ಬಾಂಡ್ ಶೈಲಿಯ ಚಿತ್ರದಲ್ಲಿ ಏಜೆಂಟ್ ಪ್ರಕಾಶ್ ಆಗಿ ಶಿವಣ್ಣ : ಏಜೆಂಟ್ ಶಂಕರ್ ಅವತರಾರದಲ್ಲಿ ಡಾಲಿ ಧನಂಜಯ
ವರನಟ ಡಾ, ರಾಜ್ಕುಮಾರ್ ಬಾಂಡ್ ಸಿನಿಮಾಗಳಿಗೆ ತನ್ನದೇ ಆದ ಬ್ರಾಂಡ್ ಸೃಷ್ಠಿ ಮಾಡಿದವರು, ಅವರ ನಂತರ ಕನ್ನಡದಲ್ಲಿ ಬಾಂಡ್ ಶೈಲಿಯ ಸಿನಿಮಾಗಳು ಬಂದಿರಲಿಲ್ಲ, ಇದೀಗ ಅಂಹದೊಂದು ಪ್ರಯತ್ನ ನಡೆದಿದೆ, ಅದು ಶಿವರಾಜ್ ಕುಮಾರ್ ಮೂಲಕ,. ಏಜೆಂಟ್ ಪ್ರಕಾಶ್ ಆಗಿ ಕಾಣಸಿಕೊಂಡಿದ್ದು ಶಿವಣ್ಣಗೆ ನಟ ಡಾಲಿ ಧನಂಜಯ ಏಜೆಂಟ್ ಶಂಕರ್ ಆಗಿ ಸಾಥ್ ನೀಡಿದ್ದಾರೆ.

ಕವಲದಾರಿ, ಸಪ್ತಸಾಗರದಾಚೆ ಸೇರಿದಂತೆ ಹಲವು ಸದಭಿರುಚಿಯ ಚಿತ್ರ ನೀಡಿರುವ ಹೇಮಂತ್ ಎಂ ರಾವ್ ನಿರ್ದೇಶನ ಮಾಡಿರುವ “666 ಆಪರೇಷನ್ ಡ್ರೀಮ್ ಥಿಯೇಟರ್” ಚಿತ್ರದಲ್ಲಿ ಮೂರನೇ ಬಾರಿಗೆ ಶಿವಣ್ಣ ಮತ್ತು ಡಾಲಿ ಧನಂಜಯ ಜೊತೆಯಾಗಿದ್ದಾರೆ. ಈ ಚಿತ್ರಕ್ಕೆ ಡಾ.ವೈಶಾಖ್ ಗೌಡ ಬಂಡವಾಳ ಹೂಡಿದ್ದಾರೆ. ಕನ್ನಡದಕ್ಕೆ ಬಹುಭಾಷೆ ತಾರೆಯರಾದ ಪ್ರಿಯಾಂಕ ಮೋಹನ್ ಮತ್ತು ಅದಿತಿ ಬಾಲನ್ ಪ್ರವೇಶ ಮಾಡಿದ್ದಾರೆ
ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘666 ಆಪರೇಷನ್ ಡ್ರೀಮ್ ಥಿಯೇಟರ್” ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆಯಾಗಿದ್ದು ಮತ್ತೊಮ್ಮೆ ಬಾಂಡ್ ಮಾದರಿಯ ಸಿನಿಮಾ ನೋಡುವಂತೆ ಪ್ರೇಕ್ಷಕರ ಕುತೂಹಲ ಹೆಚ್ಚು ಮಾಡಿದೆ. ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ
ಈ ವೇಳೆ ಶಿವರಾಜ್ ಕುಮಾರ್ ಮಾತನಾಡಿ, ನಟ ಧನಂಜಯ್ ಅವರ ಜೊತೆ ಮೂರನೇ ಸಿನಿಮಾ. ಪ್ರಿಯಾಂಕಾ ಮೋಹನ್ ಜೊತೆ ಎರಡನೇ ಚಿತ್ರ. ಒಂದೊಳ್ಳೆ ತಂಡ. ಸಿನಿಮಾ ಎಂದರೆ ಪ್ರೀತಿ. ಯಾವುದನ್ನು ಬಿಡಲ್ಲ. 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಒಂದೊಳ್ಳೆ ಅನುಭವ ಕೊಟ್ಟಿದೆ. ಆ ವೇಷ ಹಾಕಿದಾಗ ಆ ಅಟಿಡ್ಯೂಡ್, ಸ್ವಾಗ್ ಎಲ್ಲಾ ಬರುತ್ತೆ. ನಿರ್ಮಾಪಕ ವೈಶಾಖ್ ಯಶಸ್ವಿ ನಿರ್ಮಾಪಕರಾಗುತ್ತಾರೆ ಎಂದು ಭವಿಷ್ಯ ನುಡಿದರು
ಬಾಂಡ್ ಸಿನಿಮಾಗಳಲ್ಲಿ ಈಜುಕೊಳ ಇರುತ್ತದೆ. ಅದರಲ್ಲಿ ಐದಾರು ಹುಡುಗಿಯರು ಇರ್ತಾರೆ. ನಡುವೆ ಬಾಂಡ್ ಇರ್ತಾರೆ. ಆದರೆ, 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ಆ ರೀತಿಯ ಬಾಂಡ್ ಅಲ್ಲ. ನಾನು ಈ ಚಿತ್ರದಲ್ಲಿ ಡಿಸೆಂಟ್ ಬಾಂಡ್ ಆಗಿದ್ದೇನೆ. ಎಲ್ಲರನ್ನೂ ಬಾಂಡಿಂಗ್ ಮಾಡುವ ಬಾಂಡ್ ಆಗಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

ನಟ ಡಾಲಿ ಧನಂಜಯ್ ಮಾತನಾಡಿ, ವೈಶಾಖ್ ಚಿತ್ರರಂಗಕ್ಕೆ ಒಳ್ಳೆ ನಿರ್ಮಾಪಕ ಆಗುವ ಶಕ್ತಿ ಅವರಲ್ಲಿದೆ. ನಿರ್ದೇಶಕ ಹೇಮಂತ್ ನನ್ನ ಸಿನಿಮಾ ಮಾಡಲು ಕರೆಯುತ್ತಿಲ್ಲವಲ್ಲ ಅಂದುಕೊಂಡಿದ್ದೆ. ಆಷ್ಟರಲ್ಲಿ ಅವರಿಂದ ಕರೆ ಬಂತು. ಒಳ್ಳೆ ಟೀಂ ಸೇರಿಕೊಂಡು ಚಿತ್ರ ಮಾಡಿದ್ದೇವೆ. ಮಗು ರಚ್ಚೆ ಹಿಡಿದು ಕೆಲಸ ಮಾಡಿಸಿಕೊಳ್ಳುವ ರೀತಿ ಹೇಮಂತ್ ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರಿಂದ ತುಂಬಾ ಕಲಿತಿದ್ದೇನೆ. ಶಿವಣ್ಣ ನನಗೆ ದೊಡ್ಡ ಶಕ್ತಿ. ಇದು ಟೀಸರ್ ಅಷ್ಟೇ. ಚಿತ್ರದಲ್ಲಿ ಬಹಳ ಕುತೂಹಲಕಾರಿ ಸಂಗತಿಗಳು ಚಿತ್ರದಲ್ಲಿವೆ ಎಂದರು.
ನಟಿ ಪ್ರಿಯಾಂಕಾ ಮೋಹನ್ ಕನ್ನಡದಲ್ಲಿ ಮೊದಲ ಸಿನಿಮಾ, ಕುತೂಹಲಕಾರಿಯಾದ ಪಾತ್ರವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೊಬ್ಬ ನಟಿ ಅದಿತಿ ಬಾಲನ್ ಪಾತ್ರದ ಪರಿಚಯ ಮಾಡಿಕೊಟ್ಟರು

ನಿರ್ದೇಶಕ ಹೇಮಂತ್ ಎಂ ರಾವ್ ಮಾತನಾಡಿ, ನಿರ್ಮಾಪಕರಿಗಾಗಿ ಹುಡುಕಾಡಿದ್ದೇನೆ. ಒದ್ದಾಡಿದ್ದೇನೆ ಎಂದರೆ ನನಗೆ ಗೊತ್ತು. ಹತ್ತು ವರ್ಷ ಕರೆಕ್ಟ್ ಪ್ರೊಡ್ಯೂಸರ್ ಸಿಕ್ಕಿರಲಿಲ್ಲ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಮಾಡುವಾಗ ಅಪ್ಪನ ಸಹಾಯ ತೆಗೆದುಕೊಂಡೆ. ಜೊತೆ ಇನ್ನೊಬ್ಬರು ಸಿಕ್ಕಿದರು. ಈಚಿತ್ರದಿಂದ ನನ್ನ ಕೆರಿಯರ್ ಕಟ್ಟುಕೊಂಡೆ. ಅಷ್ಟು ವರ್ಷ ಓಡಾಡಿದ್ದಕ್ಕೆ ಈ ರೀತಿ ಒಳ್ಳೆ ನಿರ್ಮಾಪಕರು ಸಿಕ್ಕಿದ್ದಾರೆ. ಸಿನಿಮಾ ಆರ್ಟ್, ಫೋಟೋಗ್ರಫಿ ಮ್ಯೂಸಿಕ್ ಎಲ್ಲದರ ಮಿಶ್ರಣ. ಸಿನಿಮಾವನ್ನು ಒಬ್ಬರ ಕೈಯಲ್ಲಿ ಮಾಡಲು ಆಗುವುದಿಲ್ಲ. ಇಡೀ ಊರು ಬೇಕು. ನಮಗೆ ಆನೆಬಲ ರೀತಿ ಶಕ್ತಿ ಇರುವುದು ಶಿವಣ್ಣ. ಅವರ ನೋಡಿರುವ ಸಕ್ಸಸ್, ಮಾಡದ ಚಿತ್ರಗಳು ಇಲ್ಲ. ನಮ್ಮ ಸೆಟ್ ಗೆ ಬಂದಾಗ ಅವರು ನಡೆದುಕೊಳ್ಳುವ ರೀತಿ ನಮ್ಮ ಕೆಲಸದ ಮೇಲಿನ ಆಸಕ್ತಿ ಹೆಚ್ಚು ಮಾಡುತ್ತದೆ. ಧನು, ಅದಿತಿ, ಪ್ರಿಯಾಂಕಾ ಅದ್ಭುತ ಕಲಾವಿದರು ಎಂದು ಮೆಚ್ಚುಗೆ ಸೂಚಿಸಿದರು

ನಿರ್ಮಾಪಕ ವೈಶಾಖ್ ಮಾತನಾಡಿ, 12 ವರ್ಷದವನಿದ್ದಾಗಲೂ ಪ್ರೊಡಕ್ಷನ್ಸ್ ಹೌಸ್ ಶುರು ಮಾಡಬೇಕು ಎಂದು ಕನಸು ಕಾಣುತ್ತಾ ಬಂದಿದ್ದೆ. ಆ ಪ್ರೊಡಕ್ಷನ್ಸ್ ನಲ್ಲಿ ನನಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಆ ಕನಸು ಈಗ ನನಸಾಗಿದೆ. ಮೊದಲ ಚಿತ್ರದಲ್ಲಿಯೇ ಒಂದೊಳ್ಳೆ ತಂಡ ಸಿಕ್ಕಿರುವುದು ನನ್ನ ಅದೃಷ್ಟ. ನನ್ನ ಅಚ್ಚುಮೆಚ್ಚಿನ ನಟ ಶಿವಣ್ಣ ಜೊತೆ ಚಿತ್ರ ಮಾಡಿರುವುದು ಖುಷಿ. ನಾನು ಚಿಕ್ಕ ವಯಸ್ಸಿನಿಂದ ಅವರ ದೊಡ್ಡ ಅಭಿಮಾನಿ. ಅವರ ಪ್ರತಿ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೆ. ವೇದ ಸಿನಿಮಾ ಶೂಟಿಂಗ್ ಸಮಯದಲ್ಲಿ ಫಸ್ಟ್ ಚಿತ್ರ ನಿಮ್ಮ ಜೊತೆ ಮಾಡಬೇಕು ಎಂದು ಕೇಳಿದೆ. ಬಜೆಟ್, ಕಥೆ, ಡೈರೆಕ್ಟರ್ ಏನು ಕೇಳಲಿಲ್ಲ. ಒಳ್ಳೆ ಕಥೆ ಮಾಡಿಕೊಂಡು ಬಾ ಬೇಗ ಶುರು ಮಾಡೋಣ ಎಂದಿದ್ದರು ಎಂದು ನೆನಪು ಮಾಡಿಕೊಂಡರು
ನಟ ಧನಂಜಯ್ ಅವರು ಈ ಚಿತ್ರದ ಮೂಲಕ ಪರಿಚಯವಾದವರು ಈ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರ ವೃತ್ತಿ ಜೀವನದ ಅತ್ಯುತ್ತಮ ನಟನೆ ಈ ಚಿತ್ರದಲ್ಲಿ ಇದೆ. 90 ದಿನ ಶೂಟಿಂಗ್ ನಡೆಸಿದರೆ. 100 ದಿನ ಸೆಟ್ ವರ್ಕ್ ಮಾಡಿದ್ದೇವೆ. ವಿಶ್ವಾಸ್ ಅದ್ಬುತ ಸೆಟ್ ನಿರ್ಮಿಸಿದ್ದಾರೆ. ಚರಣ್ ಮ್ಯೂಸಿಕ್, ಅದ್ವೈತ್ ಕ್ಯಾಮೆರಾ ವರ್ಕ್ ಸೂಪರ್ ಆಗಿದೆ.ಚಿತ್ರದ ಮತ್ತೊಬ್ಬ ಹೀರೋ ಹೇಮಂತ್. ಕಳೆದ ಐದು ವರ್ಷಗಳಿಂದ ಬೇರೆ ಇಂಡಸ್ಟ್ರಿಯಿಂದ ಕಾಲ್ ಬಂದರೂ ಅವರು ನನ್ನ ಜೊತೆ ನಿಂತರು ಎಂದರು.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಏಜೆಂಟ್ ಪ್ರಕಾಶ್ ಎಂಬ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಏಜೆಂಟ್ ಶಂಕರ್ ಪಾತ್ರದಲ್ಲಿ ಧನಂಜಯ್ ಬಣ್ಣ ಹಚ್ಚಿದ್ದಾರೆ. ಪ್ರಿಯಾಂಕ ಮೋಹನ್, ಅದಿತಿ ಬಾಲನ್, ಸುಖ್ವಿಂದರ್ ಸಿಂಗ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ‘ಸಪ್ತಸಾಗರದಾಚೆ ಎಲ್ಲೊ’ ಸರಣಿ ಸಿನಿಮಾಗಳ ಬಳಿಕ ಹೇಮಂತ್ ಎಂ ರಾವ್ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಕುತೂಹಲ ಮೂಡಿದೆ. ಡಾ. ವೈಶಾಕ್ ಜೆ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕಿದೆ. ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

