Mega Star Chiranjeevi wins the hearts of his fans

ಅಭಿಮಾನಿಗಳ ಹೃದಯ ಗೆದ್ದ ಮೆಗಾ ಸ್ಟಾರ್ ಚಿರಂಜೀವಿ - CineNewsKannada.com

ಅಭಿಮಾನಿಗಳ ಹೃದಯ ಗೆದ್ದ ಮೆಗಾ ಸ್ಟಾರ್ ಚಿರಂಜೀವಿ

ತೆರೆಮೇಲೆ ಮಾತ್ರವಲ್ಲದೆ ತೆರೆಹಿಂದೆಯೂ ಮೆಗಾಸ್ಟಾರ್ ಚಿರಂಜೀವಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ರಾಜೇಶ್ವರಿ ಎಂಬುವವರು ಚಿರು ಡೈಹಾರ್ಡ್ ಫ್ಯಾನ್. ಮೆಗಾಸ್ಟಾರ್ ಮೇಲಿನ ಅಭಿಮಾನದಿಂದಾಗಿ ಸುಮಾರು 300 ಕಿಲೋಮೀಟರ್ ಸೈಕಲ್ ತುಳಿದು ತನ್ನಷ್ಟಿದ ತಾರೆಯನ್ನು ಭೇಟಿಯಾಗಿ ಖುಷಿಪಟ್ಟಿದ್ದಾರೆ.

ರಾಜೇಶ್ವರಿ ಅದೋನಿಯವರು. ಅದೋನಿಯಿಂದ ಹೈದ್ರಾಬಾದ್‍ಗೆ ಸೈಕಲ್ ನಲ್ಲಿ ಆಗಮಿಸಿದ್ದಾರೆ. ಬರೋಬ್ಬರಿ 300 ಕಿಲೋಮೀಟರ್ ಸೈಕಲ್ ಸವಾರಿಯಲ್ಲಿ ಬಂದ ರಾಜೇಶ್ವರಿಯವರನ್ನು ಅಷ್ಟೇ ಪ್ರೀತಿಯಿಂದ ಚಿರಂಜೀವಿ ತಮ್ಮ ಮನೆಗೆ ಸ್ವಾಗತಿಸಿದ್ದಾರೆ.

ಅಭಿಮಾನಿ ರಾಜೇಶ್ವರಿ ಅಭಿಮಾನ ಕಂಡು ಚಿರಂಜೀವಿಯೇ ಪುಳಕಿತರಾಗಿದ್ದಾರೆ. ತನ್ನ ಇಷ್ಟದ ಅಭಿಮಾನಿಯಿಂದ ರಾಕಿ ಕಟ್ಟಿಸಿಕೊಂಡ ಮೆಗಾಸ್ಟಾರ್ ಅಣ್ಣನ ಸ್ಥಾನ ನೀಡಿದ್ದಾರೆ. ರಾಜೇಶ್ವರಿಯಂತಹ ಅಪರೂಪದ ಅಭಿಮಾನಕ್ಕೆ ಚಿರಂಜೀವಿ ಚಿಕ್ಕ ಕಾಣಿಕೆ ಕೂಡ ನೀಡಿದ್ದಾರೆ. ರಾಜೇಶ್ವರಿಗೆ ಸೀರೆ ಕೊಟ್ಟ ಸತ್ಕರಿಸಿದ್ದಾರೆ.

ಇನ್ನೊಂದು ಹೆಜ್ಜೆ ಮುಂದೆ ಇಟ್ಟ ಚಿರಂಜೀವಿ ರಾಜೇಶ್ವರಿ ಅವರ ಇಬ್ಬರ ಮಕ್ಕಳ ಶಿಕ್ಷಣದ ಜವಾಬ್ದಾರಿ ಕೂಡ ಹೊತ್ತು ಕೊಂಡಿದ್ದಾರೆ. ಇದಪ್ಪ ಅಭಿಮಾನದ ಪರಾಕಾಷ್ಠೆ. ಒಬ್ಬ ಅಭಿಮಾನಿಗೆ ಸಿಗಬೇಕಾದ ಪ್ರೀತಿ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin