ಎರಡೂವರೆ ದಶಕಗಳ ಬಳಿಕ “ಸೈನಿಕ-2” ಚಿತ್ರ ಆರಂಭ: ಯುವ ನಟ ಧ್ಯಾನ್ ಚಿತ್ರರಂಗಕ್ಕೆ ಎಂಟ್ರಿ
ದೇಶಭಕ್ತಿಯನ್ನು ಪ್ರಧಾನವಾಗಿರಿಸಿಕೊಂಡು ಕಳೆದ 25 ವರ್ಷಗಳ ಹಿಂದೆ “ಸೈನಿಕ” ಚಿತ್ರ ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದ ನಟ ಸಿಪಿ ಯೋಗೇಶ್ವರ್ ಇದೀಗ ಪುತ್ರ ಧ್ಯಾನ್ಗಾಗಿ “ಸೈನಿಕ-2” ಚಿತ್ರ ಕೈಗೆತ್ತಿಕೊಂಡಿದ್ದಾರೆ, ಈ ಚಿತ್ರದಲ್ಲಿ ಮಾಜಿ ಸೈನಿಕನಾಗಿ ಸಿಪಿ ಯೋಗೇಶ್ವರ್ ಕಾಣಿಸಿಕೊಳ್ಳುತ್ತಿದ್ದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚುವಂತೆ ಮಾಡಿದೆ

ಎರಡು ದಶಕಗಳಿಗೂ ಹೆಚ್ಚು ಸಮಯದ ಬಳಿಕ ಮರಳಿ ಚಿತ್ರರಂಗಕ್ಕೆ ಬಂದಿರುವ ನಟ, ರಾಜಕಾರಣಿ ಸಿಪಿ ಯೇಗೇಶ್ವರ್, ಪುತ್ರನಿಗಾಗಿ ಕರ್ಣಾಟಬಲಂ ಅಜೇಯಂ ಹಾಗು ಸೈನಿಕ-2 ಚಿತ್ರ ಆರಂಭಿಸಿದ್ದಾರೆ, ಎರಡು ಚಿತ್ರದಲ್ಲಿ ಸಿಪಿ ಯೋಗೇಶ್ವರ್ ನಟಿಸುತ್ತಿರುವುದು ವಿಶೇಷ. ಸೈನಿಕ-2 ಚಿತ್ರವನ್ನು ಯುವ ನಿರ್ದೇಶಕ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳಲು ಸಿದ್ದತೆ ಮಾಡಿಕೊಂಡಿದ್ದಾರೆ,
ಈ ಚಿತ್ರದ ಮಹೂರ್ತಕ್ಕೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಆಗಮಿಸಿ ಕ್ಲಾಪ್ ಮಾಡಿದರು. ಮಾಜಿ ಸಂಸದ ಹಾಗು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಕ್ಯಾಮರಾ ಚಾಲನೆ ಮಾಡಿದರು
ಈ ವೇಳೆ ಮಾತನಾಡಿದ ವಿ.ಸೋಮಣ್ಣ, ಸಿ.ಪಿ.ಯೋಗೀಶ್ವರ್ ಬಹ ವರ್ಷಗಳ ಸ್ನೇಹಿತರು ಅವರ ಮಗ ಹಾಗೂ ಅವರು ಇಬ್ಬರು ನಟಿಸುತ್ತಿರುವ “ಸೈನಿಕ 2” ಚಿತ್ರಕ್ಕೆ ಚಾಲನೆ ನೀಡಿದ್ದು, ಬಹಳ ಖುಷಿಯಾಗಿದೆ.ಯುವ ನಟ ಧ್ಯಾನ್ ಯೋಗೇಶ್ವರ್ ಚಿತ್ರಕ್ಕೆ ಶುಭ ಕೋರಿ ಭವಿಷ್ಯದಲ್ಲಿ ಉತ್ತಮ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲಿ ಎಂದರು

ಸಿಪಿ ಯೋಗೇಶ್ವರ್ ಮಾತನಾಡಿ, ಚಿತ್ರರಂಗಕ್ಕೆ ನಾಯಕನಾಗಲು ಬಂದೆ, ಚಿತ್ರಗಳು ಯಶಸ್ಸಿನಲ್ಲಿರುವಾಗಲೇ ಅನಿವಾರ್ಯವಾಗಿ ರಾಜಕೀಯ ಪ್ರವೇಶ ಮಾಡಿದೆ, ರಾಜಕಾರಣದಲ್ಲಿದ್ದರೂ ಸಿನಿಮಾದಲ್ಲಿ ನಟನೆ ಆಸಕ್ತಿ ಕಡಿಮೆಯಾಗಿರಲಿಲ್ಲ, ಇದೀಗ ಪುತ್ರ ಧ್ಯಾನ್ ಗಾಗಿ ಎರಡು ಚಿತ್ರ ಕೈಗೆತ್ತಿಕೊಂಡಿದ್ದೇನೆ, ನನಗೂ ಸಿನಿಮಾದಲ್ಲಿ ನಟಿಸಬೇಕು ಎನ್ನುವ ತುಡಿತವಿದೆ, ಚಿತ್ರದಲ್ಲಿ ಮಾಜಿ ಸೈನಿಕನಾಗಿ ನಟಿಸುತ್ತಿದ್ದೇನೆ, ಅವರ ಕಷ್ಟಗಳನ್ನು ಪ್ರತಿಬಿಂಬಿಸುವ ಪಾತ್ರ. ‘ಸೈನಿಕ 2’ ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸುತ್ತಿದ್ದಾರೆ. ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದು ಕೇಳಿಕೊಂಡರು
ನಾಯಕ ಧ್ಯಾನ್ ಯೋಗೇಶ್ವರ್ ಮಾತನಾಡಿ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವುದು ಖುಷಿಯಾಗಿದೆ. ಈ ಅವಕಾಶ ಕಲ್ಪಿಸಿಕೊಟ್ಟ ನನ್ನ ತಂದೆ – ತಾಯಿಗೆ ಧನ್ಯವಾದ ತಿಳಿಸುತ್ತೇನೆ. ನಟನೆಗೆ ಬೇಕಾದ ಎಲ್ಲಾ ಪೂರ್ವತಯಾರಿ ಮಾಡಿಕೊಂಡಿದ್ದೇನೆ. ನಎರಡು ಚಿತ್ರಗಳ ನಿರ್ದೇಶಕರಾದ ನಾಗಣ್ಣ ಹಾಗೂ ಪುನೀತ್ ರುದ್ರನಾಗ್ ಅವರಿಂದಲೂ ಸಾಕಷ್ಟು ಕಲಿಯುತ್ತಿದ್ದೇನೆ. ನನ್ನ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು

ನಿರ್ದೇಶಕ ಪುನೀತ್ ರುದ್ರನಾಗ್ ಮಾತನಾಡಿ “ಸೈನಿಕ ಚಿತ್ರ ಬಿಡುಗಡೆಯಾಗಿದ್ದಾಗ ನನಗೆ ಹದಿನಾರು ವರ್ಷ. ಆ ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಈಗ ಆ ಚಿತ್ರದ ಎರಡನೇ ಭಾಗದ ನಿರ್ದೇಶನ ನಾನು ಮಾಡುತ್ತಿರುವುದು ಖುಷಿಯಾಗುತ್ತಿದೆ. ಇದೊಂದು ನೈಜ ಕಥಾಹಂದರ ಹೊಂದಿರುವ ಚಿತ್ರ. ಕಥೆಯ ಜವಾಬ್ದಾರಿಯನ್ನು ಯೋಗೀಶ್ವರ್ ಅವರೆ ವಹಿಸಿಕೊಂಡಿದ್ದಾರೆ. ನಾಯಕ ಧ್ಯಾನ್ ಅವರಿಗೆ ನಾಯಕನಾಗಲು ಬೇಕಾದ ಎಲ್ಲಾ ಗುಣಗಳು ಇದೆ. ಕಥೆ ಇನ್ನೂ ಪೂರ್ಣವಾಗಿಲ್ಲ. ಮುಂದಿನ ವರ್ಷ ಈ ಚಿತ್ರಕ್ಕೆ ಚಾಲನೆ ಸಿಗಲಿದೆ ಮುಂದಿನ ವರ್ಷ ತೆರೆಗೆ ತರುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.

