ರಾಮಾಯಣ ಚಿತ್ರ 1000 ಕೋಟಿ ರೂಪಾಯಿ ಗಳಿಕೆ: ಯಶ್ ಮುಡಿಗೆ ಮತ್ತೊಂದು ಐತಿಹಾಸಿಕ ದಾಖಲೆ

ಸಿನಿಮಾ ವಿಶ್ವದಾದ್ಯಂತ 1000 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಕರ್ನಾಟಕದಲ್ಲಿಯೂ 100 ಕೋಟಿ ಗ್ರಾಸ್ ಗಳಿಕೆ ಮಾಡುವ ಮೂಲಕ ಕನ್ನಡಿಗರ ಹೆಮ್ಮೆ ಇಮ್ಮಡಿಗೊಳಿಸಿದೆ.

ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ವಿಶ್ವದಾದ್ಯಂತ ಗಳಿಸಿದ ಒಟ್ಟು ಮೊತ್ತದಲ್ಲಿ ಕರ್ನಾಟಕದ ಪಾಲು ಶೇ.10ರಷ್ಟಿರುವುದು ವಿಶೇಷ. ಕನ್ನಡದ ಮಣ್ಣಿನ ಪ್ರತಿಭೆಯೊಂದು ಜಾಗತಿಕ ಮಟ್ಟದಲ್ಲಿ ಈ ಪರಿಯ ಯಶಸ್ಸು ಸಾಧಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ವಿಶ್ವದಾದ್ಯಂತ 1000 ಕೋಟಿ ಗ್ರಾಸ್ ಗಳಿಸಿದ ಯಶ್ ಅವರ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೆ ರಾಮಾಯಣ' ಪಾತ್ರವಾಗಿದೆ. ಕರ್ನಾಟಕದಲ್ಲಿ 100 ಕೋಟಿ ಗ್ರಾಸ್ ಗಳಿಸಿದ ಅವರ ಮೂರನೇ ಚಿತ್ರ ಎಂಬ ದಾಖಲೆಗೂ ಈ ಸಿನಿಮಾ ಸಾಕ್ಷಿಯಾಗಿದೆ. ಈ ಹಿಂದೆ ಕೆಜಿಎಫ್-2′ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಶಕ್ತಿಯನ್ನು ತೋರಿಸಿದ್ದ ಯಶ್, ಇದೀಗ `ರಾಮಾಯಣ’ದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕು, ಕರ್ನಾಟಕದ ಹೆಸರನ್ನು ವಿಶ್ವದ ಚಿತ್ರರಂಗದ ಭೂಪಟದಲ್ಲಿ ಮೂಡಿಸಬೇಕು ಎಂಬ ತಮ್ಮ ಆಶಯ ಮತ್ತು ಭರವಸೆಯನ್ನು ಯಶ್ ಮತ್ತೊಮ್ಮೆ ಈಡೇರಿಸಿದ್ದಾರೆ. ಅವರ ಈ ಸಾಧನೆ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಹೊಸ ಆಯಾಮ ನೀಡಿದೆ.

ಇನ್ನು ರಾಮಾಯಣ' ಬ್ರಿಟನ್ ಮಾರುಕಟ್ಟೆಯಲ್ಲಿ ಗಾಡ್ಜಿಲ್ಲಾ’ ಚಿತ್ರವನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿರುವುದು ಚಿತ್ರದ ಜಾಗತಿಕ ಜನಪ್ರಿಯತೆಗೆ ಸಾಕ್ಷಿಯಾಗಿದೆ. ವಿಶ್ವದ ವಿವಿಧ ಭಾಗಗಳಲ್ಲಿ ಯಶ್ ಅವರ ಅಭಿನಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅವರ ಪಾತ್ರ ನಿರ್ವಹಣೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಒಂದೆಡೆ ಸಾವಿರ ಕೋಟಿ ರೂಪಾಯಿಗಳ ಜಾಗತಿಕ ಗಳಿಕೆ, ಮತ್ತೊಂದೆಡೆ ಕರ್ನಾಟಕದಲ್ಲಿ ನೂರು ಕೋಟಿ ರೂಪಾಯಿಗಳ ದಾಖಲೆ. ಈ ಎರಡೂ ಸಾಧನೆಗಳ ಮೂಲಕ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಕನ್ನಡದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ಇದು ಕೇವಲ ಒಬ್ಬ ನಟನ ಯಶಸ್ಸಲ್ಲ, ಕನ್ನಡ ಚಿತ್ರರಂಗದ ಸಾಮರ್ಥ್ಯ ಮತ್ತು ಕನ್ನಡಿಗರ ಹೆಮ್ಮೆಯ ಪ್ರತಿಬಿಂಬವೂ ಹೌದು.

Related Posts

ಅತ್ಯಾಧುನಿಕ ತಂತ್ರಜ್ಞಾನದ ಸಮಗ್ರ ಸ್ಟುಡಿಯೋ `ದಿ ಮೀಡಿಯಾ ಹೌಸ್’ ಆರಂಭ

ಬೆಂಗಳೂರು ಶೇಷಾದ್ರಿಪುರಂನಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮತ್ತು ಪೋಸ್ಟ್ ಪ್ರೊಡಕ್ಷನ್ಸ್ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನದ ಸಮಗ್ರ ಸ್ಟುಡಿಯೋ `ದಿ ಮೀಡಿಯಾ ಹೌಸ್’ ಇತ್ತೀಚೆಗೆ ಉದ್ಘಾಟನೆಗೊಂಡಿತು. ದೊಡ್ಡ ಬಜೆಟ್ ಸಿನಿಮಾಗಳಿಂದ ಕಿರುಚಿತ್ರಗಳವರೆಗೆ, ವೆಬ್ ಸಿರೀಸ್‍ನಿಂದ ಜಾಹೀರಾತು ಚಿತ್ರಗಳವರೆಗೆ…

Kalusha Movie Review : ವೈದ್ಯಕೀಯ ಲೋಕದ ಕರಾಳ ಜಗತ್ತಿನ ಅನಾವರಣದ ಚಿತ್ರ “ಕಲುಷ”

ಚಿತ್ರ : ಕಲುಷಕಥೆ ಚಿತ್ರಕಥೆ,ಸಂಭಾಷಣೆ : ಯುವನ್ ಪ್ರತಾಪ್,ತಾರಾಗಣ : ಯುವನ್ ಪ್ರತಾಪ್, ಐಶ್ವರ್ಯ ಮುತ್ತುರಾಜ್, ಸಂಗೀತ ನರೇಂದ್ರ, ಕೆ.ಎಸ್ ಶ್ರೀಧರ್,ಬಾಲರಾಜವಾಡಿ ಮತ್ತಿತರರುರೇಟಿಂಗ್ : *** 3/5 ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಯುವ ಪ್ರತಿಭೆಗಳು ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಹೊಸ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581