Ponniyin Selvan' Sequel 2 is set to hit the screens

ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ತೆರೆಗೆ ಬರಲು ಮುಹೂರ್ತ ಫಿಕ್ಸ್ - CineNewsKannada.com

ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ತೆರೆಗೆ ಬರಲು ಮುಹೂರ್ತ ಫಿಕ್ಸ್

ಐತಿಹಾಸಿಕ ಸ್ಟೋರಿ, ಸ್ಟಾರ್ ಡೈರೆಕ್ಟರ್, ಸ್ಟಾರ್ ತಾರಾಗಣ, ಅದ್ದೂರಿ ಮೇಕಿಂಗ್, ಸಂಗೀತ ಮಾಂತ್ರಿಕನ ಮ್ಯೂಸಿಕ್ ಇದೆಲ್ಲವೂ ಒಳಗೊಂಡ ಸಿನಿಮಾವೇ ‘ಪೊನ್ನಿಯಿನ್ ಸೆಲ್ವನ್’. ಸೆಪ್ಟೆಂಬರ್ 30ರಂದು ಮೊದಲ ಸೀಕ್ವೆಲ್ ರಿಲೀಸ್ ಆಗಿ ವರ್ಲ್ಡ್ ವೈಡ್ ಸೂಪರ್ ಸಕ್ಸಸ್ ಕಂಡ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು 2023 ಏಪ್ರಿಲ್ 28ಕ್ಕೆ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’. ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ರಂತ ದಿಗ್ಗಜ ಕಲಾವಿದರ ಸಮಾಗಮವಿರುವ ಈ ಚಿತ್ರ ಪ್ರೇಕ್ಷಕ ಮಹಾಶಯರಿಂದಲೂ ಬಹುಪರಾಕ್ ಪಡೆದುಕೊಂಡಿತ್ತು.

ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ತೆರೆ ಮೇಲೆ ಕಮಾಲ್ ಮಾಡಿತ್ತು. ಎಲ್ಲೆಡೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಇದೀಗ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ. ಸೀಕ್ವಲ್ 2 ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.

ಲೇಖಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಐತಿಹಾಸಿಕ ಕಾದಂಬರಿ ಆಧಾರಿತ ಚಿತ್ರವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಭಾಗ ವರ್ಲ್ ವೈಡ್ ಅಭೂತ ಪೂರ್ವ ರೆಸ್ಪಾನ್ಸ್ ಪಡೆದುಕೊಂಡಿತ್ತು.

ಇದೀಗ ಆ ಗೆಲುವಿನ ಸಂಭ್ರಮದಲ್ಲೇ ಎರಡನೇ ಸೀಕ್ವೆಲ್ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಿದೆ ಚಿತ್ರತಂಡ. ಏಪ್ರಿಲ್ 28ಕ್ಕೆ ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಬರಲಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಈ ಅದ್ದೂರಿ ಸಿನಿಮಾ ನಿರ್ಮಾಣವಾಗಿದ್ದು, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin