Kamal Haasan - Shankar combination film Indian Part-2 to hit the screens in June

ಕಮಲ್ ಹಾಸನ್-ಶಂಕರ್ ಜೋಡಿಯ ಇಂಡಿಯನ್ ಪಾರ್ಟ್-2 ಜೂನ್‍ನಲ್ಲಿ ತೆರೆಗೆ - CineNewsKannada.com

ಕಮಲ್ ಹಾಸನ್-ಶಂಕರ್ ಜೋಡಿಯ ಇಂಡಿಯನ್ ಪಾರ್ಟ್-2 ಜೂನ್‍ನಲ್ಲಿ ತೆರೆಗೆ

ಉಳಗನಾಯಗನ್ ಕಮಲ್ ಹಾಸನ್ ಹಾಗೂ ದುಬಾರಿ ನಿರ್ದೇಶಕ ಎಂಬ ಖ್ಯಾತಿ ಪಡೆದಿರುವ ಕಮಲ್ ಹಾಸನ್ ಜೋಡಿಯ ಬಹು ನಿರೀಕ್ಷಿತ ಸಿನಿಮಾ ಇಂಡಿಯನ್-2. 1996ರಲ್ಲಿ ”ಇಂಡಿಯನ್”' ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಸೇನಾಪತಿ ಪಾತ್ರದಲ್ಲಿ ಕಮಲ್ ಹಾಸನ್ ಅವರು ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿ ಇಂಡಿಯನ್ 2′ ಸಿನಿಮಾ ಮೂಡಿಬರುತ್ತಿದೆ.

ಸಣ್ಣದೊಂದು ಝಲಕ್ ಮೂಲಕ ಭಾರೀ ನಿರೀಕ್ಷೆ ಹೆಚ್ಚಿಸಿರುವ ಇಂಡಿಯನ್ -2 ಸಿನಿಮಾಗೆ ಚಿತ್ರಪ್ರೇಮಿಗಳು ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಇದೀಗ ಸೇನಾಪತಿ ಪುನರ್ ಆಗಮನಕ್ಕೆ ಸಜ್ಜಾಗಿದ್ದು, ಜೂನ್ ತಿಂಗಳಲ್ಲಿ ಕಮಲ್ ಹಾಗೂ ಶಂಕರ್ ಜೋಡಿಯ ಚಿತ್ರ ತೆರೆಗೆ ಬರ್ತಿದೆ. ಆದರೆ ಯಾವ ದಿನ ಇಂಡಿಯನ್ ಸೀಕ್ವೆಲ್ ಬಿಡುಗಡೆಯಾಗಲಿದೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ.

ಅನಿರುದ್ಧ್ ರವಿಚಂದರ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ಮತ್ತುರೆಡ್ ಜೈಂಟ್ ಮೂವೀಸ್’ ಸಂಸ್ಥೆಗಳ ಮೂಲಕ `ಇಂಡಿಯನ್ 2′ ಸಿನಿಮಾ ನಿರ್ಮಾಣವಾಗಿದೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರನು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಹಾನಿಯನ್ನು ಈ ಸಿನಿಮಾ ಒಳಗೊಂಡಿದೆ. ಕಮಲ್ ಹಾಸನ್ ಮಾತ್ರವಲ್ಲದೇ ಅನೇಕ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕಾಜಲ್ ಅಗರ್ವಾಲ್, ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಶನ್ ಗ್ರೋವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೆಹಲಿ ಗಣೇಶ್, ಗುರು ಸೋಮಸುಂದರಂ, ಜಯಪ್ರಕಾಶ್, ವೆನ್ನೆಲ ಕಿಶೋರ್, ಮನೋಬಾಲಾ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin