ಫ್ಯಾನ್ಸ್ ಕ್ರಿಕೆಟ್ ಲೀಗ್’ ನ ಹತ್ತನೇ ಆವೃತ್ತಿ: ‘ದೇವರಾಜ್ ಫ್ಯಾನ್ಸ್ ತಂಡಕ್ಕೆ ಗೆಲುವು
ಸಿನಿಮಾ ಹಾಗು ಕ್ರಿಕೆಟ್ ಪ್ರೇಮಿಗಳ ಅಪೂರ್ವ ಸಮಾಗಮ ಅದರಲ್ಲಿಯೂ ಸಿನಿಮಾ ನಟರ ಅಭಿಮಾನಿಳು ಜೊತೆಯಾಗಿ ಆಡಿದ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ಪಂದ್ಯಾವಳಿಯಲ್ಲಿ ಡೈನಾಮಿಕ್ ಹೀರೋ ದೇವರಾಜ್ ಫ್ಯಾನ್ಸ್ ಅಭಿಮಾನಿಗಳು ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ.

ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿಯೇ ಆರಂಭ ಕಂಡ ರೋಚಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹನ್ನೆರಡು ಘಟನುಘಟಿ ತಂಡಗಳೂ ಭಾಗವಿಸಿದ್ದವು.ಅದರಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಅಭಿಮಾನಿಗಳ ತಂಡ ‘ದೇವರಾಜ್ ಫ್ಯಾನ್ಸ್’ ಈ ಬಾರಿ ನಮ್ ಟಾಕೀಸ್ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಆಶೀರ್ವಾದದ ಜೊತೆಗೆ ನಡೆದ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ನ ಹತ್ತನೇ ಆವೃತ್ತಿ ಬೆಂಗಳೂರಿನ ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಹನ್ನೆರಡು ತಂಡಗಳು ತಲಾ ಆರು ಓವರ್ ಗಳ ಪಂದ್ಯ ಆಡಿ, ಕೊನೆಯದಾಗಿ ಸೆಮಿಫೈನಲ್‍ಗೆ ನಾಲ್ಕು ತಂಡಗಳು ತಲುಪಿದವು.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿಮಾನಿಗಳ ‘ಶಿವಸೈನ್ಯ’ ಹಾಗು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ‘ಆಲ್ ಇಂಡಿಯಾ ಪ್ರಜ್ವಲ್ ದೇವರಾಜ್ ಫ್ಯಾನ್ಸ್’ ತಂಡ ಮೊದಲ ಸೆಮಿ ಫೈನಲ್ಸ್ ಆಡಿದರೆ, ಡೈನಮಿಕ್ ಸ್ಟಾರ್ ದೇವರಾಜ್ ಅಭಿಮಾನಿಗಳ ‘ದೇವರಾಜ್ ಫ್ಯಾನ್ಸ್’ ತಂಡ ಹಾಗು ರಘು ಮುಖರ್ಜಿ ಹಾಗು ಅನು ಪ್ರಭಾಕರ್ ಅವರ ‘ರಘು ಅನು ಫ್ಯಾನ್ಸ್’ ತಂಡ ಎರಡನೇ ಸೆಮಿಸ್ ಪಂದ್ಯ ಆಡಿದ್ದರು.

ಈ ಎರಡು ಸೆಮಿಫೈನಲ್‍ಗಳಲ್ಲಿ ಕ್ರಮವಾಗಿ ‘ದೇವರಾಜ್ ಫ್ಯಾನ್ಸ್’ ಹಾಗು ‘ಶಿವಸೈನ್ಯ’ ತಂಡ ಫೈನಲ್ ತಲುಪಿತ್ತು. ಫೈನಲ್ಸ್ ಪಂದ್ಯದಲ್ಲಿ ‘ದೇವರಾಜ್ ಫ್ಯಾನ್ಸ್’ ತಂಡ ‘ಶಿವಸೈನ್ಯ’ ತಂಡ ಮಣಿಸಿ ‘ಫ್ಯಾನ್ಸ್ ಕ್ರಿಕೆಟ್ ಲೀಗ್ – 10’ ರ ಕಿರೀಟವನ್ನ ತನ್ನದಾಗಿಸಿಕೊಂಡಿದೆ,
ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್, ಸಿನಿ ದಂಪತಿ ರಘು ಮುಖರ್ಜಿ ಹಾಗು ಅನು ಪ್ರಭಾಕರ್,ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್ ಅವರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಜಗದೀಶ್ ಗೌಡ್ರು, ಬಿಜೆಪಿ ಕಾರ್ಯಕರ್ತರಾದ ಮಧು ಕೆ ಈ ಬಿ, ಮಂಜು, ವಿಕ್ಕಿ, ಅರುಣ್ ಸೇರಿ ಹಲವು ಭಾಗಿಯಾಗಿದ್ದರು.

ಹಲವು ದಿನಗಳ ಸಿದ್ಧತೆ ಓಡಾಟದ ನಂತರ ಕೊನೆಯದಾಗಿ ಎರಡು ದಿನಗಳ ಈ ಕ್ರಿಕೆಟ್ ಪಂದ್ಯಾಟ ಕಂಡಂತಹ ಯಶಸ್ಸು ನಮ್ಮ ‘ನಮ್ ಟಾಕೀಸ್’ ತಂಡಕ್ಕೆ ಸಂತಸ ನೀಡಿದೆ. ಮೊದಲಿನಿಂದ ಜೊತೆಯಲಿದ್ದು, ಸಹಕರಿಸಿದವರಿಗೆ, ಬಿಡುವು ಮಾಡಿಕೊಂಡು ಈ ಶುಭಗಳಿಗೆಯಲ್ಲಿ ನಮ್ಮೊಡನಿದ್ದ ಗೆಳೆಯರು ಹಾಗು ಇತರ ಹಿರಿಯರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸಲು ಇಚ್ಛೆಸುತ್ತೇವೆ. ಜೊತೆಗೆ
ಪಂದ್ಯಾವಳಿಯಲ್ಲಿ ಪಾಲ್ಗೊಂಡ ಹನ್ನೆರಡು ತಂಡಗಳು ಹಾಗು ಜೊತೆಯಲಿ ನಿಂತು ಸಹಕರಿಸಿದ ಎಲ್ಲರಿಗೂ ಈ ವೇಳೆ ನಮ್ಮ ವಂದನೆಗಳು. ಸ್ನೇಹಿತರಿಗೂ, ಕನ್ನಡ ಚಿತ್ರರಂಗದ ಅಪಾರ ಅಭಿಮಾನಿ ಸಾಗರಕ್ಕೂ ನಾವು ಸದಾ ಚಿರಋಣಿ. ನಿಮ್ಮೆಲ್ಲರ ಸಹಕಾರದಿಂದಲೇ ಈ ಪಂದ್ಯಾವಳಿ ಇಷ್ಟು ಯಶಸ್ಸು ಪಡೆದದ್ದು. ಜೊತೆಯಲ್ಲಿ ನಿಂತು ಸಹಕರಿಸಿದ ಪ್ರತಿಯೊಬ್ಬರಿಗೂ ನಮ್ಮ ಕೃತಜ್ಞತೆಗಳನ್ನು ತಿಳಿಸಲು ಇಚ್ಚಿಸುತ್ತೇವೆ ಎಂದು ಆಯೋಜಕ ಭರತ್ ತಿಳಿಸಿದ್ದಾರೆ.

