ಜುಲೈ 3 ಕ್ಕೆ ‘ಅಪರಾಧಿ ನಾನಲ್ಲ’ ಚಿತ್ರ ಬಿಡುಗಡೆ
ಮೂವರು ಕೈದಿಗಳು ಜೈಲಿನಲ್ಲಿ ಇರ್ತಾರೆ. ಅವರು ಹೇಗೆ ಹೊರಗೆ ಬರುತ್ತಾರೆ ಎನ್ನುವ ಕಥೆ ಹೊಂದಿರುವ ‘ಅಪರಾಧಿ ನಾನಲ್ಲ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ, ಕೊಲೆ ಸುತ್ತ ಸಾಗುವ ಒಂದಷ್ಟು ರೋಚಕ ವಿಚಾರಗಳನ್ನು ಒಳಗೊಂಡಿರುವ ಸಿನಿಮಾ ಜುಲೈ 3 ರಂದು ಬಿಡುಗಡೆಯಾಗಲಿದೆ

ಅಜಿತ್ ಚೌಟಾ ದೇವಸ್ಯ ನಿರ್ಮಾಣದಲ್ಲಿ ಯಶಂತ್ ಕಲ್ಲಡ್ಕ ನಿರ್ದೇಶನ ಮಾಡಿದ್ದಾರೆ. ವಿಕ್ರಂ ದೇವಾಡಿಗ ಮತ್ತು ಸಂದೀಪ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು
ನಿರ್ದೇಶಕ ಯಶಂತ್ ಕಲ್ಲಡ್ಕ ಮಾತನಾಡಿ ಅಪರಾಧಿ ನಾನಲ್ಲ ಅನ್ನೋ ಟೈಟಲ್ ಯಾಕೆ ಅಂದ್ರೆ ಜೈಲಿನಲ್ಲಿ ಎಷ್ಟೋ ಜನ ಇರುತ್ತಾರೆ. ಆದರೆ ಅದೆಷ್ಟೋ ಜನ ಅಪರಾಧಿಗಳೇ ಆಗಿರೋದಿಲ್ಲ. ಸತ್ಯ ಘಟನೆ ಇಟ್ಟುಕೊಂಡು, ಒಂದಷ್ಟು ಮಸಾಲ ಸೇರಿಸಿ ಹೆಣೆದಿದ್ದೇವೆ ಎಂದರು
ನಟ ಅರ್ಜುನ್ ದೇವ್ ಮಾತನಾಡಿ ಈ ಸಿನಿಮಾ ಮೂಲಕ ಯಶಂತ್ ಕಲ್ಲಡ್ಕ ಅವರಿಗೆ ಯಶಸ್ಸು ಸಿಗಲಿ. ಎಲ್ಲರ ಆಶೀರ್ವಾದ ಸಿನಿಮಾ ಮೇಲಿರಲಿ ಎಂದಿದ್ದಾರೆ.

ನಾಯಕಿ ಅಮೃತಾ ಮೂರ್ತಿ ಮಾತನಾಡಿ ಅಪರಾಧಿ ನಾನಲ್ಲ ಸಿನಿಮಾವನ್ನ ಹೊಸಬರು ಮಾಡಿರೋದು. ಖುಷಿ ವಿಚಾರ ಅಂದ್ರೆ ಅರ್ಜುನ್ ಕಾಪಿಕಾಡ್ ಅವರದ್ದು. ಅವರ ಜೊತೆಗೆ ವರ್ಕ್ ಮಾಡಿದಾಗ ಅವರ ಬಗ್ಗೆ ಏನು ಗೊತ್ತಿರಲಿಲ್ಲ. ಆದರೆ ಅವರನ್ನ ಮಂಗಳೂರಿಗೆಲ್ಲಾ ಹುಲಿ ಅಂತಾನೇ ಕರೀತಾರೆ. ಈ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೇನೆ ಎಂದರು

ಚಿತ್ರದಲ್ಲಿ ಅಮೃತಾ, ಅರ್ಜುನ್, ಪ್ರಮೋದ್ ಶೆಟ್ಟಿ, ನವಿಲ್ ಪಡಿಲು, ಅಶೋಕ್ ಹೆಗ್ಡೆ, ನೀತೂ ಶೆಟ್ಟಿ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.

