿರ್ಮಾಣ ಮಾಡಿರೋದು ಖುಷಿ ಇದೆ ಎಂದಿದ್ದಾರೆ.


