Silver Jubilee of the American "Akka" Conference: "Akka - Cinegandha" Film Festival Organized

ಅಮೆರಿಕಾದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬ : “ಅಕ್ಕ – ಸಿನಿಗಂಧ” ಚಲನಚಿತ್ರೋತ್ಸವ ಆಯೋಜನೆ - CineNewsKannada.com

ಅಮೆರಿಕಾದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬ : “ಅಕ್ಕ – ಸಿನಿಗಂಧ” ಚಲನಚಿತ್ರೋತ್ಸವ ಆಯೋಜನೆ

ಅಮೇರಿಕಾ ಕನ್ನಡದ ಕೂಟಗಳ ಆಗ – ಅಕ್ಕ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಈ ಬಾರಿ ಫಿಲಿಡೆಲ್ಪಿಯಾದಲ್ಲಿ ಈ ಸಂಭ್ರಮ ನಡೆಯಲಿದೆ, ಈ ಬಾರಿ ಆಚರಣೆಗೆ ಸೀಮಿತಗೊಳಿಸದೆ, ಕನ್ನಡ ಚಲನಚಿತ್ರಗಳಿಗೆ ಜಾಗತಿಕ ವೇದಿಕೆ ಕಲ್ಪಿಸಬೇಕೆಂಬ ದೂರದೃಷ್ಟಿ ಹೊಂದಿದೆ, ಇದಕ್ಕೆ ಮಧು ರಂಗಯ್ಯ ಸಂಪೂರ್ಣ ಸಹಕಾರದಿಂದ ‘ಅಕ್ಕ -ಸಿನಿಗನ್ನಡ ಚಲನಚಿತ್ರೋತ್ಸವ 2026’ ನಡೆಯುತ್ತಿದೆ

‘ಅಕ್ಕ -ಸಿನಿಗನ್ನಡ ಚಲನಚಿತ್ರೋತ್ಸವ 2026’ ಎಂಬ ಉತ್ಸವ, ಕರ್ನಾಟಕದ ಶ್ರೇಷ್ಠ ಚಿತ್ರಗಳನ್ನು ಫಿಲಡೆಲ್ಫಿಯಾದ ಜಾಗತಿಕ ವೇದಿಕೆಗೆ ತಲುಪಿಸುವ ಐತಿಹಾಸಿಕ ಪ್ರಯತ್ನವಾಗಿದೆ. ಉತ್ಸವದ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ರೂವಾರಿಗಳಾದ ಗೌರೀಶ್ ಅಕ್ಕಿ ಹಾಗೂ ಬಡಿಗೇರ್ ದೇವೇಂದ್ರ ಮಾಹಿತಿ ನೀಡಿದ್ದಾರೆ

ಚಲನಚಿತ್ರೋತ್ಸವದ ನಿರ್ದೇಶಕ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ ಜಗತ್ತಿನಾದ್ಯಂತ ಐದು ಸಾವಿರಕ್ಕೂ ಹೆಚ್ಚು ಚಲನಚಿತ್ರೋತ್ಸ ನಡೆಯುತ್ತವೆ. ಬೆಂಗಳೂರಿನಲ್ಲೂ ಹದಿನೇಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆದಿವೆ. ಈ ಬಾರಿ ಅಮೆರಿಕಾದಲ್ಲಿ “ಅಕ್ಕ”, ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ಆಯೋಜಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಬಡಿಗೇರ್ ದೇವೇಂದ್ರ ಹಾಗೂ ಗೌರೀಶ್ ಅಕ್ಕಿ, “ಅಕ್ಕ” ತಂಡದ ಮಾರ್ಗದರ್ಶನ ಮತ್ತು ಸಹಕಾರದ ಮೇರೆಗೆ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಎಂದರು

ಸಾಮಾನ್ಯವಾಗಿ ಚಿತ್ರೋತ್ಸವಗಳು ಅಸ್ಮಿತೆ ಬಿಂಬಿಸುತ್ತಾ, ಒಂದು ಪ್ರಾದೇಶಿಕತೆ ನೀಡುತ್ತಾ ಹೋಗುತ್ತವೆ. ಈಗ ಸಿನಿಮಾ ನೋಡಲು ಸಾಕಷ್ಟು ಮಾರ್ಗಗಳಿವೆ. ಆದರೆ ಚಲನಚಿತ್ರೋತ್ಸವದಲ್ಲಿ ಚಿತ್ರಗಳನ್ನು ನೋಡಿದಾಗ ಆಗುವ ಸಂತೋಷವೇ ಬೇರೆ. ಅಲ್ಲಿ ವೀಕ್ಷಿಸಿದ ಚಿತ್ರಗಳನ್ನು ಮರೆಯುವುದು ಕಡಿಮೆ. ಅಲ್ಲಿ ಬಂದಿರುವ ಚಿತ್ರಾಸಕ್ತರ ಜೊತೆ ಸೇರಿ ಆ ಚಿತ್ರ ಗ್ರಹಿಸುವ ಪ್ರಯತ್ನ ಕೂಡ ಮಾಡುತ್ತೇವೆ. ಚಿತ್ರೋತ್ಸವಗಳಲ್ಲಿ ಒಟ್ಟಾಗಿ ಒಂದು ವೇದಿಕೆಯಲ್ಲಿ ಚಿತ್ರವನ್ನು ನೋಡಿ, ಅದರ ಬಗ್ಗೆ ಚರ್ಚೆ ಮಾಡಿದಾಗ ನಮ್ಮ ಗ್ರಹಿಕೆ ಸರಿಯಾ, ನೋಡಿದ ಬೇರೆ ಪ್ರೇಕ್ಷಕರ ಗ್ರಹಿಕೆ ಸರಿಯಾ ಎಂದು ಚರ್ಚೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

2025ರ ಜನವರಿ 1 ರಿಂದ ಡಿಸಂಬರ್ 31ರ ಒಳಗೆ ತಯಾರಾದ ಚಿತ್ರಗಳು “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ಕ್ಕೆ ಆಯ್ಕೆಯಾಗುವುದಕ್ಕೆ ಅರ್ಹತೆ ಪಡೆಯುತ್ತವೆ. ಮೊದಲು, ಐದು ಜನರ ಆಯ್ಕೆ ಸಮಿತಿ ಚಿತ್ರೋತ್ಸವಕ್ಕೆ ಆಯ್ಕೆಯಾದ ಎಲ್ಲಾ ಚಿತ್ರ ನೋಡಿ, ಹತ್ತು ಚಿತ್ರ ಆಯ್ಕೆ ಮಾಡುತ್ತಾರೆ. ಅನಂತರ ಮತ್ತೊಂದು ಮೂರು ಸದಸ್ಯರ ಸಮಿತಿ ಈ ಹತ್ತು ಚಿತ್ರಗಳಲ್ಲಿ ಮೂರು ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಆ ಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದುಕೊಳ್ಳಲಿವೆ. ಮೊದಲ ಚಿತ್ರಕ್ಕೆ ಒಂದು ಲಕ್ಷ, ಎರಡನೇ ಚಿತ್ರಕ್ಕೆ ಐವತ್ತು ಸಾವಿರ ಹಾಗೂ ಮೂರನೇ ಚಿತ್ರಕ್ಕೆ ಇಪ್ಪತ್ತೈದು ಸಾವಿರ ನಗದು ಬಹುಮಾನಗಳಿರುತ್ತದೆ. ಇಲ್ಲಿ ಆಯ್ಕೆಯಾದ ಹತ್ತು ಚಿತ್ರಗಳು “ಅಕ್ಕ” ಸಮ್ಮೇಳನದಲ್ಲಿ ಪ್ರದರ್ಶನವಾಗುತ್ತದೆ ಎಂದರು

ವೆಬ್ ಸೈಟ್ ಮೂಲಕ ಅರ್ಜಿ

ಈಗಾಗಲೇ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” https://cinegannadafilmfest.org/ ವೆಬ್ ಸೈಟ್ ನಲ್ಲಿ ಅರ್ಜಿ ಲಭ್ಯವಿದೆ. ಆಸಕ್ತರು ಅರ್ಜಿ ಭರ್ತಿ ಮಾಡಿ ಇಂದಿನಿಂದಲೇ ತಮ್ಮ ಚಿತ್ರಗಳನ್ನು ಚಿತ್ರೋತ್ಸವಕ್ಕೆ ಕಳುಹಿಸಿಕೊಡಬಹುದು ಎಂದು ಮಾಹಿತಿ ನೀಡಿದರು

ಚಿತ್ರೋತ್ಸವದ ಸಂಘಟಕ ಗೌರೀಶ್ ಅಕ್ಕಿ ಮಾತನಾಡಿ ಅಮೆರಿಕಾದಲ್ಲಿ ಪ್ರದರ್ಶನವಾಗುವ ಹಾಗೂ ಹಣಗಳಿಸುವ ಚಿತ್ರಗಳಲ್ಲಿ ಮೊದಲ ಸ್ಥಾನದಲ್ಲಿ ತೆಲುಗು, ತಮಿಳು ಚಿತ್ರಗಳು ಬರುತ್ತವೆ. ನಂತರ ಸ್ಥಾನದಲ್ಲಿ ಕನ್ನಡ ಚಿತ್ರಗಳು ಬರುತ್ತವೆ. ಆ ನಿಟ್ಟಿನಲ್ಲಿ ಅಮೆರಿಕಾ ಕನ್ನಡಿಗರಿಗೆ ನಮ್ಮ ಚಿತ್ರಗಳನ್ನು ತಲುಪಿಸಲು ಈ ಚಿತ್ರೋತ್ಸವ ಸೂಕ್ತ ವೇದಿಕೆಯಾಗಿದೆ. ಸಿನಿಮಾಗಳನ್ನು ಗುರುತಿಸುವ ಕೆಲಸ ನಾವು ಮಾಡೋಣ ಎಂದು ಬಡಿಗೇರ್ ದೇವೇಂದ್ರ ಅವರು ಹೇಳಿದಾಗ ನಾನು ಅವರ ಜೊತೆಯಾದೆ ಎಂದು ಹೇಳಿದರು.

ಚಿತ್ರದ ನಿರ್ದೇಶಕರು ಹಾಗೂ ಸಿನಿಗನ್ನಡ ಚಲನಚಿತ್ರೋತ್ಸವದ ರೂವಾರಿಗಳಾದ ಬಡಿಗೇರ್ ದೇವೇಂದ್ರ ಮಾತನಾಡಿ ಅಕ್ಕ ಸಮ್ಮೇಳನದ ಅಧ್ಯಕ್ಷ ಮಧು ರಂಗಯ್ಯ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಚಿತ್ರೋತ್ಸವ ನಡೆಯಲಿದ್ದು, ಇಂದಿನಿಂದಲೇ ಅಧಿಕೃತ ವೆಬ್ಸೈಟ್ ನಲ್ಲಿ ಸಿನಿಮಾ ಸಲ್ಲಿಸಬಹುದು, ಆಸಕ್ತಿವುಳ್ಳವರು ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಹಾಕಬಹುದು. ಆಗಸ್ಟ್ ಮೊದಲ ವಾರದಿಂದ ಚಿತ್ರಗಳನ್ನು ನೋಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆಗಸ್ಟ್ ಕೊನೆಯವಾರದಲ್ಲಿ ಇಲ್ಲೇ ಸಮಾರಂಭ ಆಯೋಜಿಸಿ ಪ್ರಶಸ್ತಿ ವಿಜೇತ ಚಿತ್ರಗಳನ್ನು ಘೋಷಿಸಲಾಗುವುದು ಎಂದು ಎಂದರು

“ಅಕ್ಕ”ದಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು ಸೇರಿದಂತೆ ಹತ್ತು ಚಿತ್ರಗಳ ಪ್ರದರ್ಶನವಾಗುತ್ತವೆ. ವಿಜೇತ ಚಿತ್ರತಂಡದವರು ವೀಸಾ ಉಳ್ಳವರಾಗಿದ್ದರೆ ಅವರನ್ನು “ಅಕ್ಕ” ಸಮ್ಮೇಳನಕ್ಕೂ ಕರೆದುಕೊಂಡು ಹೋಗುವ ಯೋಜನೆ ಇದೆ. ಉತ್ತಮ ಕನ್ನಡ ಚಿತ್ರಗಳನ್ನು ಅಮೆರಿಕಾದ ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ಆಯೋಜಿಸಲಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin