Akhil Akkineni's Fan India film Agent will hit the screens on April 28

ಏಪ್ರಿಲ್ 28 ಕ್ಕೆ ಅಖಿಲ್ ಅಕ್ಕಿನೇನಿ ಫ್ಯಾನ್ ಇಂಡಿಯಾ ಚಿತ್ರ ಏಜೆಂಟ್ ತೆರೆಗೆ - CineNewsKannada.com

ಏಪ್ರಿಲ್ 28 ಕ್ಕೆ ಅಖಿಲ್ ಅಕ್ಕಿನೇನಿ ಫ್ಯಾನ್ ಇಂಡಿಯಾ ಚಿತ್ರ ಏಜೆಂಟ್ ತೆರೆಗೆ

ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್- ಏಪ್ರಿಲ್ 28ಕ್ಕೆ ರಿಲೀಸ್ ಆಗ್ತಿದೆ ಪ್ಯಾನ್ ಇಂಡಿಯಾ ಸಿನಿಮಾ.ಯಂಗ್ ಅಂಡ್ ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ, ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ ಕಾಂಬಿನೇಶನ್ ಹೈ ವೋಲ್ಟೇಜ್ ಸಿನಿಮಾ ‘ಏಜೆಂಟ್’.

ಟಾಲಿವುಡ್ ಅಂಗಳದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 28ಕ್ಕೆ ಸಿನಿಮಾ ತೆರೆ ಮೇಲೆ ಬರುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಎಂದು ತಿಳಿಸಿದ್ದ ಚಿತ್ರತಂಡ ಇದೀಗ ಬಿಡುಗಡೆಯ ದಿನಾಂಕವನ್ನು ರಿವೀಲ್ ಮಾಡಿದೆ.

ವೈಲ್ಡ್ ಆಕ್ಷನ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ‘ಏಜೆಂಟ್’ ಚಿತ್ರದ ರಿಲೀಸ್ ಡೇಟ್ ರಿವೀಲ್ ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿಕ್ಸ್ ಪ್ಯಾಕ್ ನಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ನಿರ್ದೇಶಕ ಸುರೇಂದರ್ ರೆಡ್ಡಿ ಈ ಚಿತ್ರವನ್ನು ಇತರೆ ಸ್ಪೈ ಥ್ರಿಲ್ಲರ್ ಸಿನಿಮಾಗಳಿಗಿಂತಲೂ ಡಿಫ್ರೆಂಟ್ ಆಗಿ ತೆರೆ ಮೇಲೆ ತರುತ್ತಿದ್ದು ಇಬ್ಬರ ಕಾಂಬಿನೇಶನ್ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ವೈದ್ಯ ಅಖಿಲ್ ಅಕ್ಕಿನೇನಿಗೆ ನಾಯಕಿಯಾಗಿ ನಟಿಸಿದ್ದು, ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ರಾಮಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಚಿತ್ರ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಏಜೆಂಟ್ ಸಿನಿಮಾ ಏಪ್ರಿಲ್ 28ಕ್ಕೆ ಬಿಡುಗಡೆಯಾಗುತ್ತಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin