"Shabari" shooting completed within the stipulated budget: Appreciation for the efforts of the director

ನಿಗಧಿಪಡಿಸಿದ ಬಜೆಟ್‍ನಲ್ಲಿ “ಶಬರಿ” ಚಿತ್ರೀಕರಣ ಪೂರ್ಣ: ನಿರ್ದೇಶಕರ ಪಯತ್ನಕ್ಕೆ ಮೆಚ್ಚುಗೆ - CineNewsKannada.com

ನಿಗಧಿಪಡಿಸಿದ ಬಜೆಟ್‍ನಲ್ಲಿ “ಶಬರಿ” ಚಿತ್ರೀಕರಣ ಪೂರ್ಣ: ನಿರ್ದೇಶಕರ ಪಯತ್ನಕ್ಕೆ ಮೆಚ್ಚುಗೆ

ಚಿತ್ರ ಆರಂಭಿಸುವಾಗ ಒಂದು ಬಜೆಟ್, ಆರಂಭವಾದ ನಂತರ ಮತ್ತೊಂದು ಮುಗಿಯ ವೇಳೆಗೆ ನಿರ್ಮಾಪಕ ಮನೆ ಮಠ ಮಾರಿಕೊಂಡು ಬೀದಿಗೆ ಬರುವುದು ಖಚಿತ, ದುಡ್ಡಿರುವ ಮಂದಿ ಹೇಗೋ ಚೇತರಸಿಕೊಳ್ಳುತ್ತಾರೆ, ಬಡ್ಡಿ ತಂದ ಮಂದಿಯ ಕಥೆ ಗೋವಿಂದ.,, ಇಂತಹ ಕಾಲಘಟ್ಟದಲ್ಲಿ ನಿರ್ದೇಶಕ ಒರಟ ಶ್ರೀ ನಿಗಧಿ ಪಡಿಸಿದ ಬಜೆಟ್ ಮತ್ತು ದಿನದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ನಿರ್ಮಾಪಕರು ಮತ್ತು ಚಿತ್ರತಂಡದ ಮೆಚ್ಚುಗೆ ಗಳಿಸಿದ್ದಾರೆ.

ಒರಟ',ಕೋರ’ದಂತಹ ಚಿತ್ರಗಳನ್ನು ನಿರ್ದೇಶನ ಮಾಡಿ ವಿಭಿನ್ನ ನಿರ್ದೇಶಕರೆಂದೇ ಗುರುತಿಸಿಕೊಂಡಿರುವ ಒರಟ ಶ್ರೀ,
`ಶಬರಿ’ ಚಿತ್ರವನ್ನು ನಿರ್ಮಾಪಕರಿಗೆ ಹೇಳಿದ ಬಜೆಟ್‍ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರೀಕರಣ ಮಾಡಿದ್ದಾರೆ, ಈಗ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ನಿರ್ದೇಶಕರ ಶ್ರಮ ಮತ್ತು ಬದ್ದತೆಗೆ ಮೆಚ್ಚುಗೆ ಮಹಾಪೂರ ಹರಿದುಬಂದಿದೆ.

ಶಬರಿ ಚಿತ್ರದ ಟೀಸರ್ ಅನ್ನು ಲಹರಿ ಸಂಸ್ಥೆಯ ವೇಲು ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ವೇಳೆ ರಾಷ್ಟ್ರ ಪ್ರಶಸ್ತಿ ವಿಜೇತ ತಲೆದಂಡ ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ಮತ್ತು ಕಾಮನ್ ಮ್ಯಾನ್ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು

ಲಹರಿ ವೇಲು ಮಾತನಾಡಿ ನಿರ್ದೇಶಕ ಒರಟಶ್ರೀ ನಿರ್ಮಾಪಕರಿಗೆ ಹೇಳಿದ ಬಜೆಟ್‍ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವುದು ನಿರ್ಮಾಪಕರು ಮುಂಚೆಯೇ ಹಣಹೊಂದಿಸಿಕೊಂಡು ಚಿತ್ರೀಕರಣ ಮಾಡಲು ಸಹಕಾರಿಯಾಗುತ್ತಿದೆ, ಇಂತಹ ಪ್ರಯತ್ನಗಳು ಚಿತ್ರರಂಗದಲ್ಲಿ ಹೆಚ್ಚಾಗಬೇಕು. ‘ಒರಟ ಶ್ರೀ ಅತೀವ ಸಿನಿಮಾ ಪ್ರೇಮ ಹೊಂದಿರುವ ನಿರ್ದೇಶಕ. ಚಿತ್ರ ಹಾಡುಗಳು ಚೆನ್ನಾಗಿ ಮೂಡಿಬಂದಿದೆ ಎಂದರು

ನಿರ್ದೇಶಕ ಒರಟ ಶ್ರೀ ಮಾತನಾಡಿ, ಸಿನಿಮಾ ಒಬ್ಬನ ಕೆಲಸವಲ್ಲಿ ಇಡೀ ತಂಡ ಶ್ರಮಪಟ್ಟರೆ ಮಾತ್ರ ಮಾಡಲು ಸಾಧ್ಯ, ಇದರಲ್ಲಿ ಹೆಚ್ಚುಗಾರಿಗೆ ಇಲ್ಲ, ಎಲ್ಲ ಇಡೀ ತಂಡದ ಶ್ರೇಯ ಸಲ್ಲಬೇಕು. ಚಿತ್ರದಲ್ಲಿ ಕಾರು ಪ್ರಮುಖ ಪಾತ್ರ ವಹಿಸುತ್ತದೆ. ಕುತೂಹಲಕಾರಿ ಅಂಶವಿರುವ ಚಿತ್ರದಲ್ಲಿ ಶಬರಿ ಯಾರು ಎನ್ನುವುದು ಕುತೂಹಲ.ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟ್ರಿ ಸೇರಿದಂತೆ ಅನೇಕ ಅಂಶಗಳಿದ್ದು ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಎಂದು ಭರವಸೆ ನೀಡಿದರು

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ರಮೇಶ್, ಸುಧಾಕರ್ ರೆಡ್ಡಿ ಮತ್ತು ವಿಷ್ಣುಕಾಂತ್ ಎ ಸೇರಿಕೊಂಡು ಭಾರವಿ ಫಿಲಂಸ್ ಬ್ಯಾನರಿನಡಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಮೂವರು ನಿರ್ಮಾಪಕರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ನಾಯಕ ನಟ ಸಮರ್ಥ್, ನಾಯಕಿ ಕೃತಿಕಾ ಗೌಡ, ರಾಣಿ ಸೀರಿಯಲ್ ಖ್ಯಾತಿ ಬಾಲನಟಿ ಧನ್ವಿ, ನೀನಾಸಂ ಅಶ್ವತ್ ಚಿತ್ರತಂಡ ಈ ಪತ್ರಿಕಾಗೋಷ್ಠಿಯಲ್ಲಿ ತಂತಮ್ಮ ಅನುಭವಗಳನ್ನು ಹಂಚಿಕೊಂಡರು

ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಧನ್ವಿ, ಎಂ.ಕೆ ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ ಗಿರೀಶ್ ಕುಮಾರ್ ಸಂಕಲನ
ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin