Thiruveer-Aishwarya Rajesh starrer film begins

ತಿರುವೀರ್- ಐಶ್ವರ್ಯಾ ರಾಜೇಶ್ ನಟನೆಯ ಚಿತ್ರ ಆರಂಭ - CineNewsKannada.com

ತಿರುವೀರ್- ಐಶ್ವರ್ಯಾ ರಾಜೇಶ್ ನಟನೆಯ ಚಿತ್ರ ಆರಂಭ

ತಿರು ವೀರ್, ಐಶ್ವರ್ಯಾ ರಾಜೇಶ್ ನಟನೆಯ ಪ್ರೊಡಕ್ಷನ್ಸ್ ನಂ. 2 ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ಮೂಲಕ ಬ್ಲಾಕ್‍ಬಸ್ಟರ್ ‘ಪ್ರಿ ವೆಡ್ಡಿಂಗ್ ಶೋ’ ಚಿತ್ರದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಯುವ ನಾಯಕ ತಿರು ವೀರ್ ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ.’ಸಂಕ್ರಾಂತಿಕಿ ವಸ್ತುನ್ನಾಂ’ ಚಿತ್ರದ ಯಶಸ್ಸಿನ ನಂತರ ನಾಯಕಿ ಐಶ್ವರ್ಯಾ ರಾಜೇಶ್ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ತೆಲುಗು, ತಮಿಳು, ಮಲಯಾಳಂ ಜೊತೆ ಕನ್ನಡದಲ್ಲೂ ಚಿತ್ರ ತೆರೆಗೆ ಬರಲಿದೆ, ಭರತ್ ದರ್ಶನ್ ಚಿತ್ರಕ್ಕೆ ನಿರ್ದೇಶನವಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಮಹೇಶ್ವರ ರೆಡ್ಡಿ ಮೂಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ

ಗಟ್ಟಿ ಕಂಟೆಂಟ್ ಮೂಲಕವೇ ಹೆಸರುವಾಸಿಯಾದ ತಿರು ವೀರ್, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಮಸೂದ’ ದಿಂದ ಇತ್ತೀಚಿನ ‘ಪ್ರಿ ವೆಡ್ಡಿಂಗ್ ಶೋ’ ವರೆಗೆ ಬಗೆಬಗೆ ಕಥೆಗಳ ಮೂಲಕ ಜಗಮೆಚ್ಚಿಸಿದ್ದಾರೆ. ‘ರಜಾಕಾರ್’ ಮತ್ತು ಪೊಲಿಮೆರಾ’ ಚಿತ್ರಗಳಿಗೆ ಕೆಲಸ ಮಾಡಿದ ಛಾಯಾಗ್ರಾಹಕ ಸಿ ಎಚ್ ಕುಶೇಂದರ್ ಇಲ್ಲಿಯೂ ಕ್ಯಾಮರಾ ನಿರ್ವಹಿಸಲಿದ್ದಾರೆ.

ಭರತ್ ಮಂಚಿರಾಜು ಸಂಗೀತ ಸಂಯೋಜನೆ ಮಾಡಲಿದ್ದಾರೆ. ‘ಬಲಗಂ’ ಖ್ಯಾತಿಯ ತಿರುಮಲ ಎಂ. ತಿರುಪತಿ ಕಲಾ ನಿರ್ದೇಶಕರಾಗಿದ್ದರೆ, ‘ಕಾ’ ಖ್ಯಾತಿಯ ಶ್ರೀ ವರಪ್ರಸಾದ್ ಎಡಿಟರ್. ಚಿತ್ರದ ಚಿತ್ರೀಕರಣ ಈ ತಿಂಗಳ 19 ರಿಂದ ಪ್ರಾರಂಭವಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin