ರೈತ ಅಭಿಮಾನಿಯ ಸಿನಿಮಾ ಸಾಹಸ “ದೇವಿ” : ನಿರೀಕ್ಷೆ ಮೂಡಿಸಿದ ಯುವ ನಟ ಚೇತನ್
ಚಿತ್ರರಂಗದಲ್ಲಿ ಆದ ಕಹಿ ಘಟನೆಗಳನ್ನು ಮರೆತು ಬಣ್ಣದ ಲೋಕದಲ್ಲಿ ಸಾಧಿಬೇಕು ಎನ್ನುವ ಛಲದೊಂದಿಗೆ ಮಂಡ್ಯದ ಯುವ ರೈತ ಚೇತನ್ ” ದೇವಿ” ಚಿತ್ರದ ಮೂಲಕ ಚಿತ್ರರಂಗದಲ್ಲಿ ಅದೃಷ್ಟ ಹರಸಲು ಮುಂದಾಗಿದ್ದಾರೆ.ಯುವ ನಟ ಚೇತನ್ ಅವರಿಗೆ ಬಿಗ್ ಬಾಸ್ ಬೆಡಗಿ ಭವ್ಯಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ದೇವಿ ಚಿತ್ರದ ಶೀರ್ಷಿಕೆಯಡಿ ” ಅಮ್ಮ ಅಂದ್ರೆ ತುಪ್ಪ… ಅಮ್ಮನ್ ಅಂದ್ರೆ ಹಾಲು ತುಪ್ಪಾ ಎನ್ನುವ ಅಡಿ ಬರಹದೊಂದಿಗೆ ಸದ್ದು ಮಾಡಲು ಮುಂದಾಗಿದ್ದಾರೆ. ರೈತನ ಸಾಹಸಕ್ಕೆ ಚಿತ್ರರಂದ ಹಿರಿಯ ನಿರ್ಮಾಪಕ ,ಕಲಾವಿದ ಕರಿ ಸುಬ್ಬು, ಕಲಾವಿದರಾದ ಶಿವರಾಜ್ ಕೆ.ಆರ್ ಪೇಟೆ, ಹುಲಿ ಕಾರ್ತಿಕ್ ಹಾಗು ಸಂಭಾಷಣಾಕಾರ ಹುಲಿ ಕಾರ್ತಿಕ್ ಸೇರಿದಂತೆ ಒಂದಷ್ಟು ಮಂದಿ ಸಾಥ್ ನೀಡಿ ಚೇತನ್ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ.
ಈ ವೇಳೆ ಮಾತಿಗಿಳಿದ ನಟ ಚೇತನ್ ಈ ಹಿಂದೆ ಹಲವು ಚಿತ್ರ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದೆ. ಅಲ್ಲಿ ಆದ ಅನುಭವದಿಂದ ಚಿತ್ರರಂಗದ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನ ಪಡೆದು ಬರುವಾಗ 20 ನಿಮಿಷದಲ್ಲಿ ಕತೆ ಹೊಳೆಯಿತು. ದೇವಸ್ಥಾನದ ಮುಂದೆ ನಿಂತಾಗ “ದೇವಿ” ಚಿತ್ರದ ಶೀರ್ಷಿಕೆ ಸಿಕ್ಕಿತು. ಈ ಶೀರ್ಷಿಕೆಯ ಹೆಸರಲ್ಲಿ ಈ ಮುಂಚೆ ಮಧು ಬಂಗಾರಪ್ಪ ಸಿನಿಮಾ ಮಾಡಿದ್ದರು ಅದು ಅರ್ದಕ್ಕೆ ನಿಂತಿದೆ ಎನ್ನುವ ಸಂಗತಿ ವಾಣಿಜ್ಯ ಮಂಡಳಿಯಿಂದ ತಿಳಿಯಿತು. ನಮ್ಮ ಚಿತ್ರದ ಕಥೆ ವಿಷಯ ತಿಳಿದು ದೇವಿ ಶೀರ್ಷಿಕೆ ನೀಡಿದ್ದಾರೆ ಎಂದರು.

ಸಾಧನೆ ಮಾಡಲು ಹಳ್ಳಿಯಿಂದ ನಗರಕ್ಕೆ ಬಂದ ಹುಡುಗ ರೌಡಿಸಂಗೆ ಇಳಿಯುವ ಕಥೆ ಹೊಂದಿದೆ.ತಾಯಿಯನ್ನು ಪೂಜಿಸುವ ಹುಡುಗ. ಈ ಕಾರಣಕ್ಕಾಗಿಯೇ ಅಮ್ಮ ಅಂದ್ರೆ ತುಪ್ಪ.. ಅಮ್ಮನನ್ನು ಬೈದರೆ ಹಾಲು ತುಹೇಳಿಕೊಡುತ್ತಿದ್ದಾರೆ. ಇಟ್ಟಿದ್ದೇವೆ. ಜೋಗಿ ರೀತಿ ಆಗಲ್ಲ. ಜೋಗಿ-2 ಆಗಬಹುದು ಎಲ್ಲರ ಸಹಕಾರ ಬೆಂಬಲ ಬೇಕು ಎಂದು ಕೇಳಿಕೊಂಡರು..
ಈ ಸಿನಿಮಾ ಮಾಡಲು ಉದ್ಯಮಕ್ಕೆ ಬರಲು ಮೂಲ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್.. ಅವ್ರ ಮೇಲಿನ ಅಭಿಮಾನ ಪ್ರೀತಿ ಅವ್ರ ಒಳ್ಳೆತನವೇ ನನಗೆ ಸ್ಫೂರ್ತಿ. ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು ಅಗತ್ಯ ತರಬೇತಿ ಪಡಯುತ್ತಿದ್ದೇನೆ. ಮೋಹನ್ ಮತ್ತು ರುದ್ರ ಮಾಸ್ಟರ್ ಡ್ಯಾನ್ಸ್ ಹೇಳಿಕೊಡುತ್ತಿದ್ದಾರೆ. ಚಿತ್ರದಲ್ಲಿ ಆಕ್ಷನ್, ತಾಯಿಯ ಸೆಂಟಿಮೆಂಟ್ ಸೇರಿದಂತೆ ಚಿತ್ರಕ್ಕೆ ಬೇಕಾದ ಹಲವು ಅಂಶಗಳನ್ನು ಸೇರಿದ್ದೇವೆ ಎಂದರು.

ಸಂಭಾಷಣೆಕಾರ ಮಾಸ್ತಿ ಮಾತನಾಡಿ ಚೇತನ್ ಹೇಳಿದ ಹಾಗೆ ಡೈಲಾಗ್ ಬರೆದುಕೊಡಲಾಗುತ್ರಿದೆ.ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು

