Rashmika Mandanna-Dixit Shetty starrer “The Girlfriend” song released

ರಶ್ಮಿಕಾ ಮಂದಣ್ಣ-ದೀಕ್ಷಿತ್ ಶೆಟ್ಟಿ ನಟನೆಯ “ದಿ ಗರ್ಲ್ ಫ್ರೆಂಡ್” ಹಾಡು ಬಿಡುಗಡೆ - CineNewsKannada.com

ರಶ್ಮಿಕಾ ಮಂದಣ್ಣ-ದೀಕ್ಷಿತ್ ಶೆಟ್ಟಿ ನಟನೆಯ “ದಿ ಗರ್ಲ್ ಫ್ರೆಂಡ್” ಹಾಡು ಬಿಡುಗಡೆ

ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ಅಭಿಯದ “ದಿ ಗರ್ಲ್‍ಫ್ರೆಂಡ್” ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ. “ಯಾವ ಕಡೆ ಕಥೆ” ಎನ್ನುವ ಮೆಲೋಡಿ ಗೀತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಚಿನ್ಮಯಿ ಶ್ರೀಪಾದ ಹಾಗೂ ಹೇಶಾಮ್ ಅಬ್ದುಲ್ ವಹಾಬ್ ಹಾಡಿಗೆ ಧ್ವನಿಯಾಗಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ಸಾಹಿತ್ಯ ಕೂಡ ಒದಗಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ಹಾಡಿನ ಮೋಡಿಗೆ ಮತ್ತಷ್ಟು ಮೆರುಗು ನೀಡಿದೆ.

“ದಿ ಗರ್ಲ್‍ಫ್ರೆಂಡ್” ಕನ್ನಡ, ತೆಲುಗು, ತಮಿಳು ಹೀಗೆ ಬಹುಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದ್ದು ಹಾಡುಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ದಿ ಗರ್ಲ್ ಫ್ರೆಂಡ್ ನಿನಿಮಾವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ.

ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಇದೊಂದು ಲವ್ ಸ್ಟೋರಿ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ `ದಿ ಗರ್ಲ್ ಫ್ರೆಂಡ್’ ಸಿನಿಮಾ ತೆರೆಗೆ ಬರಲಿದೆ. ಕೃಷ್ಣನ್ ವಸಂತ್ ಛಾಯಾಗ್ರಹಣ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕಿದೆ. ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಚಿತ್ರ ಅರ್ಪಿಸಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin