'Amaran' trailer released: Siva Karthikeyan in Major Mukund Varadarajan's biopic

“ಅಮರನ್” ಚಿತ್ರದ ಟ್ರೇಲರ್ ಬಿಡುಗಡೆ: ಮೇಜರ್ ಮುಕುಂದ್ ವರದರಾಜನ್ ಜೀವನಗಾಥೆಯಲ್ಲಿ ಶಿವ ಕಾರ್ತಿಕೇಯನ್ - CineNewsKannada.com

“ಅಮರನ್” ಚಿತ್ರದ ಟ್ರೇಲರ್ ಬಿಡುಗಡೆ: ಮೇಜರ್ ಮುಕುಂದ್ ವರದರಾಜನ್ ಜೀವನಗಾಥೆಯಲ್ಲಿ ಶಿವ ಕಾರ್ತಿಕೇಯನ್

ಕಾಲಿವುಡ್ ನಟ ಶಿವಕಾರ್ತಿಕೇಯನ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅಮರನ್. ಅಮರನ್, ಭಯೋತ್ಪಾದಕ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೇಜರ್ ಮುಕುಂದ್ ವರದರಾಜನ್ ಜೀವನ ಚರಿತ್ರೆಯಾಗಿದೆ. ಈ ಚಿತ್ರದ ಟ್ರೇಲರ್‍ಬಿಡುಗಡೆಯಾಗಿದೆ. ಕನ್ನಡದಲ್ಲಿಯೂ ಟ್ರೇಲರ್ ರಿಲೀಸ್ ಆಗಿದೆ. ಎಮೋಷನ್ ಜೊತೆಗೆ ಆಕ್ಷನ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ.

ಸೇನಾ ರಜೆಯಲ್ಲಿ ಮನೆಗೆ ಬಂದಿರುವ ಯೋಧ ತನ್ನ ಮಗಳೊಂದಿಗೆ ಇರುವ ಕ್ಷಣ, ಮಗಳಿಗೆ ಒಂದು ಪ್ರೀತಿಯ ಅಪ್ಪುಗೆ ಕೊಟ್ಟು ಮತ್ತೆ ದೇಶ ಸೇವೆಗೆ ಹೋಗುವ ದೃಶ್ಯ ,ಬಿಟ್ಟು ನೀನು ದೂರ ಆಗಿದ್ರೂ ಪರವಾಗಿಲ್ಲ, ಸೇಫ್ ಆಗಿರು ಎನ್ನುವ ಪತ್ನಿ ಡೈಲಾಗ್ ನೋಡುಗರಿಗೆ ಕಾಡುತ್ತದೆ. ಶಿವಕಾರ್ತಿಕೇಯನ್ ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಜೀವಿಸಿದ್ದಾರೆ. ಸಾಯಿ ಪಲ್ಲವಿ, ಅವರ ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರವನ್ನು ರಾಜ್‍ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. ಭುವನ್ ಅರೋರಾ, ರಾಹುಲ್ ಬೋಸ್ ಮುಂತಾದವರು ನಟಿಸಿದ್ದಾರೆ. ಇಂಡಿಯಾಸ್ ಮೋಸ್ಟ್ ಫಿಯರ್‍ಲೆಸ್ ಪುಸ್ತಕದಲ್ಲಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಅವರು ಮೇಜರ್ ವರದರಾಜನ್ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಅದರಲ್ಲಿನ ಅಂಶಗಳನ್ನು ತೆಗೆದುಕೊಂಡು ನಿರ್ದೇಶಕ ರಾಜ್‍ಕುಮಾರ್ ಪೆರಿಯಸಾಮಿ ಕಥೆ ಬರೆದು, ನಿರ್ದೇಶಿಸಿದ್ದಾರೆ.

ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ, ಸಿ.ಎಚ್.ಸಾಯಿ ಛಾಯಾಗ್ರಹಣ ಮತ್ತು ಆರ್. ಕಲೈವನನ್ ಸಂಕಲನವಿರುವ ಸಿನಿಮಾವನ್ನು ಕಮಲ್ ಹಾಸನ್ ರಾಜ್ ಕಮಲ್ ಫಿಲ್ಮ್ಸ್ ಇಂಟನ್ರ್ಯಾಷನಲ್, ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ದೀಪಾವಳಿ ಹಬ್ಬಕ್ಕೆ ಕನ್ನಡ, ತಮಿಳು, ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಮರನ್ ಸಿನಿಮಾ ತೆರೆಕಾಣಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin