ಲೂಸ್ ಮಾದ ಯೋಗಿ ಅಭಿನಯದ “ಫಾರೆವರ್” ಚಿತ್ರಕ್ಕೆ ನಟ ದೃವ ಸರ್ಜಾ ಸಾಥ್
ಲೂಸ್ ಮಾದ ಯೋಗಿ ನಟನೆಯ 51ನೇ ಚಿತ್ರ “ ಫಾರೆವರ” ಚಿತ್ರದ ಪೋಸ್ಟರ್ ಮತ್ತು ಶೀರ್ಷಿಕೆ ಬಿಡುಗಡೆಯಾಗಿದೆ, ನಟ ಯೋಗಿ ಎಣ್ಣೆ ಬಾಟಲಿಗಳನ್ನು ಹಾಸಿಗೆಯನ್ನಾಗಿ ಮಾಡಿಕೊಂಡು ಕೈಯಲ್ಲಿ ಮೂರು ಸಿಗರೇಟು ಇಡಿದುಕೊಂಡಿರುವ ಪೋಸ್ಟರ್ ಕುಡುಕರ ಸಾಮ್ರಾಜ್ಯ ಸೃಷ್ಠಿ ಮಾಡಿದೆ

ಎಂ.ವೆಂಕಟನಾರಾಯಣ್(ಠಾಗೋರ್ ಕೃಷ್ಣ) ನಿರ್ಮಿಸುತ್ತಿದ್ದ ಯೋಗೇಶ್ ಎಂ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಸನ್ನಿವೇಶಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆರಂಭ ಫಲಕ ತೋರಿದರು. ಶಾಸಕ ಎಂ. ಕೃಷ್ಣಪ್ಪ ಕ್ಯಾಮೆರಾ ಚಾಲನೆ ಮಾಡಿದರು. “ನಾಗರಹಾವು” ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಫಸ್ಟ್ ಲುಕ್ ಪೆÇೀಸ್ಟರ್ ಅನಾವರಣ ಮಾಡಿದರು.
ಈ ವೇಳೆ ಮಾತಿಗಿಳಿದ ನಟ ಲೂಸ್ ಮಾದ ಯೋಗಿ, ನಾನು ಮತ್ತು ಧ್ರುವ ಸರ್ಜಾ ಒಂದೇ ಸ್ಕೂಲ್ ನಲ್ಲಿ ಓದಿದವರು. ಸುಮಾರು ಎರಡು ವರ್ಷಗಳ ನಂತರ ನಾಯಕನಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ನಡೆದಿದೆ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಅಲ್ಲದೆ ಮತ್ತೊಂದು ಇದೆ. ಬೆಂಗಳೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ ಎಂದರು
ನಿರ್ದೇಶಕ ಯೋಗೇಶ್ ಮುನಿಸಿದ್ದಪ್ಪ ಮಾತನಾಡಿ ಮೂರು ವರ್ಷಗಳಲ್ಲಿ ಅತೀ ಹೆಚ್ಚು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದ್ದೇನೆ. ವಿಮಾನ ಹತ್ತಿದ ತಕ್ಷಣ ಮೊಬೈಲ್ ಪಕ್ಕಕ್ಕೆ ಇಟ್ಟು ಚಿತ್ರದ ಕಥೆ ಬರೆಯುತ್ತಿದೆ. ಪ್ರತಿಬಾರಿ ಯೋಗಿ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುವಾಗ ಈ ವರ್ಷದ ಹುಟ್ಟುಹಬ್ಬಕ್ಕೆ ಚಿತ್ರ ಆರಂಭ ಮಾಡೋಣ ಅಂತ ಹೇಳುತ್ತಿದ್ದೆ. ಕಾಲ ಈಗ ಕೂಡಿ ಬಂದಿದೆ. ಚಿತ್ರಕ್ಕೆ “ಯುಗ ಮರೆಯದ ಪ್ರೇಮ ಕಥೆ” ಎಂಬ ಅಡಿಬರಹವಿದೆ. ಇದೊಂದು ಪ್ರೇಮಕಥೆಯ ಚಿತ್ರ ಎಂದು ಹೇಳಿದರು

ನಾಯಕಿ ಆಕಾಂಕ್ಷ ರಾವ್‍ಮಾತನಾಡಿ ತುಳು ಚಿತ್ರದಲ್ಲಿ ನಟಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ ಎಂದು ತಿಳಿಸಿದರು.
ನಿರ್ಮಾಪಕ ಎಂ.ವೆಂಕಟನಾರಾಯಣ ,ಸಂಗೀತ ನಿರ್ದೇಶಕ ಪ್ರದ್ಯೂತನ್,ಛಾಯಾಗ್ರಾಹಕ ಸಂಕೇತ್ ಮತ್ತಿತರಿದ್ದರು


