Tovino Thomas - Kayadu Lohar starrer 'Palli Chattambi' to release on April 15

ಟೊವಿನೋ ಥಾಮಸ್ – ಕಯಾದು ಲೋಹರ್ ನಟನೆಯ `ಪಳ್ಳಿ ಚಟ್ಟಂಬಿ’ ಚಿತ್ರ ಏಪ್ರಿಲ್ 15ಕ್ಕೆ ತೆರೆಗೆ - CineNewsKannada.com

ಟೊವಿನೋ ಥಾಮಸ್ – ಕಯಾದು ಲೋಹರ್ ನಟನೆಯ `ಪಳ್ಳಿ ಚಟ್ಟಂಬಿ’ ಚಿತ್ರ ಏಪ್ರಿಲ್ 15ಕ್ಕೆ ತೆರೆಗೆ

ಮಲಯಾಳಂ ನಟ ಟೊವಿನೋ ಥಾಮಸ್ ಹಾಗೂ ಕನ್ನಡದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಯಾದು ಲೋಹರ್ ಅಭಿನಯದ `ಪಳ್ಳಿ ಚಟ್ಟಂಬಿ’ ಸಿನಿಮಾ ಏಪ್ರಿಲ್ 15ರಂದು ತೆರೆಗೆ ಬರಲು ಸಿದ್ಧವಾಗಿದೆ. ಮಲಯಾಳಂ ಜೊತೆಗೆ ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರುತ್ತಿರುವುದು ವಿಶೇಷ.

`ಪಳ್ಳಿ ಚೆಟ್ಟಂಬಿ’ ಚಿತ್ರವನ್ನು ನೌಫಲ, ಬ್ರಿಜೇಶ್, ಚಾಣುಕ್ಯ ಚೈತನ್ಯ, ಚರಣ್ ನಿರ್ಮಾಣ ಮಾಡಿದ್ದಾರೆ. ಡಿಜೋ ಜೊಸೆ ಆಂಟೋನಿ ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಕರ್ನಾಟಕದಲ್ಲಿ ಚಿತ್ರದ ಹಂಚಿಕೆ ಹಕ್ಕನ್ನು ಪಡೆದುಕೊಂಡಿದೆ.

ಟೊವಿನೋ ಥಾಮಸ್ ಮಾತನಾಡಿ. `ನನ್ನ ಸಿನಿಮಾಗಳು ಕರ್ನಾಟಕದಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ನನ್ನ ಸಿನಿಮಾಗಳಿಗೆ ಸಾಕಷ್ಟು ಪ್ರೀತಿ ತೋರಿಸಿದ್ದೀರಿ. ಕರ್ನಾಟಕ ನನಗೆ ಹೊಸದಲ್ಲ. ಬಾಲ್ಯದಿಂದಲೂ ಇಲ್ಲಿ ಬರುತ್ತಿದ್ದೇನೆ. ನಮ್ಮ ಶಾಲಾ ದಿನಗಳಲ್ಲಿ ಪ್ರವಾಸಕ್ಕೆಂದು ಬೆಂಗಳೂರು ಹಾಗೂ ಮೈಸೂರಿಗೆ ಕರೆದುಕೊಂಡು ಬರುತ್ತಿದ್ದರು. ಗೆಳೆಯರು ಇಲ್ಲಿ ಓದಿದ್ದಾರೆ. ಆಗ ಬಂದು ನಾನು ಇಲ್ಲಿ ಉಳಿದುಕೊಳ್ಳುತ್ತಿದ್ದೆ. “ಡಿಯರ್ ಫ್ರೆಂಡ್” ಸಿನಿಮಾದ ಶೂಟ್ ಇಲ್ಲೇ ನಡೆದಿತ್ತು. ಆಗ ಒಂದು ತಿಂಗಳು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೆ. ಆಗ ಇಲ್ಲಿನ ಫುಡ್ ಅನ್ನು ಎಂಜಾಯ್ ಮಾಡಿದೆ ಎಂದಿದ್ಧಾರೆ

‘ಈ ಸಿನಿಮಾ ಆರಂಭಿಸಿದ್ದು ಸಾಕಷ್ಟು ಹಿಂದೆಯೇ. ಚಿತ್ರದ ಶೂಟಿಂಗ್ ಹಿಂದಿನ ವರ್ಷ ನಡೆಯಿತು. ನಿಮಗೆ ಸಿನಿಮಾ ಇಷ್ಟ ಆಗುತ್ತದೆ ಎಂಬುದು ಭಾವನೆ ಎಂದು ಹೇಳಿದರು.

ಕನ್ನಡದ ಬಗ್ಗೆಯೂ ಅವರು ಮಾತನಾಡಿದರು. `ನಾವು ಕೇವಲ ನೆರೆಹೊರೆಯವರಲ್ಲ, ನಾವು ರಕ್ತ ಸಂಬಂಧಿಗಳು. ದಕ್ಷಿಣದ ಎಲ್ಲಾ ಭಾಷೆಗಳ ಮಧ್ಯೆ ಸಾಮ್ಯತೆ ಇದೆ’ ಎಂದು ಖುಷಿಯಿಂದ ಸಿನಿಮಾದಲ್ಲಿ ಕರ್ನಾಟಕದ ಕಲೆ ಯಕ್ಷಗಾನದ ಬಳಕೆ ಕೂಡ ಆಗಿದೆ ಎಂಬುದು ವಿಶೇಷ. ಹೀಗಾಗಿ, ಕನ್ನಡದ ಸಂಭಾಷಣೆ ಕೂಡ ಸಿನಿಮಾದಲ್ಲಿ ಬರುತ್ತದೆ ಎಂದು
ಎಂದರು

ನಿರ್ದೇಶಕ ಡಿಜೋ ಜೊಸೆ ಆಂಟೋನಿ ಮಾತನಾಡಿ ಅವರು ಜನ ಗಣ ಮನ' ರೀತಿಯ ಸಿನಿಮಾಗಳನ್ನು ನೀಡಿದವರು. ಅವರು ಈಗ ಒಂದು ಹಳ್ಳಿಯ ಕಥೆಯನ್ನು ಹಿಡಿದು ಬಂದಿದ್ದಾರೆ.ಪಳ್ಳಿ ಚಟ್ಟಂಬಿ’ ಪಾತ್ರದಲ್ಲಿ ನನ್ನ ಗೆಳೆಯ ಟೊವಿನೋ ನಟಿಸಿದ್ದಾರೆ. ರೆಬೇಕಾ ಪಾತ್ರದಲ್ಲಿ ಕಯಾದು ಅಭಿನಯಿಸಿದ್ದಾರೆ. 2018ರಲ್ಲಿ ನನ್ನ ಮೊದಲ ಸಿನಿಮಾ ಮಾಡಿದೆ. ಆ ಬಳಿಕ ಈ ಸಿನಿಮಾ ಕೆಲಸ ಆರಂಭಿಸಿದೆ. ಕಥೆ ಕೇಳುತ್ತಿದ್ದಂತೆ ಟೊವಿನೋಗೆ ಕರೆ ಮಾಡಿದೆ. ಅವರು ಮಾಡೋಣ ಎಂದರು. 2026ರ ಏಪ್ರಿಲ್ 15 ರಂದು ಸಿನಿಮಾ ತೆರೆಗೆ ಬರುತ್ತಿದೆ. 1950ರ ಕಾಲಘಟ್ಟದ ಕಥೆ ಸಿನಿಮಾದಲ್ಲಿದೆ. ಇದು ಹಳ್ಳಿಯಲ್ಲಿ ನಡೆಯುವ ಕಥೆ’ ಎಂದರು

ಕನ್ನಡದಲ್ಲಿ ಮುಗಿಲ್ ಪೇಟೆ' ಸಿನಿಮಾ ಮಾಡಿದ್ದ ಕಯಾದು ಲೋಹರ್, ಈಗಪಳ್ಳಿ ಚೆಟ್ಟಂಬಿ’ಗೆ ನಾಯಕಿ. ಈ ಸಿನಿಮಾ ವಿಶೇಷ ಸಿನಿಮಾ. ರೆಬೇಕಾ ರೀತಿಯ ಪಾತ್ರ ಮಾಡಬೇಕು ಎಂಬ ಕನಸು ಇತ್ತು. ಶೇ.100ರಷ್ಟು ಶ್ರಮ ಹಾಕಿದ್ದೇನೆ.ಮುಗಿಲ್ ಪೇಟೆ’ ಸಿನಿಮಾ ಮಾಡಿದ್ದೆ. ಅಲ್ಲಿಂದ ಪ್ರಯಾಣ ಶುರುವಾಯಿತು. ನನ್ನ ಮೊದಲ ಸಿನಿಮಾಗೆ ತೋರಿಸಿದ ಪ್ರೀತಿಯನ್ನು ಈ ಸಿನಿಮಾಗೂ ತೋರಿಸಿ’ ಎಂದರು.

ಈ ಚಿತ್ರಕ್ಕೆ ಎಸ್ ಸುರೇಶ್ ಬಾಬು ಕಥೆ ಬರೆದಿದ್ದಾರೆ. ಟಿಜೋ ಟಾಮಿ ಛಾಯಾಗ್ರಹಣ, ಶ್ರೀಜಿತ್ ಸಾರಂಗ್ ಸಂಕಲನ, ಜೇಕ್ಸ್ ಬಿಜೋಯ್ ಸಂಗೀತ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin