Title of the film 'Battalion' unveiled

‘ಬೆಟಾಲಿಯನ್’ ಚಿತ್ರದ ಶೀರ್ಷಿಕೆ ಅನಾವರಣ - CineNewsKannada.com

‘ಬೆಟಾಲಿಯನ್’ ಚಿತ್ರದ ಶೀರ್ಷಿಕೆ ಅನಾವರಣ

ಪ್ರಕಾಶ್ ಎಸ್. ಬೂದೂರು ನಿರ್ಮಾಣದಲ್ಲಿ ಕೆ.ಎಸ್ ಕೃಷ್ಣಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಕನ್ನಡ ಚಿತ್ರದ ಶೀರ್ಷಿಕೆ “ಬೆಟಾಲಿಯನ್” ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

ಮೊದಲನೇ ನಿರ್ಮಾಣದ “ಮಹಾನ್” ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯಿಸಿದ್ದು ಎರಡನೇ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆ ಕೈಜೋಡಿಸಿದ್ದು , ಮೂರನೇ ಚಿತ್ರವನ್ನು ಯುವ ಜನತೆ ಗಮನದಲ್ಲಿಟ್ಟುಕೊಂಡು ಬೆಟಾಲಿಯನ್ ಎಂಬ ಅದ್ದೂರಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ

ಪ್ರತಿಭಾವಂತ ಹೊಸ ತಂತ್ರಜ್ಞರು ಚಿತ್ರತಂಡ ಸೇರಿಕೊಂಡಿದ್ದು ಈಗಾಗಲೇ ಚಿತ್ರಕ್ಕೆ ಒಂದಿಷ್ಟು ಕಲಾವಿದರ ಆಯ್ಕೆಯಾಗಿದ್ದು ಇನ್ನುಳಿದ ಕಲಾವಿದರ ಆಯ್ಕೆಗಾಗಿ ಶೀಘ್ರದಲ್ಲಿ ಚಿತ್ರತಂಡ ಆಡಿಷನ್ ಕರೆ ನೀಡಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.

ಕರ್ನಾಟಕದ ವಿವಿಧ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಚಿತ್ರ ತಂಡಕ್ಕಿದ್ದು ತಾಂತ್ರಿಕ ಗುಣಮಟ್ಟ ಹಾಗೂ ಮನರಂಜನೆಗೆ ಸಮಾನ ಆದ್ಯತೆ ನೀಡಿ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು ಶೀಘ್ರದಲ್ಲೇ ಚಿತ್ರದ ಮಹೂರ್ತ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin