ಗಾಯಕ ಅರ್ಮಾನ್ ಮಲ್ಲಿಕ್ ಕಂಠಸಿರಿಯಲ್ಲಿ “ರಾಶಿ” ಚಿತ್ರದ ‘ಮೊದಲ ಪ್ರೀತಿ’ ಹಾಡು ಬಿಡುಗಡೆ

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ “ರಾಶಿ” ಚಿತ್ರದ ಮೊದಲ ಹಾಡು “” ಮೊದಲ ಪ್ರೀತಿ’ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್ ಅವರೆ ಬರೆದು, ಸಂಗೀತ ಸಂಯೋಜಿಸಿರುವ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ.

ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಆದಿತ್ಯ ಶಶಿಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದಿತ್ಯ ಸಹ ತಂದೆ ಶಶಿಕುಮಾರ್ ಅವರ ಹಾಗೆ ಉತ್ತಮ ನೃತ್ಯಗಾರ. ಆದಿತ್ಯ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗುವುದಂತು ಖಂಡಿತ. ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ ಹಾಗೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯೂ ಆಗುತ್ತಿದೆ.

ಚಿತ್ರದಲ್ಲಿ ಒಟ್ಟು ಆರು ಗೀತೆಗಳಿದೆ. ಆ ಪೈಕಿ ಐದು ಚಿತ್ರದಲ್ಲಿದ್ದು, ಒಂದು ಪ್ರಚಾರಗೀತೆಯಾಗಿರಲಿದೆ. ಕುನಾಲ್ ಗಾಂಜಾವಾಲ, ವಿಜಯ್ ಯೇಸುದಾಸ್, ಅನುರಾಧಾ ಭಟ್, ಶರಣ್, ಮಳವಳ್ಳಿ ಮಹದೇಸ್ವಾಮಿ, “ಸಿಟಿ ಲೈಟ್ಸ್”, “ಭಾವ ಭಾವ” ಖ್ಯಾತಿಯ ಅಂಕಿತ್ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ.

ಈಗಾಗಲೇ ಚಿತ್ರೀಕರಣ ಪೂರೈಸಿ ತೆರೆಗೆ ಬರಲು ಅಣಿಯಾಗುತ್ತಿರುವ ಚಿತ್ರವನ್ನು ಅಖಿಲೇಶ್ ನಿರ್ಮಾಣ ಮಾಡುತ್ತಿದ್ದಾರೆ. ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಕಥೆ ಬರೆದಿದ್ದಾರೆ. ಚಿತ್ರಕಥೆ ನಿರ್ದೇಶಕರದು. ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮಹೇಶ್ ಸಾತನೂರು ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.

ಆದಿತ್ಯ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಸಮೀಕ್ಷಾ ನಟಿಸಿದ್ದಾರೆ. ರಮೇಶ್ ಇಂದಿರಾ, ತಬಲ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ, ಭಜರಂಗಿ ಪ್ರಸನ್ನ ಮುಂತಾದವರು “ರಾಶಿ” ಚಿತ್ರದ ತಾರಾಬಳಗದಲ್ಲಿದ್ದಾರೆ.

Related Posts

ಬೃಂದಾವಿಹಾರಿ ಚಿತ್ರ ನವಂಬರ್ 20 ರಂದು ಬಿಡುಗಡೆ: ಕುತೂಹಲ ಹೆಚ್ಚಳ

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ `ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಮುಳಬಾಗಿಲಿನಲ್ಲಿ ಅದದೂರಿಯಾಗಿ ನಡೆಯಿತು, ಇದೇ ವೇಳೆ ಕನ್ನಡ ರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಕಟ್ಟಿತು. ಕರುನಾಡ ಚಕ್ರವರ್ತಿ ಡಾ. ಶಿವರಾಜ್‍ಕುಮಾರ್ ಸೇರಿದಂತೆ ಚಿತ್ರತಂಡದ ಹಲವು ಕಲಾವಿದರು ಅಪರೂಪದ…

“ಮ್ಯಾರೇಜ್ ಪಾರ್ಟಿ” ಚಿತ್ರದ ಅಂದಗಾತಿಯೇ ಲರಿಕಲ್ ವೀಡಿಯೋ ಬಿಡುಗಡೆ..

ಚಯನ್ ಶೆಟ್ಟಿ ನಿರ್ದೇಶನದಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ “ಮ್ಯಾರೇಜ್ ಪಾರ್ಟಿ” ಚಿತ್ರದ `ಅಂದಗಾತಿಯೇ’ ಎಂಬ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಪ್ರೀತಿಯ ನವಿರು ಭಾವಗಳಿಂದ ಮೈದುಂಬಿಕೊಂಡಂತಿರೋ ಈ ಹಾಡಿನ ಮೂಲಕ ಮ್ಯಾರೇಜ್ ಪಾರ್ಟಿಯ ಮತ್ತೊಂದು ಮಜಲು ಅನಾವರಣಗೊಂಡಿದೆ. ಮೊದಲಾ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581