ಕನಸುಗಾರ ವಿ.ರವಿಚಂದ್ರನ್ ಅವರಿಗೆ 63ನೇ ಹುಟ್ಟುಹಬ್ಬ
ಕನಸುಗಾರ ರವಿಚಂದ್ರನ್ ಅವರಿಗೆ 63ನೇ ಹುಟ್ಟುಹಬ್ಬ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ( ಮೇ 30) ಮರೆಯಲಾರದ ದಿನ.
ಹುಟ್ಟುಹಬ್ಬ ಈ ಹಿನ್ನೆಲೆಯಲ್ಲಿ ಹುಟ್ಟು ಹಬ್ಬವನ್ನು ರವಿಚಂದ್ರನ್ ಅವರು ಕುಟುಂಬದ ಸದಸ್ಯರು ಆಪ್ತರೊಂದಿಗೆ ವಿಶೇಷವಾಗಿ ಆಚರಿಸಿಕೊಳ್ಳುವ ಮೂಲಕ ಪ್ರತಿ ವರ್ಷವೂ ಹುಟ್ಟುಹಬ್ಬವನ್ನ ವಿಶೇಷವಾಗಿ ಶುಭ ಪ್ರಯತ್ನ ಮಾಡುತ್ತಿದ್ದಾರೆ
ಕನಸುಗಾರ ವಿ.ರವಿಚಂದ್ರನ್ ಅವರಿಗೆ ಮೇ.30 ರಂದು 62 ವರ್ಷ ಪೂರ್ಣಗೊಳಿಸಿ 63ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ .ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರವಿಚಂದ್ರನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿ ಚಿತ್ರರಂಗದಲ್ಲಿ ಮತ್ತಷ್ಟು ಯಶಸ್ವಿ ಚಿತ್ರಗಳನ್ನು ನೀಡಲಿ ಎಂದು ಶುಭ ಹಾರೈಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಎಂದೂ ಮರೆಯಲಾಗದ ಅಪರೂಪದ ಚಿತ್ರಗಳನ್ನು ನೀಡಿರುವ ಹೆಗ್ಗಳಿಕೆ ರವಿಚಂದ್ರನ್ ಅವರದು. ಇತ್ತೀಚಿನ ವರ್ಷದಲ್ಲಿ ವಿಭಿನ್ನ ಕಥೆಗಳ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ತಾವು ಇನ್ನೂ ಚಿತ್ರರಂಗದಲ್ಲಿ ಇದ್ದೇವೆ ಎನ್ನುವುದನ್ನು ನಿರೂಪಿಸುತ್ತಲೇ ಇದ್ದಾರೆ.
ಕನಸುಗಾರ ವಿ ರವಿಚಂದ್ರನ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯಾತಿ ಗಣ್ಯರು ಆಪ್ತರು ಹಾಗೂ ಅಭಿಮಾನಿಗಳು ಶುಭಾಶಯಗಳು ಮಹಾಪೂರವನ್ನೇ ಹರಿಸಿದ್ದಾರೆ.
ಸಾಮಾಜಿಕ ಜಾಲತಾಣ ಸೇರಿದಂತೆ ಖುದ್ದು ರವಿಚಂದ್ರನ್ ಅವರಿಗೆ ಶುಭ ಕೋರಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ
ಸಾಲು ಸಾಲು ಚಿತ್ರಗಳು;
ರವಿಚಂದ್ರನ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ದಿ ಜಡ್ಜ್ ಮೆಂಟ್ ಸೇರಿದಂತೆ ಸಾಲು ಸಾಲು ಚಿತ್ರಗಳು ರವಿಚಂದ್ರನ್ ಅವರ ಕೈಯಲ್ಲಿದೆ.
ಗೌರಿ ಚಿತ್ರದ ಬಳಿಕ ನಿರ್ಮಾಪಕ ಎನ್ಎಸ್ ರಾಜಕುಮಾರ್ ಅವರೊಂದಿಗೆ ಇದೀಗ ಮಹಾಲಕ್ಷ್ಮಿ ಎನ್ನುವ ಹೊಸ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಈ ಚಿತ್ರವನ್ನು ಪುರುಷೋತ್ತಮ್ ಓಂಕಾರ್ ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯದಲ್ಲಿಯೇ ಮಹಾಲಕ್ಷ್ಮಿ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಗಳಿದ್ದು ನಟ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರು ನಟಿಸುತ್ತಿರುವ ಚಿತ್ರಗಳ ತಂಡದ ನಿರ್ಮಾಪಕರು ನಿರ್ದೇಶಕರು ಶುಭ ಹಾರೈಸಿದ್ದಾರೆ