ಪ್ರಭಾಸ್ ಅಭಿನಯದ ‘ದಿ ರಾಜಾಸಾಬ್’ ಟ್ರೈಲರ್ ಸೆಪ್ಟಂಬರ್ 29ರಂದು ಬಿಡುಗಡೆ
ರೆಬೆಲ್ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಹಾರರ್-ಫ್ಯಾಂಟಸಿ ಡ್ರಾಮಾ ‘ದಿ ರಾಜಾಸಾಬ್’ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ನಿರೀಕ್ಷೆಯೂ ದುಪ್ಪಟ್ಟಾಗಿದೆ. ಕಳೆದ ವರ್ಷ, ಚಿತ್ರತಂಡವು ಪ್ಯಾನ್-ಇಂಡಿಯಾ ಝಲಕ್ ಮೂಲಕ ಕುತೂಹಲ ಕೆರಳಿಸಿತ್ತು. ಸೆಪ್ಟಂಬರ್ 29ರಂದು ಟ್ರೈಲರ್ ಬಿಡುಗಡೆಗೆ ಸಜ್ಜಾಗಿದೆ
ಮಾರುತಿ ನಿರ್ದೇಶನದ ಬಹುನಿರೀಕ್ಷಿತ ‘ದಿ ರಾಜಾಸಾಬ್’ ಸಿನಿಮಾದ ಟ್ರೈಲರ್ ಇದೇ ಸೆಪ್ಟೆಂಬರ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ, ಇದಾದ ಮೇಲೆ ಅಂತಿಮವಾಗಿ ಟ್ರೇಲರ್ ಎಲ್ಲೆಡೆ ಯಾವಾಗ, ಯಾವ ದಿನದಂದು ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ.

ಟಿ.ಜಿ. ವಿಶ್ವ ಪ್ರಸಾದ್ ಬಂಡವಾಳ ಹೂಡುತ್ತಿದ್ದಾರೆ. ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಿನಿಮಾ ಐದು ಭಾಷೆಗಳಲ್ಲಿ ಸಿದ್ಧವಾಗಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮನ್ ಎಸ್ ಅವರ ಸಂಗೀತ ಮತ್ತು ಮೈನವಿರೇಳಿಸುವ ದೃಶ್ಯಗಳು ಸಿನಿಮಾದ ಹೈಲೈಟ್ಸ್.
ರೆಬೆಲ್ ಸ್ಟಾರ್ ಪ್ರಭಾಸ್ ವರ್ಚಸ್ಸು ಸಂಪೂರ್ಣ ಬದಲಾಗಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತಾರಾಗಣದ ಚಿತ್ರದಲ್ಲಿ ಸಂಜಯ್ ದತ್, ಜರೀನಾ ವಹಾಬ್, ಬೋಮನ್ ಇರಾನಿ, ನಿಧಿ ಅಗರವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಬಂಡವಾಳ ಹೂಡಿದ್ದಾರೆ.

