ಅತ್ಯಾಧುನಿಕ ತಂತ್ರಜ್ಞಾನದ ಸಮಗ್ರ ಸ್ಟುಡಿಯೋ `ದಿ ಮೀಡಿಯಾ ಹೌಸ್’ ಆರಂಭ

ದೊಡ್ಡ ಬಜೆಟ್ ಸಿನಿಮಾಗಳಿಂದ ಕಿರುಚಿತ್ರಗಳವರೆಗೆ, ವೆಬ್ ಸಿರೀಸ್‍ನಿಂದ ಜಾಹೀರಾತು ಚಿತ್ರಗಳವರೆಗೆ ಎಲ್ಲ ರೀತಿಯ ಸಿನಿಮಾ ಮತ್ತು ಮೀಡಿಯಾ ಪ್ರಾಜೆಕ್ಟ್‍ಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಿರುವುದು ಈ ಸ್ಟುಡಿಯೋದ ವಿಶೇಷತೆ.

ಸಮಗ್ರ ತಾಂತ್ರಿಕ ಸೌಲಭ್ಯಗಳಿಗಾಗಿ ಈ ಹಿಂದೆ ಚೆನ್ನೈ ಅಥವಾ ಹೈದರಾಬಾದ್‍ಗೆ ತೆರಳಬೇಕಾದ ಪರಿಸ್ಥಿತಿಯಿತ್ತು. ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರಿಗೆ ಕರ್ನಾಟಕದಲ್ಲೇ ವಿಶ್ವಮಟ್ಟದ ಸೌಲಭ್ಯಗಳು ದೊರೆಯಬೇಕು ಎಂಬ ಉದ್ದೇಶದಿಂದ ಈ ಸ್ಟುಡಿಯೋವನ್ನು ರೂಪಿಸಲಾಗಿದೆ.

ಓಟಿಟಿ ಯುಗಕ್ಕೆ ಅನುಗುಣವಾಗಿ ನೆಟ್‍ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜೀ5 ಸೇರಿದಂತೆ ವಿವಿಧ ಓಟಿಟಿ ವೇದಿಕೆಗಳಿಗೆ ಅಗತ್ಯವಿರುವ ಸಿನಿಮಾ ಮತ್ತು ಮೀಡಿಯಾ ಪ್ರಾಜೆಕ್ಟ್‍ಗಳ ನಿರ್ಮಾಣಕ್ಕೂ ಪೂರಕವಾದ ವ್ಯವಸ್ಥೆ ಇಲ್ಲಿದೆ. ಎಐ ತಂತ್ರಜ್ಞಾನದ ಬಳಕೆಯ ಮೂಲಕ ಹೊಸ ರೀತಿಯ ದೃಶ್ಯಗಳು ಮತ್ತು ಕಂಟೆಂಟ್ ರೂಪಿಸಲು ಅವಕಾಶ ಕಲ್ಪಿಸಲಾಗಿದೆ.

ನಿರ್ದೇಶಕರು, ಬರಹಗಾರರು, ನಟ-ನಟಿಯರು ಹಾಗೂ ಚಿತ್ರರಂಗದ ವಿವಿಧ ವಿಭಾಗಗಳ ಕಲಾವಿದರು ಮತ್ತು ತಂತ್ರಜ್ಞರು ಒಂದೆಡೆ ಸೇರಿ ಕಥೆ, ಚಿತ್ರಕಥೆ ಹಾಗೂ ಸಿನಿಮಾ ನಿರ್ಮಾಣದ ಕುರಿತು ಚರ್ಚಿಸಲು ಅನುಕೂಲವಾಗುವಂತೆ ವಿಶಾಲವಾದ ಪ್ರತ್ಯೇಕ ಸ್ಥಳವನ್ನೂ ಸಿದ್ಧಪಡಿಸಲಾಗಿದೆ. ಸೃಜನಾತ್ಮಕ ಚರ್ಚೆಗಳು ಮತ್ತು ಸಿನಿಮಾ ಯೋಜನೆಗಳ ರೂಪುರೇಷೆ ಸಿದ್ಧಪಡಿಸಲು ಇದು ಸಹಕಾರಿಯಾಗಲಿದೆ.

ಸ್ಟುಡಿಯೋದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ನುರಿತ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ವಿಭಾಗದಲ್ಲೂ ಗುಣಮಟ್ಟದ ತಾಂತ್ರಿಕ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.

ಸ್ಟುಡಿಯೋದ ರೂವಾರಿಗಳಾದ ಸ್ಕೈಲೈನ್‍ನ ದಿಲೀಪ್, ಪ್ರತಾಪ್ ಶೆಟ್ಟಿ ಹಾಗೂ ಶ್ರೀಕಾಂತ್ ಅವರು ಸ್ಟುಡಿಯೋದ ಪರಿಕಲ್ಪನೆ, ವಿಶೇಷತೆಗಳು ಮತ್ತು ಇಲ್ಲಿರುವ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಿರಿ ಮ್ಯೂಸಿಕ್‍ನ ಸುರೇಶ್ ಚಿಕ್ಕಣ್ಣ ಅವರು ಉಪಸ್ಥಿತರಿದ್ದು ಮಾಹಿತಿ ಹಂಚಿಕೊಂಡರು

Related Posts

ರಾಮಾಯಣ ಚಿತ್ರ 1000 ಕೋಟಿ ರೂಪಾಯಿ ಗಳಿಕೆ: ಯಶ್ ಮುಡಿಗೆ ಮತ್ತೊಂದು ಐತಿಹಾಸಿಕ ದಾಖಲೆ

ನಿತೇಶ್ ತಿವಾರಿ ನಿರ್ದೇಶನದಲ್ಲಿ, ನಮಿತ್ ಮಲ್ಹೋತ್ರಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ `ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ವಿಶ್ವದಾದ್ಯಂತ 1000…

Kalusha Movie Review : ವೈದ್ಯಕೀಯ ಲೋಕದ ಕರಾಳ ಜಗತ್ತಿನ ಅನಾವರಣದ ಚಿತ್ರ “ಕಲುಷ”

ಚಿತ್ರ : ಕಲುಷಕಥೆ ಚಿತ್ರಕಥೆ,ಸಂಭಾಷಣೆ : ಯುವನ್ ಪ್ರತಾಪ್,ತಾರಾಗಣ : ಯುವನ್ ಪ್ರತಾಪ್, ಐಶ್ವರ್ಯ ಮುತ್ತುರಾಜ್, ಸಂಗೀತ ನರೇಂದ್ರ, ಕೆ.ಎಸ್ ಶ್ರೀಧರ್,ಬಾಲರಾಜವಾಡಿ ಮತ್ತಿತರರುರೇಟಿಂಗ್ : *** 3/5 ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಯುವ ಪ್ರತಿಭೆಗಳು ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಹೊಸ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581