Son of Muttanna audio rights sold for huge amount

ದಾಖಲೆ ಬೆಲೆಗೆ ‘ಸನ್ ಆಫ್ ಮುತ್ತಣ್ಣ’ ಆಡಿಯೋ ಹಕ್ಕು ಮಾರಾಟ - CineNewsKannada.com

ದಾಖಲೆ ಬೆಲೆಗೆ ‘ಸನ್ ಆಫ್ ಮುತ್ತಣ್ಣ’ ಆಡಿಯೋ ಹಕ್ಕು ಮಾರಾಟ

ದೇವರಾಜ್ ಎರಡನೇ ಪುತ್ರ ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಇತ್ತೀಚೆಗೆ ಅನೌನ್ಸ್ ಆದ, ಪ್ರಣಂ ನಟನೆಯ ಸನ್ ಆಫ್ ಮುತ್ತಣ್ಣ’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಪ್ರಣಂ ಈ ಸಿನಿಮಾ ಮೂಲಕ ಹಿಟ್ ಕೊಡ್ತಾರೆ ಅನ್ನೋ ಭರವಸೆ ಕೂಡ ಹೆಚ್ಚಾಗಿದೆ.

ಇದೇ ಸಮಯದಲ್ಲಿ ಸನ್ ಆಫ್ ಮುತ್ತಣ್ಣ’ ಆಡಿಯೋ ದಾಖಲೆ ಬೆಲೆಗೆ A2 ಸಂಸ್ಥೆಗೆ ಮಾರಾಟವಾಗಿದ್ದು, ಸಿನಿಮಾದ ಮೇಲಿರೋ ನಿರೀಕ್ಷೆ ದುಪ್ಪಟ್ಟಾಗಿದೆ.

ಸನ್ ಆಫ್ ಮುತ್ತಣ್ಣ’ ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಲ್ಲರ ಗಮನ ಸೆಳೀತಿದೆ. ಮಗ ಪ್ರಣಂ ದೇವರಾಜ್ ಹೊಸ ಚಿತ್ರಕ್ಕೆ ದೇವರಾಜ್ ಶುಭ ಹಾರೈಸಿದ್ದಾರೆ. `ಸನ್ ಆಫ್ ಮುತ್ತಣ್ಣ’ ಮೂಲಕ ಶ್ರೀಕಾಂತ್ ಹುಣಸೂರ್ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ಶೀರ್ಷಿಕೆ ಹೇಳುತ್ತಿರುವಂತೆ ಅಪ್ಪ-ಮಗನ ಭಾಂದವ್ಯ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಇನ್ನೂ ಸಿನಿಮಾದಲ್ಲಿ ಹಲವು ಹಿರಿಯ ನಟರು ಪಾತ್ರ ಮಾಡ್ತಿರೋದು ವಿಶೇಷ.

ಪುರಾತನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಸಚ್ಚಿನ್ ಬಸ್ರೂರು ಸಂಗೀತವಿದೆ `ಸನ್ ಆಫ್ ಮುತ್ತಣ್ಣ’ ಸಿನಿಮಾದ ಹಾಡುಗಳು ದಾಖಲೆ ಬೆಲೆಗೆ ಅಂದ್ರೆ ಅಂದಾಜು 47ಲಕ್ಷಕ್ಕೆ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಹೇಳಲಾಗ್ತಿದೆ.

ಯೋಗರಾಜ್ ಭಟ್ರು, ಜಯಂತ್ ಕಯ್ಕಿಣಿ, ಕವಿರಾಜ್, ಚೇತನ್ ಕುಮಾರ್ ಅವರ ಸಾಹಿತ್ಯ ಈ ಸಿನಿಮಾದ ಹಾಡುಗಳಿಗಿದೆ. ಸದ್ಯ ಸಂಗೀತಕ್ಕೆ ಇಷ್ಟು ಪವರ್ ಇದ್ಮೇಲೆ A2 ಸಂಸ್ಥೆ ಹಾಡುಗಳಿಗೆ ಫಿದಾ ಆಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin