ಜೂನಿಯರ್ ಎನ್‍ಟಿಆರ್, ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರ ೨೦೨೬ರ ಜೂನ್ 25ಕ್ಕೆ ಬಿಡುಗಡೆ

ತೆಲುಗಿನ ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‍ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‍ನ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ “# ಎನ್‍ಟಿಆರ್ ನೀಲ್ ” ತಾತ್ಕಾಲಿಕ ಶೀರ್ಷಿಕೆ ಸಿನಿಮಾ, 2026ರ ಜೂನ್‍ನಲ್ಲಿ ತೆರೆಗೆ ಬರಲಿದೆ. ಈಗಾಗಲೇ ಶೂಟಿಂಗ್ ಹಂತದಲ್ಲಿರುವ ಈ ಸಿನಿಮಾ, ಅಷ್ಟೇ ವೇಗವಾಗಿ ಚಿತ್ರೀಕರಣದಲ್ಲಿಯೂ ನಿರತವಾಗಿದ್ದು, ಅಧಿಕೃತವಾಗಿ ರಿಲೀಸ್ ದಿನಾಂಕ ಘೋಷಣೆ ಮಾಡಿದೆ.
“ಕೆಜಿಎಫ್” ಸರಣಿ ಮತ್ತು “ಸಲಾರ್” ಮೂಲಕ ಈಗಾಗಲೇ ನಿರೀಕ್ಷೆಗೆ ಕಿಚ್ಚು ಹಚ್ಚಿರುವ ಪ್ರಶಾಂತ್ ನೀಲ್, ಮೆಗಾ ಪ್ರಾಜೆಕ್ಟ್ ಮೂಲಕ ಆಗಮಿಸಲು ಸಿದ್ಧರಾಗಿದ್ದಾರೆ.ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್ ಟಿಆರ್ ಆಟ್ರ್ಸ್ ಬ್ಯಾನರ್ ಅಡಿಯಲ್ಲಿ ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿ ಕೃಷ್ಣ ಕೊಸರಾಜು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈಗಾಗಲೇ ಕೇವಲ ಫಸ್ಟ್ ಲುಕ್ ಮೂಲಕವೇ ಈ ಆಕ್ಷನ್ ಪ್ಯಾಕ್ಡ್ ಸಿನಿಮಾ ಸುದ್ದಿಯಾಗಿತ್ತು. ಆದರೆ, ಹೆಚ್ಚಿನ ಅಪ್‍ಡೇಟ್ ಮಾತ್ರ ಹೊರಬಿದ್ದಿರಲಿಲ್ಲ. ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಭುವನ್ ಗೌಡ ಛಾಯಾಗ್ರಹಣ ನಿರ್ವಹಿಸಿದರೆ, ರವಿ ಬಸ್ರೂರ್ ಸಂಗೀತ ಸಂಯೋಜಿಸುತ್ತಾರೆ. ನಿರ್ಮಾಣ ವಿನ್ಯಾಸ ಚಲಪತಿ ಅವರದ್ದಾಗಿದೆ.
Good https://is.gd/N1ikS2
Very good https://is.gd/N1ikS2